ಕಲಬುರಗಿ: ಕಲ್ಯಾಣಕರ್ನಾಟಕರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ 16 ಸಾವಿರ ಚಾಲಕ, ನಿರ್ವಾಹಕ, ಟೆಕ್ನಿಷಿಯನ್ ಸೇರಿರಾಜ್ಯದ ನಾಲ್ಕೂ ನಿಗಮಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ ಮಾಡಿಕೊಂಡು ಸಾರ್ವಜನಿಕರಿಗೆ ಸೇವೆ ಒದಗಿಸಲು ಸರ್ಕಾರ ಅನುವು ಮಾಡಿಕೊಡಬೇಕುಎಂದು ಕೆಎಸ್‍ಆರ್‍ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಷನ್ ಹಾಗೂ ಎಐಟಿಯುಸಿ ರಾಜ್ಯ ಸಮಿತಿಅಧ್ಯಕ್ಷಎಚ್. ವಿ. ಅನಂತಸುಬ್ಬರಾವ ಒತ್ತಾಯಿಸಿದರು.
ಶ್ರೀನಿವಾಸಮೂರ್ತಿ ನೇತೃತ್ವದಆಯೋಗದ ವರದಿ ಶಿಫಾರಸಿನಂತೆ ಗುತ್ತಿಗೆಆಧಾರಿತಚಾಲಕರ ಭರ್ತಿಗೆಮುಂದಾಗಿರುವಕ್ರಮ ಸರಿಯಲ್ಲ. ಕೆಲವೊಂದು ಆಡಳಿತಾತ್ಮಕ ಸುಧಾರಣೆ ಮಾಡಲಿ. ಆದರೆ ಸರ್ಕಾರಖಾಸಗೀಕರಣ ಮಾಡುವ ಹುನ್ನಾರಯಾರು ಸಹಿಸುವುದಿಲ್ಲ. ಅಗತ್ಯಬಿದ್ದರೆ ನಾಲ್ಕೂ ರಸ್ತೆ ನಿಗಮಗಳನ್ನು ಒಗ್ಗೂಡಿಸಲಿ ಎಂದುಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿಆಗ್ರಹಿಸಿದರು.
ಕಲಬುರಗಿಯಲ್ಲಿಕಲ್ಯಾಣಕರ್ನಾಟಕರಸ್ತೆ ಸಾರಿಗೆ ನಿಗಮ ಮಟ್ಟದ ಸಾರಿಗೆ ನೌಕರರಜಾಗೃತಿ ಸಮಾವೇಶದಲ್ಲಿ 11 ನ್ಯಾಯಯುತ ಬೇಡಿಕೆಗಳ ಬಗ್ಗೆ ಸರ್ವಾನುಮತದಿಂದನಿರ್ಣಯಅಂಗೀಕರಿಸಲಾಗಿದೆ. ಆರನೇ ವೇತನಆಯೋಗದ ಶಿಫಾರಸಿನಂತೆ ಮೂಲ ವೇತನಕ್ಕೆ ಬಿಡಿಎ ವಿಲೀನಗೊಳಿಸಬೇಕು. ಪರಿಷ್ಕøತ ಮೂಲ ವೇತನದ ಶೇ.25ರಷ್ಟು ಹೆಚ್ಚಿಸಿ ವೇತನ ಶ್ರೇಣಿ ಸಿದ್ಧಪಡಿಸಬೇಕು ಎಂದು ತಿಳಿಸಿದರು.
ಆಯ್ಕೆ ಶ್ರೇಣಿ, ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನು ಸಹ ಸಿದ್ಧಪಡಿಸಬೇಕು.ಸಿ ವರ್ಗದ ನೌಕರರಿಗೆ ಈಗ ನೀಡುತ್ತಿರುವಎಲ್ಲ ಭತ್ಯೆಗಳನ್ನು ಐದುಪಟ್ಟುಏರಿಕೆ ಮಾಡಬೇಕು.ಇಎಸ್‍ಐ ಮಾದರಿಯಲ್ಲಿ ಆಡಳಿತ ವರ್ಗದವರಿಂದ ನೌಕರರ ಮೂಲ ವೇತನ ಶೇ.3.5 ಹಾಗೂ ಕಾರ್ಮಿಕರಿಂದ ಶೇ.0.5 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಸಾರಿಗೆ ನೌಕರರಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯಒದಗಿಸಬೇಕು.ರಾಜ್ಯದ ನಾಲ್ಕು ಕೆಂದ್ರಗಳಲ್ಲಿ ಸಂಸ್ಥೆಯ ಆಸ್ಪತ್ರೆಗಳನ್ನು ನಿರ್ಮಿಸಬೇಕುಎಂದು ಮನವಿ ಮಾಡಿದರು. ಪ್ರಮುಖರಾದ ಬಸವರಾಜಕಣ್ಣಿ, ರಾಮಚಂದ್ರ ಹೈಯಾಳಕರ್, ಶಿವಶಾಂತ ಮುನ್ನೊಳ್ಳಿ, ಮಾರುತಿ ಶಾಖಾ, ಸಿದ್ದಪ್ಪ ಪಾಲ್ಕಿ ಇತರರುಇದ್ದರು.