ಕಲಬುರಗಿ: ರಾಜ್ಯ ಸರ್ಕಾರ ವಿವಿಧ ಪ್ರಧಿಕಾರ, ನಿಗಮ ಮಂಡಳಿ ರಚಿಸುತ್ತಿರುವುದು ಸ್ವಾಗತ ಆದರೆ ಅವು ಅನುಷ್ಠಾನಕ್ಕೆ ಬರಬೇಕು ಎಂದು ಶಾಸಕ ಡಾ. ಅಜಯಸಿಂಗ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜೈ ಕನ್ನಡಿಗರ ಸೇನೆ ರಾಜ್ಯೋತ್ಸವ ನಿಮಿತ್ತ ಬುಧವಾರ ಆಯೋಜಿಸಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ಕಲ್ಯಾಣ ಕರ್ನಟಕ ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಧಿಕಾರ ರಚನೆ ಕೇವಲ ರಾಜಕೀಯ ಉದ್ದೇಶ ಮತ್ತು ಚುನಾವಣೆ ದೃಷ್ಟಿಯಿಂದ ರಚಿಸಬಾರದು, ಪ್ರಾಧಿಕಾರ ರಚನೆಗೆ ನಮ್ಮ ವಿರೋಧವಿಲ್ಲ ಅಭಿವೃದ್ಧಿಗೆ ಬೇಕಿರುವ ಅನುದಾನ ಪ್ರಾಧಿಕಾರಗಳಿಗೆ ನೀಡಬೇಕು ಎಂದರು.
ಸೊಂತ ಮಠದ ಶ್ರೀ ದತ್ತದಿಗಂಬರ ಶಂಕರಲಿಂಗ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಎಂಎಲ್‌ಸಿ ಶಶೀಲ ನಮೋಶಿ, ಸೇನೆ ರಾಜ್ಯಾಧ್ಯಕ್ಷ ದತ್ತಾತ್ರೇಯ ಭಾಸಗಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ನೀಲಕಂಠರಾವ ಮೂಲಗೆ, ಪಾಲಿಕೆ ಮಾಜಿ ಸದಸ್ಯ ಲತಾ ರಾಠೋಡ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ, ಬಾಬುರಾವ ಮೇಲಕೇರಿ, ಕನನಡ ಭೂಮಿ ಜಾಗೃತ ಸಮಿತಿ ಅಧ್ಯಕ್ಷ ಲಿಂಗರಾಜ ಸಿರಗಾಪುರ, ಸೇನೆಯ ಜಿಲ್ಲಾಧ್ಯಕ್ಷ ಆನಂದ ಕೇಶ್ವರ, ರಿತೇಶ ಮುಗನೂರ, ಸಂಜಿವಕುಮಾರ, ಪ್ರಶಾಂತ, ಯುವರಾಜ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕಲ್ಯಾಣ ಕರ್ನಾಟಕ ಕಾಯಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.