ಜಗತ್ತಿಗೆ ರಾಮಾಯಣ ಗ್ರಂಥ ಕೊಟ್ಟ ದಾರಿ ದೀಪ ಮಹರ್ಷಿ ವಾಲ್ಮೀಕಿ: ವರದಾನೇಶ್ವರ ಶ್ರೀ

0
34

ಸುರಪುರ: ಜಗತ್ತಿಗೆ ಆದರ್ಶವೆಂದು ಚಿರಪರಿಚಿತರಾಗಿರುವ ರಾಮನಂತಹ ಮಹಾನ್ ಪುರುಷನನ್ನು ತನ್ನ ರಾಮಾಯಣ ಗ್ರಂಥದ ಮೂಲಕ ಪರಿಚಯಿಸಿ ಜಗತ್ತಿಗೆ ದಾರಿ ದೀಪವಾದವರು ಶ್ರೀ ಮಹರ್ಷಿ ವಾಲ್ಮೀಕಿ ಎಂದು ಗೋಲಪಲ್ಲಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ವರದಾನೇಶ್ವರ ಸ್ವಾಮೀಜಿ ಮಾತನಾಡಿದರು.

ತಾಲೂಕಿನ ಬಿಜಾಸಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ,ಪ್ರತಿ ಮನೆಯಲ್ಲಿ ರಾಮಾಯಣ ಗ್ರಂಥವಿರಬೇಕು,ಅದು ಆದರ್ಶದ ಸಂಕೇತವಾಗಿದೆ.ಅಂತಹ ಮಹಾನ್ ಗ್ರಂಥವನ್ನು ಬರೆದುಕೊಟ್ಟ ಮಹರ್ಷಿ ವಾಲ್ಮೀಕಿಯು ಜಗತ್ತಿನ ಮಹಾನ್ ದಾರ್ಶನಿಕರಾಗಿದ್ದಾರೆ ಎಂದರು.

Contact Your\'s Advertisement; 9902492681

ಜ್ಯೋತಿ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಲಕ್ಷ್ಮೀಪುರ ಶ್ರೀಗಿರ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ರಾಮನನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿಗೆ ರಾಮನಷ್ಟೆ ಪೂಜ್ಯತೆ ನೀಡಬೇಕು.ಅದರಂತೆ ಇಂದು ದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ,ಅದರ ಪಕ್ಕದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರ ಮಂದಿರವನ್ನು ಕಟ್ಟಿಸಬೇಕೆಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ನಂತರ ನಡೆದ ಕಾರ್ಯಕ್ರಮದಲ್ಲಿ ಅನೇಕ ಜನ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಲೆಕ್ಕಾಧಿಕಾರಿ ಶಿವಪ್ಪ ನಾಯಕ ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಗಂಗಾಧರ ನಾಯಕ ತಿಂಥಣಿ ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಎಎಸ್‌ಐ ಭಾಗಣ್ಣ ಡಾ: ಶಿವಲಿಂಗಪ್ಪ ನಾಯಕ ವೆಂಕಟೇಶ ನಾಯಕ ಆಲಮೇಲ ಬಿಜೆಪಿ ಎಸ್ಟಿ ವಿಭಾಗದ ಉಪಾಧ್ಯಕ್ಷ ಶರಣು ನಾಯಕರ ಬೈರಿಮಡ್ಡಿ ವೆಂಕಟೇಶ ಬೇಟೆಗಾರ ನಿಂಗಪ್ಪ ನಾಯಕ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here