ಸುರಪುರ ಉಪ ವಿಭಾಗದಲ್ಲಿ ಅಸ್ಪೃಶ್ಯತೆ ಆಚರಣೆಗೆ ಅವಕಾಶ ನೀಡುವುದಿಲ್ಲ: ವೆಂಕಟೇಶ ಹುಗಿಬಂಡಿ

0
44

ಸುರಪುರ: ಯಾರಿಗಾದರು ಸುರಪುರ ಉಪ ವಿಭಾಗದಲ್ಲಿ ಅಸ್ಪೃಶ್ಯತೆ ಆಚರಣೆ ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡಿ,ಯಾವುದೇ ಕಾರಣಕ್ಕೂ ಅಸ್ಪೃಶ್ಯತೆ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಸುರಪುರ ಉಪ ವಿಭಾಗದ ಉಪ ಅಧೀಕ್ಷಕ ವೆಂಕಟೇಶ ಹುಗಿಬಂಡಿ ಮಾತನಾಡಿದರು.

ಯಾದಗಿರಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಸುರಪುರ ಉಪ ವಿಭಾಗ ಮಟ್ಟದ ದಲಿತ ದಿನಾಚರಣೆಯ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿ,ಯಾವುದೇ ಗ್ರಾಮದಲ್ಲಿ ದಲಿತರಿಗೆ ತೊಂದರೆ ಮಾಡಿದರೆ ತಿಳಿಸಿ,ಅಲ್ಲದೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದಾಗ ತಡ ಮಾಡದೆ ದೂರು ಸ್ವೀಕರಿಸಲಾಗುವುದು,ಇನ್ನು ಬುದ್ಧ ವಿಹಾರದ ಬಳಿಯಲ್ಲಿನ ಅಕ್ರಮ ಚಟುವಟಿಕೆ ನಡೆಸುವವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ಇದಕ್ಕು ಮುನ್ನ ಅನೇಕ ಜನ ದಲಿತ ಸಂಘಟನೆಗಳ ಮುಖಂಡರು ಮಾತನಾಡಿ,ಕೆಂಭಾವಿ ಮತ್ತು ಹುಣಸಗಿ ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸಲು ವಿಳಂಭ ಮಾಡುವುದಾಗಿ ಅಲ್ಲದೆ ಅರಕೇರಾ ಜೆ ಗ್ರಾಮದಲ್ಲಿನ ದಲಿತರ ಮೇಲೆ ಹಲ್ಲೆ ನಡೆಯುವದಕ್ಕೆ ಪಡಿವಾಣ ಹಾಕುವಂತೆ ಮತ್ತು ಗೋಲ್ಡನ್ ಕೇವ್ ಗವಿ ಬುದ್ಧ ವಿಹಾರದ ಬಳಿಯಲ್ಲಿ ಪುಂಡರ ದಾಂಧಲೆ ಹಾಗು ಅಕ್ರಮ ಚಟುವಟಿಕೆ ನಡೆಸುವುದನ್ನು ತಡೆಯುವಂತೆ ಹಾಗು ನಗರದ ಬಸ್ ನಿಲ್ದಾಣ ಬಳಿಯಲ್ಲಿನ ಡಾ:ಬಿ.ಆರ್.ಅಂಬೇಡ್ಕರ ಮೂರ್ತಿ ಸುತ್ತಲು ಖಾಸಗಿ ವಾನಗಳ ನಿಲುಗಡೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು.

ಸಭೆಯಲ್ಲಿ ಸುರಪುರ ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ಹುಣಸಗಿ ವೃತ್ತ ನಿರೀಕ್ಷಕ ದೌಲತ್ ಎನ್.ಕೆ ಶ್ರೀನಿವಾಸ ಅಲ್ಲಾಪುರ ಹಾಗು ಉಪ ವಿಭಾಗದ ಎಲ್ಲಾ ಪಿಎಸ್‌ಐಗಳು ಹಾಗು ದಲಿತ ಸಂಘಟನೆಗಳ ಮುಖಂಡರಾದ ರಮೇಶ ದೊರೆ ಆಲ್ದಾಳ ವೆಂಕಟೇಶ ಬೇಟೆಗಾರ ನಾಗಣ್ಣ ಕಲ್ಲದೇವನಹಳ್ಳಿ ರಾಹುಲ್ ಹುಲಿಮನಿ ವೆಂಕೋಬ ದೊರೆ ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ ಮಾಳಪ್ಪ ಕಿರದಹಳ್ಳಿ ಭೀಮಾಶಂಕರ ಬಿಲ್ಲವ್ ಶಿವಲಿಂಗ ಹಸನಾಪುರ ದಾನಪ್ಪ ಲಕ್ಷ್ಮೀಪುರ ದುರ್ಗಪ್ಪ ನಾಗರಾಳ ಬಸವರಾಜ ಮುಷ್ಠಳ್ಳಿ ನಿಂಗಣ್ಣ ಗೋನಾಲ ರಾಯಪ್ಪ ಸಾಲಿಮನಿ ದೇವಿಂದ್ರಪ್ಪ ಕೆಂಭಾವಿ ಶರಣು ಅನಪುರ ಅಶೋಕ ಗೋಗಿ ರಾಮಚಂದ್ರ ವಾಗಣಗೇರಾ ರಾಮಣ್ಣ ಶೆಳ್ಳಿಗಿ ಗೋಪಾಲ ವಜ್ಜಲ ಮರೆಪ್ಪ ಜಾಲಿಬೆಂಚಿ ಭೀಮರಾಯ ಕಡಿಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here