ಡಾ. ಚುಲಬುಲ್ ಗೆ ಶಾಸಕನಾಗಿಸುವ ಹಂಬಲ ಖಮರುಲ್ ಇಸ್ಲಾಂ ಹೊಂದಿದರು: ಸ್ವಾಮೀಜಿ

0
42

ಕಲಬುರಗಿ: ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಹಾಗೂ ಅಂಜುಮನ್ ತರಕಿ ಉರ್ದು ಹಿಂದ್ ಸಂಯುಕ್ತ ಆಶ್ರಯದಲ್ಲಿ ಕೆಬಿಎನ್ ಆಸ್ಪತ್ರೆ ಎದುರುಗಡೆ ಅಂಜುಮನ್ ತರಕಿ ಉರ್ದು ಹಿಂದ್ ಸಂಸ್ಥೆಯ ಆವರಣದಲ್ಲಿ ಸಂವಿಧಾನ ಸಮಪರ್ಣಾ ದಿನಾಚರಣೆ ಆಚರಿಸಲಾಯಿತು.

ಈ ವೇಳೆಯಲ್ಲಿ ಶ್ರೀಶೈಲ್ ಸಾರಂಗ ಮಠದ ಡಾ. ಮಹಾಂತ ಶಿವಾಚಾರ್ಯರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ. ಅಜಗರ್ ಚುಲಬುಲ್ ಅವರು ದಿವಾಂಗತ ಮಾಜಿ ಸಚಿವ ಖಮರುಲ್ ಇಸ್ಲಾಂ ತೀರ ಅಪ್ತರಾಗಿದರು, ಚುಲಬುಲ್ ಅವರು ಇಲ್ಲದೇ ಖಮರುಲ್ ಇಸ್ಲಾಂ ಅವರು ಒಂದು ಪತ್ರಕ್ಕೂ ಸಹಿಯು ಸಹ ಕಾಕುತ್ತಿರಲಿಲ್ಲ. ಇಸ್ಲಾಂ ಅವರು ಅವರ ಕೊನೆಕ್ಷಣದಲ್ಲು ಚುಲಬುಲ್ ಅವರನ್ನು ಬಿಟ್ಟಿರಲಿಲ್ಲ.

Contact Your\'s Advertisement; 9902492681

ಸರ್ವ ಧರ್ಮ ಹಾಗೂ ಸಮುದಾಯಗಳನ್ನು ತನ್ನೊಟ್ಟಿಗೆ ಕೊಂಡುಯುವಂತಹ ನಾಯಕತ್ವ ಗುಣ ಅಜಗರ್ ಚುಲಬುಲ್ ಹೊಂದಿರುವುದನ್ನು ಕಂಡು ಖಮರುಲ್ ಇಸ್ಲಾಂ ಸಾಹೇಬರು ಡಾ. ಚುಲಬುಲ್ ಅವರಿಗೆ ಶಾಸಕರಾಗಿಸುವ ಆಸೆ ಹೊಂದಿದರು ಎಂದು ಸ್ವಾಮೀಜಿ ಈ ಸಂದರ್ಭದಲ್ಲಿ ತಿಳಿಸಿದರು.

ನಂತರ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಉತ್ತರ ಕರ್ನಾಟಕ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಡಾ. ಮಹ್ಮದ್ ಅಜಗರ್ ಚುಲಬುಲ್ ಮಾತನಾಡಿ, ಜಿಹಾದ್ ಎಂಬುದು ಅತ್ಯಾಚಾರ, ಅನಾಚಾರ ಹಾಗೂ ದೌರ್ಜನ್ಯದ ವಿರುದ್ಧ ನಿಲ್ಲುವ ಗಟ್ಟಿತನವನ್ನು ಜಿಹಾದ್ ಎಂದು ಕರೆಯುತ್ತಾರೆ.

ಇಸ್ಲಾಂ ಧರ್ಮವನ್ನು ಟಾರ್ಗೆಟ್ ಮಾಡಲು ಲವ್ ಜಿಹಾದ್ ಬಳಸಲಾಗುತ್ತಿದೆ. ಪದದ ಅರ್ಥವನ್ನು ಅವಹೇಳನ ಮಾಡಲಾಗುತ್ತಿದೆ ಎಂದರು.

ಆರ್.ಎಸ್.ಎಸ್ ಹಿಂದೂ ರಾಷ್ಡ್ರದ ಪರಿಕಲ್ಪನೆ ಸಂವಿಧಾನದ ಆಸಯಕ್ಕೆ ಧಕ್ಕೆ ತರುವ ಹುನ್ನಾರ ಭಾರತ ವಿವಿಧ ಧರ್ಮಗಳನ್ನು ಏಕತೆಯನ್ನು ಬಿಂಬಿಸುವುದ ಈ ಸಂವಿಧಾನ. ಹಿಂದೂ ರಾಷ್ಟ್ರ ಹಲವು ಧರ್ಮ, ಜಾತಿಗಳಿಗೆ ಒಡಕ್ಕು ಉಂಟುಮಾಡುವ ಮೂಲಕ ವಿವಾದ ಸೃಷ್ಟಿಸುವ ಸಂಚು ಇದೆ ಎಂದು ಹಿರಿಯ ನ್ಯಾಯವಾದಿ ಸಾದತ್ ಹುಸೇನ್ ಉಸ್ತಾದ್ ಕಾರ್ಯಮದ ಮುಖ್ಯ ತಿಥಿಗಳಾಗಿಮಿಸಿ ಸಂವಿಧಾನದ ಆರ್ಟಿಕಲ್ಸ್ 14,15, 19 ಹಾಗೂ 25 ಬಗ್ಗೆ ವಿವರಿಸಿದರು.

ಸಂವಿಧಾನದ ಮೂಲಕ ಆಯ್ಕೆಯಾಗಿ ಸಂವಿಧಾನ ದುರ್ಬಲವಾಗಿಸುವ ಸಂಚು ಇಂದಿನ ರಾಜಕರಾಣಿಗಳು ಮಾಡುತ್ತಿದ್ದಾರೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಅಸಮಧಾನ ವ್ಯಕ್ತಪಡಿದರು. ಇನ್ನೋರ್ವ ನ್ಯಾಯವಾದಿ ಮಜರ್ ಹುಸೇನ್, ಮಾತನಾಡಿ ಸಂವಿಧಾನ ಆರ್ಟಿಕಲ್ಸ್ 20, 26,28, 30 ಹಾಗೂ 32ಯ ಮೂಲ ಆಶಯ ವಿವರಿಸಿದರು.

ಇತ್ತೀಚೆಗೆ ಸಂವಿಧಾನವನ್ನು ಅಗತ್ಯಗೆ ತಕ್ಕಂತೆ ಬಳಸಿಕೊಳಲಾಗುತ್ತಿದೆ. ಹಂತ ಹಂತವಾಗಿ ಸಂವಿಧಾನವನ್ನು ನಾಶ ಮಾಡುವ ತಯಾರಿಗಳು ನಡೆಯುತ್ತಿವೆ. ನಮ್ಮ ದೇಶದ ಸಂವಿಧಾನಕ್ಕೆ ಧಕ್ಕೆಯಾಗುತ್ತಿದೆ. ಸಂವಿಧಾನ ವಿಲ್ಲದ ದೇಶ ಉಳಿಯಲು ಸಾಧ್ಯವಿಲ್ಲ. ಅದಕ್ಕಾಗಿ ಸಂವಿಧಾನದ ರಕ್ಷಣೆ ಮಾಡಿಕೊಡುವುದು ನಮ್ಮಗೆ ಬಹು ಮುಖ್ಯವಾಗಿದೆ ಎಂದು ಗುರುನಾನಕ ಪಿಠದ ಉಪಾಧ್ಯಕ್ಷರಾದ ಜಸವೀರ ಸಿಂಗ್ ಛಾಬರಾ ಕರೆ ನೀಡಿದರು.

ಇದಕ್ಕೂ ಮುಂಚೆ ವೇದಿಕೆಯಲ್ಲಿದ ಮುಖಂಡರೆಲ್ಲರು ಭಾರತ ಸಂವಿಧಾನವನ್ನು ಗೌರವಿ ಮತ್ತು ಸಂವಿಧಾನವನ್ನು ಉಳಿಸಿ ಅಭಿಯಾನಕ್ಕೆ ಸಹಿ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಅಜಿಜುಲ್ಲಾ ಸರಮಸ್ತ್, ಎಐಎಎಂ ಜಿಲ್ಲಾ ಅಧ್ಯಕ್ಷರಾದ ರಹಿಮ್ ಮಿರ್ಚಿ,
ದಲಿತ ಸೇನಾ ರಾಜ್ಯಾಧ್ಯಕ್ಷರಾದ ಹಣಮಂತ ಯಳಸಂಗಿ, ಬಾಂಸೆಫ್ ರಾಜ್ಯಾಧ್ಯಕ್ಷರಾದ ಸುಭಾಷ ಶೀಲವಂತ, ಎ.ಐ.ಎಂ.ಸಿ ಜಿಲ್ಲಾ ಆಧ್ಯಕ್ಷ ಮೌಲಾನ ಗೌಸೋದ್ದಿನ್ ಖಾಸ್ಮಿ, ಸೇವಾ ಸಂಗಂ ಅಭಿವೃದ್ಧಿ ಸಮಿತಿ ನಿರ್ದೇಶಕ ಫಾದರ ಅನಿಲ ವೇಕ್ಚರ್, ಎ.ಐ.ಎಂ.ಸಿ ಉಪಾಧ್ಯಕ್ಷ ಮೌಲಾನಾ ಜಾವೀದ ಆಲಂ ಖಾಸ್ಮಿ, ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here