ಶೋಷಿತ ಸಮುದಾಯಗಳುಸಂವಿಧಾನದ ಸಂರಕ್ಷಣೆಗೆ ಮುಂದಾಗಬೇಕು: ನಿಜಲಿಂಗದೊಡ್ಮನಿ

0
167

ಜೇವರ್ಗಿ: ದೇಶದ ಶೋಷಿತ ಸಮುದಾಯಗಳು ಒಂದಾಗುವುದರ ಮೂಲಕ ಸಂವಿದಾನದ ಸಂರಕ್ಷಣೆಗೆ ಮುಂದಾಗಬೇಕು ಎಂದು ಸೊನ್ನ ಎಸ್ ಜಿ ಎಸ್ ವಿ ಪಪೂ ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಮನಿ ಕರೆ ನೀಡಿದರು.

ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಭಾರತ ಬಹುತ್ವದ ದೇಶವಾಗಿದೆ. ಎಲ್ಲಾ ಜಾತಿ, ವರ್ಗಗಳಿಗೆ ಸರಿಸಮನಾದ ಹಕ್ಕುಗಳು ನೀಡಲಾಗಿದೆ. ಸಾಮಾಜಿಕ, ಆರ್ಥಿಕವಾಗಿ ದಲಿತರು ಪ್ರಭಲರಾಗಬೇಕು. ಈ ದೇಶದ ಹಿತಕ್ಕಾಗಿ ಡಾ ಬಿ ಆರ್ ಅಂಬೇಡ್ಕರ್ ಅವರ ಶ್ರಮ ಅಪಾರವಾಗಿದೆ. ದೇಶದ ಸಮಸ್ತ ಶೋಷಿತ ಸಮುದಾಯಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ಬಾಬಾ ಸಾಹೇಬರು ಮಾಡಿದ್ದಾರೆ. ಖಡ್ಗದಿಂದ ಮಾಡದ ಕೆಲಸವನ್ನು ಪೆನ್ನಿನಿಂದ ಮಾಡಿದ್ದಾರೆ. ಇಡೀ ವಿಶ್ವದ ಬಹುತೇಕ ಸಂವಿಧಾನವನ್ನು ಅಧ್ಯಯನ ಮಾಡಿದ ಬಾಬಾ ಸಾಹೇಬರು ಸರ್ವಶ್ರೇಷ್ಠ ಸಂವಿಧಾನ ರಚಿಸಿದ್ದಾರೆ ಎಂದರು.

Contact Your\'s Advertisement; 9902492681

ಈ ವೇಳೆ ಬಸವಕಲ್ಯಾಣದ ದಮ್ಮನಾಗ ಭಂತೇಜಿ, ಪರಸಭೆ ಮುಖ್ಯಾಧಿಕಾರಿ ಲಕ್ಷ್ಮೀಶ, ಮರೆಪ್ಪ ಬಡಿಗೇರ, ಭೀಮರಾಯ ನಗನೂರ, ಪುಂಡಲಿಕ ಗಾಯಕವಾಡ, ಮಲ್ಲಣ ಕೊಡಚಿ, ಮರೆಪ್ಪ ಕೂಡಲಿಗಿ, ದವಲಪ್ಪ ಮದನ, ಪಂಡಿತ ಮದಗುಣಕಿ, ಸುಭಾಷ್ ಚನ್ನೂರ, ಜೆಟ್ಟೆಪ್ಪ ಕೊಬ್ಬಿನ್, ನಿಜಲಿಂಗ ದೊಡಮನಿ, ಶರಣಬಸವ ಕಲ್ಲಾ, ಶಿವುಬಾಯಿ ಕೊಂಬಿನ್, ಗಂಗಾಬಾಯಿ ಜಟ್ನಾಳ, ಶ್ರೀಹರಿ ಕರಕಿಹಳ್ಳಿ, ರವಿ ಕುರಳಗೇರಾ, ಶಾಂತಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಕೆಲ್ಲೂರ, ಸಿದ್ರಾಮ ಯಳಸಂಗಿ, ಕರೆಪ್ಪ ಹಿಪ್ಪರಗಿ, ರಾಜಶೇಖರ ಶಿಲ್ಪಿ, ಗೊಲ್ಲಾಳಪ್ಪ ಯಾತನೂರ, ಶಿವಶರಣ ಮಾರಡಗಿ, ಮಲ್ಲಮ್ಮ ಕೊಬ್ಬನ್, ಜಗದೇಶ ಜಟ್ನಾಕರ್,ದೇವಿಂದ್ರ ವರ್ಮಾ, ಶರಣು ಬಡಿಗೇರಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here