ಚೌಕಿದಾರ್ ಹುಷಾರಾಗಿದ್ದರೆ ಸಾವಿರಾರು ಕೋಟಿ ಲೂಟಿ‌ ಹೊಡೆದವರು ದೇಶ ಬಿಟ್ಟು ಓಡಿ ಹೋಗುತ್ತಿರಲಿಲ್ಲ. ಖರ್ಗೆ

0
88

ಕಲಬುತಗಿ: ದೇಶದ ಚುಕ್ಕಾಣಿ ಹಿಡಿದ ನಾಯಕ ಎಲ್ಲ ವರ್ಗದ, ಧರ್ಮದ ಜನರನ್ನು ಒಟ್ಟಾಗಿ ತೆಗೆದುಕೊಂಡು ಅಭಿವೃದ್ದಿ ಪಥದತ್ತ ದೇಶವನ್ನು ಕೊಂಡೊಯ್ಯಬೇಕು. ಆದರೆ ಕೆಲವರಿಗೆ ಜನರು ಒಗ್ಗಟ್ಟಾಗಿರುವುದು ಬೇಕಿಲ್ಲ ಅಂತವರಿಂದ ಜನಹಿತಕ್ಕೆ ಧಕ್ಕೆಯಾಗುತ್ತದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ತೇಸ್ ಅಭ್ಯರ್ಥಿ ಹಾಗೂ ಲೋಕಸಭೆಯ ಕಾಂಗ್ರೇಸ್ ನಾಯಕ ಶ್ರೀ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.

ಅವರು ಅಫಜಲಪೂರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಯಾವುದೇ ದೂರದೃಷ್ಠಿ ಹೊಂದಿರದ ಪ್ರಧಾನಿ ನರೇಂದ್ರ ಮೋದಿ ತಮ್ಮ ಅವೈಜ್ಞಾನಿಕ ಯೋಜನೆಗಳ ಮೂಲಕ ಬಡವರ ಬದುಕನ್ನು ದುರ್ಬರಗೊಳಿಸಿದರು‌. ಪತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿಯ ಭರವಸೆ ಹಾಗೂ ಪ್ರತಿಯೊಬ್ಬರ ಖಾತೆಗೆ ರೂ 15 ಲಕ್ಷ ಹಣ ಹಾಕುವ ಮಾತುಗಳು ಮೌಲ್ಯ ಕಳೆದುಕೊಂಡಿವೆ ಎಂದು ದೂರಿದರು.

ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡುವಂತೆ ಸುಮಾರು ಸಲ ಒತ್ತಾಯಿಸಿದರು ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿಲ್ಲ ಎಂದು ಖರ್ಗೆ ಸುಳ್ಳಿನ ಮೇಲೆ ಸವಾರಿ ಮಾಡಿದ ಮೋದಿ ಐದು ವರ್ಷ ಕಾಲ ನೂಕಿ ದೇಶದ ಹಿನ್ನೆಡೆಗೆ ಕಾರಣರಾದರು ಎಂದು ಹರಿಹಾಯ್ದರು.

ವಾಜಪೇಯಿ, ಮೋರಾರ್ಜಿ ದೇಸಾಯಿ, ಲಾಲ್ಬಹಾದ್ದೂರ್ ಶಾಸ್ತ್ರಿ, ದೇವೇಗೌಡ ಮುಂತಾದವರು ಈ ದೇಶದ ಪ್ರಧಾನಿಯಾಗಿದ್ದವರೆ ಹಾಗಾದರೆ ಅವರು ದೇಶಕ್ಕಾಗಿ ಏನೂ ಮಾಡಲಿಲ್ಲವೇ? ಮೋದಿ ಈ ಎಲ್ಲರನ್ನೂ ಟೀಕಿಸುತ್ತಾರೆಯೇ ಎಂದರು.

ರಾತ್ರೋ ರಾತ್ರಿ ನೋಟ್ ಬ್ಯಾನ್ ಮಾಡಿದ ಮೋದಿ ಭ್ರಷ್ಟಾಚಾರ ಹಾಗೂ ಭಯೋತ್ಪದನೆ ನಿಂತು ಹೋಗುತ್ತದೆ ಎಂದು ದೇಶದ ಜನರನ್ನು ನಂಬಿಸಿದರು. ಆದರೆ, ಸಧ್ಯದ ಸ್ಥಿತಿ‌ ನೋಡಿದರೆ ಯಾವುದೂ ಕಮ್ಮಿಯಾಗಿಲ್ಲ ಎಂದು ಕುಟುಕಿದರು.

ಚೌಕಿದಾರ್ ಹುಷಾರಾಗಿದ್ದರೆ ಸಾವಿರಾರು ಕೋಟಿ ಲೂಟಿ‌ ಹೊಡೆದ ಸಿರಿವಂತರು ದೇಶ ಬಿಟ್ಟು ಓಡಿ ಹೋಗುತ್ತಿರಲಿಲ್ಲ. ಯಾವಾಗ ಅಂತ ಲೂಟಿಕೋರರು ಓಡಿಹೋಗಿದ್ದಾರೆಂದರೆ, ಚೌಕಿದಾರನೇ ಕಳ್ಳನಾಗಿದ್ದಾನೆ ಎಂದು ಟೀಕಿಸಿದರು.

ಪ್ರಧಾನಮಂತ್ರಿ ಹುದ್ದೆ ಮನೆಯವರೆಗೆ ಬಂದರೂ ಸೋನಿಯಾಗಾಂಧೀ ಅದನ್ನು ನಯವಾಗಿ ತಿರಸ್ಕರಿಸಿದರು‌. ಆದರೆ ಮೋದಿ ಅವರದೇ ಪಕ್ಷದ ಹಿರಿಯರಾದ ಅಡ್ವಾಣಿ ಹಾಗೂ ಜೋಷಿ ಅವರನ್ನು ಮೂಲೆಗುಂಪು ಮಾಡಿ ತಮ್ಮ ಅಧಿಕಾರದ ದಾಹವನ್ನು ತೋರಿಸಿದರು ಎಂದರು.

ನಿಮ್ಮ ಅನ್ನದ ಋಣವನ್ನು ನಾನು ತೀರಿಸುತ್ತಲೇ ಬಂದಿದ್ದೇವೆ. ಆದರೆ, ಕೆಲ ನಾಯಕರು ನನ್ನನ್ನು ಸೋಲಿಸಲು ತುಂಬಾ ಪರಿಶ್ರಮಪಡುತ್ತಿದ್ದಾರೆ ಆದರೆ ಎಲ್ಲಿಯವರೆಗೆ ನಿಮ್ಮ ಆಶೀರ್ವಾದ ನನ್ನ ಮೇಲಿರುವವರೆಗೆ ಯಾರೂ ನನ್ನನ್ನು ಸೋಲಿಸಲಾಗದು ಎಂದು ಆತ್ಮವಿಶ್ವಾಸದಿಂದ ನುಡಿದರು.

ನನ್ನನ್ನು ಸೋಲಿಸಲು ನಾನೇನು ಅಭಿವೃದ್ದಿ ಕೆಲಸ ಮಾಡಿಲ್ಲವೇ? ಅಥವಾ ಜಾತಿ ಜಾತಿಗಳ ನಡುವೆ ಜಗಳ ಹಚ್ಚಿದ್ದೇನಾ? ಭ್ರಷ್ಟಾಚಾರ ಮಾಡಿದ್ದೇನಾ? ಯಾಕೆ ನನ್ನನ್ನು ಸೋಲಿಸಬೇಕು ? ಎಂದು ಪ್ರಶ್ನೆ ಮಾಡಿದ ಅವರು ಬದಲಿಗೆ ಸಂಸತ್ತಿನಲ್ಲಿ ನನ್ನ ಜನಪರ ನಿಲುವುಗಳನ್ನು ಪ್ರತಿಪಾದಿಸಿದ್ದೇನೆ. ಇದನ್ನು ನೀವೆಲ್ಲ ಪರಿಗಣಿಸಿ ನನಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

” ನಾನು ಏಳು ವರ್ಷದವನಾಗಿದ್ದಾಗಲೇ ಸತ್ತು ಹೋಗಬೇಕಿತ್ತು. ಆದರೂ ಬದುಕಿಕೊಂಡು ಸುಮಾರು 5 ದಶಕಗಳಿಂದ ನಿಮ್ಮ ಸೇವೆ ಮಾಡಿಕೊಂಡು ಬರುತ್ತಿದ್ದೇನೆ. ನನಗೀಗ 75 ಆಗಿದೆ. ನನ್ನ ರಾಜಕೀಯ ಜೀವನದಲ್ಲಿ ಎಲ್ಲವನ್ನೂ ಎದುರಿಸಿಕೊಂಡೇ ಬಂದಿದ್ದೇನೆ. ಈಗ ಹೆದರುವ ಪ್ರಶ್ನೆಯೇ ಇಲ್ಲ. ಮತ್ತೊಮ್ಮೆ ನೀವು ಆಶೀರ್ವಾದ ಮಾಡಿದರೆ ಸಂಸತ್ತಿನಲ್ಲಿ ನಿಮ್ಮ ಪರವಾಗಿ ತಲೆ ಎತ್ತಿ ಮಾತನಾಡುತ್ತೇನೆ” ಎಂದು ಭಾವುಕರಾಗಿ ನುಡಿದರು.

ವೇದಿಕೆಯ ಮೇಲೆ ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ‌. ಶಾಣಪ್ಪ, ಶಾಸಕ ಎಂ.ವೈ. ಪಾಟೀಲ್ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here