’ಸಂವಿಧಾನದ ಆಶಯಗಳು ಜನ ಸಾಮಾನ್ಯರಿಗೆ ತಲುಪಲಿ’: ಸಾಹಿತಿ ಡಾ ಸ್ವಾಮಿರಾವ ಕುಲಕರ್ಣಿ

0
155

ಕಲಬುರಗಿ: ದೇಶದ ಸಮಗ್ರ ವಿಕಾಸಕ್ಕೆ ರೂಪಿತಗೊಂಡ ಭಾರತೀಯ ಸಂವಿಧಾನದ ಆಶಯಗಳನ್ನು ಜನ ಸಮಾನ್ಯರಿಗೆ ತಲುಪಲಿ ಎಂದು ಸಾಹಿತಿ ಡಾ ಸ್ವಾಮಿರಾವ ಕುಲಕರ್ಣಿ ಅವರು ಹೇಳಿದರು.

ನಗರದ ಕಲಾ ಮಂಡಳದಲ್ಲಿ ರವಿವರ್ಮ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ ’ಕವಿಗೋಷ್ಠಿ ಹಾಗೂ ಸಂಗೀತ ಸುಧೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಡಾ ಬಾಬಾಸಾಹೇಬ ಅಂಬೇಡ್ಕರವರು ಇಡೀ ಭಾರತೀಯ ಸಮುದಾಯಕ್ಕೆ ಒಪ್ಪುವಂತ ಸಂವಿಧಾನ ರಚನೆ ಮಾಡಿದ್ದಾರೆ. ಬಾಬಾ ಸಾಹೇಬರು ಸಂವಿಧಾನದ ಮೂಲಕ ಕಂಡ ಪ್ರಭುದ್ಧ ಭಾರತದ ಕನಸ್ಸುಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಅನೇಕ ಕಠಿಣ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಜಗತ್ತಿಗೆ ಮಾದರಿಯಾಗುವ ಸಂವಿಧಾನವನ್ನು ದೇಶಕ್ಕೆ ಕೊಟ್ಟಿದ್ದಾರೆ ಎಂದು ಅದರ ಮೂಲ ಪರಿಕಲ್ಪನೆಗಳ ಬಗ್ಗೆ ತಿಳಿಸಿದರು.

ಗು,ವಿ,ಕ ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ, ರಮೇಶ ಲಂಡನಕರ್ ಅಧ್ಯಕ್ಷತೆ ವಹಿಸಿ, ಇಂದು ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕಾದರೆ ನಮ್ಮ ಸಂವಿಧಾನವೇ ಕಾರಣ. ಸ್ವಾತಂತ್ರ್ಯ ಸಮಾನತೆ ಹಾಗೂ ಭಾತೃತ್ವದ ತತ್ವಗಳು ಅನುಮಾನಾಸ್ಪದವಾಗಿ ಕಾಡುತ್ತಿವೆ. ಇಂದಿಗೂ ಸಂವಿಧಾನದ ಆಶಯಗಳ ಅನಿಷ್ಠಾನಗೊಳಿಸದೇ ಬದಲಾವಣೆಯ ಹುನ್ನಾರದ ಮಾತುಗಳು ಕೇಳುತ್ತಿದ್ದೇವೆ. ಇದು ಅಪಾಯಕಾರಿ ಸಂಗತಿ. ಆದರೆ ಅದರ ಗುರಿ ಉದ್ದೇಶಗಳು ನಿಜವಾಗಿಯೂ ಜಾರಿ ಆಗುತ್ತಿಲ.ಇನ್ನೂ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ ಎಂದು ಅವರು ಕಳವಳ ವ್ಯಕ್ತ ಪಡಿಸಿದರು.

ಖ್ಯಾತ ವೈದ್ಯ ಡಾ ಎಸ್, ಎಸ್, ಗುಬ್ಬಿ, ಭೀಮ ಆರ್ಮಿ ರಾಜ್ಯಾಧ್ಯಕ್ಷ ಎಸ್, ಎಸ್, ತವಡೆ ಅವರು ಮಾತನಾಡಿದರು. ಸಾಹಿತಿ ಶಿವಶಾಂತ ರೆಡ್ಡಿ ಮುನ್ನೋಳ್ಳಿ ವೇದಿಕೆಯಲ್ಲಿದ್ದರು. ಸಂಘದ ಕಾರ್ಯದರ್ಶಿ ಶಿವಶಂಕರ ಬಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಪದಕ ಪಡೆದ ಪಿಎಸ್,ಐ ಭಾರತಿಬಾಯಿ ಧನ್ನಿ, ಡಾ ದೀಪಕ ಸುಖೆ, ಕೊರೊನಾ ವಾರಿಯರ‍್ಸ್ ಗಳಾಗಿ ಸೇವೆ ಸಲ್ಲಿಸಿದ ಆಶೆ ಕಾರ್ಯಕರ್ತೆಯರಾದ ಭಾರತಬಾಯಿ ಕಿರಣಗಿ, ರೇಖಾ ಎಸ್ ಬೀಳಲಕರ ಅವರನ್ನು ಸೇವಾ ರತ್ನ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಕಲಾವಿದ ಸಿದ್ದಾರ್ಥ ಚಿಮ್ಮಾಇದ್ಲಾಯಿ, ಶ್ರೀಧರ ಹೊಸಮನಿ, ಸಿದ್ದಲಿಂಗ ಮಾಹೂರ ಅವರು ಸಂಗಗೀತ ಸುಧೆ ಕಾರ್ಯಕ್ರಮ ನಡೆಸಿ ಕೊಟ್ಟರು. ಎಂsಬಿ ನಿಂಗಪ್ಪ ನಿರೂಪಿಸಿ ವಂದಿಸಿದರು.

ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ ಅವರು ಸಂವಿಧಾನ ರಚನೆಯಲ್ಲಿ ತೋರಿದ ನಿಷ್ಠೆ, ಕಳಕಳಿ ಹಾಗೂ ಅದರ ಆಶಯಗಳು ಹೊಂದಿದ ಸ್ವರಚಿತ ಕವನಗಳು ಬೆಳಕು ಚೆಲ್ಲಿದವು. ಡಾ ರಾಜಶೇಖರ ಮಾಂಗ, ಧರ್ಮಣ್ಣ ಎಚ್, ಧನ್ನಿ, ಫರ್ವಿನ್ ಸುಲ್ತಾನ್, ಶಿವಶಂಕರ ಬಿ, ರೇಣುಕಾ ಡಾಂಗೆ, ಕವಿತಾ ಕಾವಳೆ, ಸುಧೀರ ಅನೂರಕರ, ಅಮೃತ ದೊಡ್ಡಮನಿ, ಶೈಲಾ ಎಸ್ ಹಿಟ್ನಳ್ಳಿ, ಎಚ್,ಎಸ್, ಬೇನಾಳ, ಸುನೀತಾ ಮಾಳಗೆ ಶಿವಲೀಲಾ ವಿಶ್ವಕರ್ಮ, ಕಾಶೀನಾಥ ಮುಖರ್ಜಿ, ಎಚ್ ಎಸ್ ಬರಗಾಲಿ, ಮಲ್ಲಿಕಾರ್ಜುನ ಜಾನೆ ಇತರರು ಕವನ ವಾಚಿಸಿ ಗಮನ ಸೆಳೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here