ಬಸವೇಶ್ವರ ಮೂರ್ತಿ ವಿರೂಪಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸಲು ಆಗ್ರಹ

0
186

ಶಹಾಬಾದ:ಬೆಳಗಾವಿ ಜಿಲ್ಲೆ ರಾಮಗುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಬಸವೇಶ್ವರ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿ ಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ನಗರದ ಅಖಿಲ ಭಾರತ ವೀರಶೈವ ಮಹಾಸಭಾ, ಹಳೆಶಹಾಬಾದ ವೀರಶೈವ ಸಮಾಜ ಹಾಗೂ ಬಸವಾಭಿಮಾನಿಗಳ ವತಿಯಿಂದ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿಲಾಯಿತು.

ಇಡೀ ಮನುಜ ಕಲಕ್ಕೆ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಿದ ಮತ್ತು ಮಾನವೀಯತೆ ಸಂದೇಶ ಸಾರಿದ ಬಸವಣ್ಣನವರ ಮೂರ್ತಿಯನ್ನು ಭಗ್ನಗೊಳಿಸಿರುವುದು ನಿಜಕ್ಕೂ ಖಂಡನಾರ್ಹವಾದುದು. ಇಡೀ ವಿಶ್ವವೇ ಬಸವಣ್ಣನವರ ವಿಚಾರಗಳನ್ನು ಒಪ್ಪಿಕೊಂಡಿದೆ.ಅಲ್ಲದೇ ಇಂಗ್ಲೇಡ್ನಲ್ಲಿ ಬಸವಣ್ಣನವರ ಮೂರ್ತಿಯನ್ನು ಸ್ಥಾಪನೆ ಮಾಡಿ ಅವರನ್ನು ಗೌರವಿಸಲಾಗಿದೆ.ಆದರೆ ನಮ್ಮ ರಾಜ್ಯದಲ್ಲಿ ಇಂತಹ ಮಹಾ ಮಾನವತವಾದಿ, ವಿಶ್ವಗುರು ಬಸವಣ್ಣನವರ ಬಗ್ಗೆ ತಿಳಿಯದೇ ಈ ರೀತಿಯ ಕೆಲಸ ಮಾಡಿರುವುದು ಸರಿಯಿಲ್ಲ.ಕೂಡಲೇ ಪ್ರತಿಮೆಗಳ ಬಳಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು.ಕಿಡಿಗೇಡಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.ಅಲ್ಲದೇ ಮೂರ್ತಿಯನ್ನು ಪುನರ್ ಸ್ಥಾಪನೆ ಮಾಡಬೇಕು. ಇಲ್ಲದಿದ್ದರೇ ನಿರಂತರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಗರದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ವಿಜಯಕುಮಾರ ಮುಟ್ಟತ್ತಿ,ಶಿವಕುಮಾರ ಇಂಗಿನಶೆಟ್ಟಿ, ಅಣವೀರ ಇಂಗಿನಶೆಟ್ಟಿ,ಅರುಣಕುಮಾರ ಪಟ್ಟಣಕರ್,ಸೂರ್ಯಕಾಂತ ಕೋಬಾಳ, ಮಲ್ಲಿನಾಥ ಗಚ್ಚಿನಮಠ,ಶಂಕರ ಕುಂಬಾರ, ಈಶ್ವರ ಇಂಗಿನಶೆಟ್ಟಿ, ವಿಶ್ವರಾಧ್ಯ ಬೀರಾಳ, ಶರಣಬಸಪ್ಪ ಜೇರಟಗಿ, ಅಣ್ಣಪ್ಪ ದಸ್ತಾಪೂರ,ಸಾಹೇಬಗೌಡ ಬೋಗುಂಡಿ, ನಾಗಣ್ಣ ರಾಂಪೂರೆ, ಸೋಮಶೇಖರ ನರಿಬೋಳ, ಸೋಮಶೇಖರ ಅಣಬಿ, ವಿರೇಶ ಬಂದಳ್ಳಿ, ಚನ್ನಪ್ಪ ಕುಂಬಾರ, ಶಾಂತಯ್ಯಸ್ವಾಮಿ, ರೇವಣಸಿದ್ದಪ್ಪ,ಸಂಗಮೇಶ ಪಟ್ಟೇದಾರ, ಆನಂದ ಸೂಲಹಳ್ಳಿ, ರಾಜಶೇಖರ ಬೆಳಗುಂಪಾ, ರಾಜು ಕೋಬಾಳ,ಮಹಾರುದ್ರ ಇಂಗಿನಶೆಟ್ಟಿ, ಶಿವಪ್ರಸಾದ ಸೇರಿದಂತೆ ಇತರರು ಇದ್ದರು.

ಹಳೆ ಶಹಾಬಾದ: ವೀರಶೈವ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ, ಗಿರಿಮಲ್ಲಪ್ಪ ವಳಸಂಗ, ವೈಜನಾಥ ಹುಗ್ಗಿ, ಮಲ್ಲಿಕಾರ್ಜುನ ವಾಲಿ, ಬಸವರಾಜ ತರನಳ್ಳಿ, ಕುಪೇಂದ್ರ ತುಪ್ಪದ, ಚನ್ನೂ ಸಿನ್ನೂರ, ಕುಪೇಂದ್ರ ತುಪ್ಪದ, ಸಂತೋಷ ಪಾಟೀಲ, ನಿರಂಜನ ತುಪ್ಪದ ಸೇರಿದಮರೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here