ಜಾಲಿಬೆಂಚಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

0
42

ಸುರಪುರ: ತಾಲೂಕಿನ ಜಾಲಿಬೆಂಚಿಯ ಸರಕಾರಿ ಹಿರಿಂii ಪ್ರಾಥಮಿಕ ಶಾಲೆಯ ಆವರಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.

ನಂತರ ಮುಖಂಡ ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ ಮಾತನಾಡಿ,ಶ್ರೀ ಮಹರ್ಷಿ ವಾಲ್ಮೀಕಿಯವರ ಬರೆದ ರಾಮಾಯಣ ಗ್ರಂಥವನ್ನು ಇಡೀ ಜಗತ್ತೇ ಪೂಜಿಸುತ್ತದೆ.ಅಂತಹ ಗ್ರಂಥ ಬರೆದ ಮಹಾನ್ ವ್ಯಕ್ತಿ ಶ್ರೀ ಮಹರ್ಷಿ ವಾಲ್ಮೀಕಿಯು ನಮ್ಮ ದೇಶದಲ್ಲಿ ಜನಸಿದವರು ಎಂಬುದು ಈ ಮಣ್ಣಿನ ಪುಣ್ಯದ ಸಂಗತಿಯಾಗಿದೆ.ಸೂರ್ಯ ಚಂದ್ರರಿರುವ ವರೆಗೆ ರಾಮಾಯಣ ಗ್ರಂಥವು ಹಾಗು ರಾಮನ ಆದರ್ಶವು ಇರಲಿದೆ.ರಾಮನ ಹೆಸರು ಇರುವವರೆ ವಾಲ್ಮೀಕಿ ಮಹರ್ಷಿಯ ಹೆಸರು ಇರಲಿದೆ.

Contact Your\'s Advertisement; 9902492681

ಇಂದು ಎಲ್ಲೆಡೆ ರಾಮನ ಮಂದಿರವನ್ನು ನಿರ್ಮಿಸಲಾಗುತ್ತಿದೆ ಆದರೆ ರಾಮನನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿಯ ಮಂದಿರಗಳು ಹೆಚ್ಚು ನಿರ್ಮಾಣವಾಗುತ್ತಿಲ್ಲ. ಮುಖ್ಯವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರದ ಪಕ್ಕದಲ್ಲಿ ಮಹರ್ಷಿ ವಾಲ್ಮೀಕಿಯ ಮಂದಿರವೂ ನಿರ್ಮಾಣ ಮಾಡಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ್ ಶಿಕ್ಷಕರಾದ ಮಲ್ಲಿನಾಥ ಪರ್ವಿನಾ ಬೇಗಂ ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಹಿರೇಮಠ ಸಹಾಯಕಿ ಈರಮ್ಮ ಹಾಗು ಮುಖಂಡರಾದ ಅಬ್ಬಾಸಲಿ ಮುಜೇವಾರ ಅಂಬ್ರೇಶ ಅಚ್ಚರಡ್ಡಿ ಅಂಬ್ರೇಶ ಸಾಹುಕಾರ ದೇವಿಂದ್ರ ನಾಯಕ ಭೀಮು ನಾಯಕ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here