ಹೋಂಡಾ ಶೋ ರೂಂನಲ್ಲಿ ಬೆಂಕಿ ಅವಘಡ: 20ಕ್ಕೂ ಹೆಚ್ಚು ಬೈಕ್ ಭಸ್ಮ

0
88

ತುಮಕೂರು: ಕಳೆದ ರಾತ್ರಿ ಹೋಂಡಾ ಶೋ ರೂಂನಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ 20ಕ್ಕೂ ಹೆಚ್ಚು ಬೈಕ್ ಗಳು ಸುಟ್ಟು ಕರಕಲಾಗಿರುವ ಘಟನೆ ನಗರದ ಬಿ.ಎಚ್‌. ರಸ್ತೆಯಲ್ಲಿರುವ ಹೋಂಡಾ ಶೋ ರೂಂನಲ್ಲಿ ನಡೆದಿದೆ.

ಈ ಶೋ ರೂಂನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕಳೆದ ರಾತ್ರಿ 10ರವರೆಗೂ ಪೂಜೆ ನಡೆದಿತ್ತು ಎಂದು ತಿಳಿದುಬಂದಿದೆ. ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸಮಯ ಪ್ರಜ್ಞೆಯಿಂದ ಘಟನಾ ಸ್ಥಳಕ್ಕೆ ಅಗ್ವಿಶಾಮಕ ದಳ ಸಿಬ್ಬಂದಿ ಅಗಮಿಸಿ ಬೆಂಕಿ ನಂದಿಸಿದರಿಂದ ಹೆಚ್ಚಿನ ಅನಾಹುತ ತಪ್ಪಿಸಿದರು ಎನ್ನಲಾಗಿದೆ.

Contact Your\'s Advertisement; 9902492681

ಆದರೂ ಘಟನೆಯಲ್ಲಿ 25ಕ್ಕೂ ಅಧಿಕ ಬೈಕ್‌ ಗಳು, ಕಂಪ್ಯೂಟರ್‌ , ಪೀಠೋಪಕರಣಗಳು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸೊತ್ತು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here