ಕಲಬುರಗಿ: ಕಮಲಾಪುರ ತಾಲ್ಲೂಕಿನ ಅಂಬಲಗಾ ಗ್ರಾಮದಲ್ಲಿರುವ ಸಂತೆ ಕಟ್ಟೆಯಲ್ಲಿ ದಿ.ಮಾರುತಿ ಮಾನಪಡೆ ಅವರ ನುಡಿ ನಮನ ಕಾರ್ಯಕ್ರಮ ಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ರಾಜ್ಯ ಅಂಗನವಾಡಿ ನೌಕರರ ಸಂಘ ಅಧ್ಯಕ್ಷೆ ವರಲಕ್ಷ್ಮಿ ಅವರು ಮಾತನಾಡಿ, ಕರ್ನಾಟಕ ರಾಜ್ಯದ ಹಲವಾರು ಭಾಗದಲ್ಲಿ ಶ್ರಧ್ದಾಂಜಲಿ ಸಭೆ ಮೂಲಕ ಗೌರವ ಸಲ್ಲಿಸಲಾಗಿದೆ , ಇಲ್ಲಿಯವರೆಗೆ ಮಾನಪಡೆಯವರ ಬಗ್ಗೆ ೩ ಪುಸ್ತಕ ಬಂದಿದೆ.( ಗ್ರಾಮ ಪಂಚಾಯತ ನೌಕರರ ಸಂಘ , ಜಲಮಂಡಳಿ ಪಂ.ಜಾ.ಮತ್ತು ಪಂ.ಪ ಅಧಿಕಾರಿಗಳ ಸಂಘ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ). ರಾಜಕೀಯದಲ್ಲಿ ಹೊಸ ಸ್ವರೂಪವನ್ನು ಕೊಟ್ಟಿದ್ದಾರೆ , ಹೆಣ್ಣು ಮಕ್ಕಳಿಗೆ ಸಮಾನತೆ ಬೇಕು ಎಂದು ಮಾನಪಡೆ ಅವರು ಹೇಳಿದ್ದರು.
ಮಾನಪಡೆ ಅವರು ಹೇಳಿದ್ದನ್ನು ಮಾಡುತ್ತಿದ್ದರು ಸಮಾಜದ ಕಟ್ಟ ಕಡೆಯ ವ್ಯಕ್ತಿ ಗೆ ನ್ಯಾಯ ಸಿಗಬೇಕು ಎಂಬುದು ಮಾನಪಡೆ ಅವರ ಧ್ಯೇಯ ವಾಕ್ಯವಾಗಿತ್ತು ಹಣ ಇಲ್ಲದೆ ಹೋರಾಟ ಮಾಡುವ ವ್ಯಕ್ತಿ ಮಾನಪಡೆಯಾಗಿದ್ದರು , ಇಂದಿನ ಮಕ್ಕಳು ಮಾನಪಡೆಯವರ ಹಾಗೆ ಬೆಳೆಯಬೆಕು ಎಂದು ಹೇಳುತ್ತಾ, ಮಾನಪಡೆಯವರ ಹಾಗೆ ನಾವು ಮುಂದೆ ನಡೆಯೋಣ ಎಂದು ಹೇಳಿದ್ದರು. ಮಾನಪಡೆ ತಿರಿ ಹೋದ ದಿನ ಪತ್ರಿಕೆಯ ಸುದ್ದಿ ನೋಡಿ IಂS ಅಧಿಕಾರಗಳು ಇಡೀ ಒಂದು ದಿನ ಅವರ ಬಗ್ಗೆ ಚರ್ಚೆ ಮಾಡಿದ್ದು, ಅವರ ವ್ಯಕ್ತಿತ್ವ ಮತ್ತು ಪ್ರಭಾವ ತಿಳಿಯುತ್ತದೆ ಎಂದು ಹೇಳಿದರು.
ದೇಶದಲ್ಲಿ ಅಸಮಾನತೆ ಇದೆ ಇದಕ್ಕೆ ಕಾರಣ ಇಂದಿನ ಕಾನೂನುಗಳು ಮತ್ತು ಭಾರತ ಹಸಿವಿನಿಂದ ಬಳಲುತ್ತಿರುವ ರಾಷ್ಟ್ರದಲ್ಲಿ ೯೪ ನೇ ಸ್ಥಾನ ಪಡೆದಿದೆ , ಕರೋನ ದಿಂದ ಬಡತನ ನಿರುದ್ಯೋಗ ಬಂದಿದೆ ಹಾಗಾಗಿ ಹೋರಾಟ ಅವಶ್ಯಕತೆ ಇದೆ ಹಾಗೂ ಕೆಂಬಾವುಟ ಎಂದರೆ ಅನ್ಯಾಯದ ವಿರುದ್ಧದ ಹೋರಾಟ ಮಾಡುವುದು ಎಂದರ್ಥ ಎಂದು ಹೇಳಿದರು.
ಉಪನ್ಯಾಸಕ ಶಿವಶರಣಪ್ಪ ಮೊಳೆಗಾಂವ್ ಮಾತನಾಡಿ, ೧೯೮೬-೮೭ ವೇಳೆಯಲ್ಲಿ ಅವರು ಬಿ.ಎ. ಓದುತ್ತಿದ್ದಾಗ, ಮಾನಪಡೆ ಅವರು ಅಂಬಲಗಾ ಗ್ರಾಮಕ್ಕೆ ಕರೆದುಕೊಂಡು ಬಂದು ಒಳ್ಳೆಯ ಭಾಷಣ ಮಾಡುತ್ತೆನೆ ಹುಡುಗ ಎಂದು ಪರಿಚಯಿಸಿ, ರೈತ ಹೋರಾಟದಲ್ಲಿ ತೊಡಗಿಸಿಕೊಂಡರು.ಮಾನಪಡೆ ಯವರ ಶ್ರದ್ಧಾಂಜಲಿ ಯಶಸ್ವಿಯಾಗಬೇಕಾದರೆ ಎಲ್ಲರೂ ಹೋರಾಟದಲ್ಲಿ ಭಾಗವಹಿಸಿದ್ದರೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುದಂತೆ ಎಂದು ಹೇಳುತ್ತಾ, ಮಾನಪಡೆ ಅವರು ೪೦ ವರ್ಷ ಹೋರಾಟದ ಕಿಚ್ಚು ಹಚ್ಚುತ್ತಾ, ಹೋರಾಟ ನಡೆಸಿ ಸಂಘರ್ಷವನ್ನು ಮಾಡಿಕೊಂಡು ಸಂಘಟನೆ ಮಾಡುತ್ತಾ ಬಂದಿದ್ದಾರೆ , ಮಾನಪಡೆ ಯವರು ಶ್ರದ್ಧಾಂಜಲಿ ಕಾರ್ಯಕ್ರಮ ಎಲ್ಲರೂ ಮನಸ್ಸಿನಲ್ಲಿ ಪ್ರೇರಣೆ ನೀಡಲು , ಎಂದು ಹೇಳಿದರು.
ಶಿಕ್ಷಕರಾದ ನಾಗೇಂದ್ರಪ್ಪಾ ಅವರಾದ ಮಾತನಾಡುತ್ತಾ, ಮಾನಪಡೆಯವರು ಸ್ವ ಸಾಮರ್ಥ್ಯ ಸಂಘರ್ಷ ದಿಂದ ಬೆಳೆದು ಬಂದಿದ್ದಾರೆ, ಸಂಘರ್ಷದ ದಾರಿಯನ್ನು ಹಿಡಿಯಬೇಕಾದರೆ ಮಾನಪಡೆಯವರನ್ನು ಅನುಕರಣೆ ಮಾಡಬೇಕು . ೧೫೦ ಜನ ಶಸ್ತ್ರಾಸ್ತ್ರಗಳನ್ನು ಎದುರಿಸುವ ಶಕ್ತಿ ಮಾನಪಡೆ ಅವರಿಗೆ ಇತ್ತು ಅನೇಕ ದಾಳಿ ಮತ್ತು ದಬ್ಬಾಳಿಕೆ ಗಳನ್ನು ಎದುರಿಸಿ ಹೋರಾಡಿದರು. ಮಾನಪಡೆ ಜಿಲ್ಲಾ ಪಂಚಾಯತ ಆಯ್ಕೆಯನ್ನು ಎಲ್ಲಾ ಕುರಿಗಳಲ್ಲಿ ಒಂದು ಒಳ್ಳೆಯ ತೋಳ ಇದ್ದಾಗ ಎಂದು ಆ ಸಮಯದಲ್ಲಿ ಮಾತು ಆಗಿತ್ತು.
ಜನರಿಗೆ ಮಾನಪಡೆ ಅವರ ಮೇಲೆ ಇರುವ ಬಲ, ವಿಶ್ವಾಸ ಇನ್ನೂ ಕಡಿಮೆಯಾಗಿಲ್ಲ.ಮಾನಪಡೆಯವರ ಜೀವ ನಮ್ಮಗೆ ಸಿಗುತ್ತಿಲ್ಲ, ಆದರೆ ಅವರ ಆದರ್ಶಗಳನ್ನು ಈ ಜನರಲ್ಲಿವೆ ನಾವು ಅವರ ಹೋರಾಟದ ಸಿದ್ಧಾಂತಗಳನ್ನು ಮುಂದುವರಿಸಬೇಕು.ಹೋರಾಟ ಮತ್ತು ಚಳುವಳಿಯಲ್ಲಿ ಮಾನಪಡೆಯವರ ಜೀವ ಇದೆ.
ಮಾನಪಡೆ ಹಿರಿಯ ಮಗ ಸುನೀಲ ಮಾನಪಡೆ ಮಾತನಾಡುತ್ತಾ ತಂದೆ ಅವರು ಹಠದ ಮತ್ತು ವೈಚಾರಿಕ ಬದ್ಧತೆ ಬಗ್ಗೆ ಹೇಳಿದರು ಮತ್ತು ಅವರ ನಿಸ್ವಾರ್ಥ ಹೋರಾಟದ ಬಗ್ಗೆ ತಿಳಿಸಿದರು. ತಂದೆ ಅವರ ನಿಸ್ವಾರ್ಥ ಸೇವೆಯಿಂದ ಗೌರವ ದೊರಕಿದೆ. ವೈರಿಗಳಿಗೂ ಕೂಡ ಪ್ರೀತಿ ವಿಶ್ವಾಸಯಿಂದ ಮಾತನಾಡುತ್ತಿದ್ದರು ವ್ಯಕ್ತಿಯನ್ನು ದೂರುವುದಲ್ಲ ಅವರ ತಪ್ಪು ವಿಚಾರಗಳನ್ನು ಸರಿಪಡಿಸಲು ಮಾಡಬೇಕು ಎಂದು ಹೇಳುತ್ತಿದ್ದರು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಕೂಡ ವಿ.ಕೆ.ಸಲಗರದಿಂದ ಕಮಲಾಪುರ ದವರೆಗೆ ಪಾದಯಾತ್ರೆ ಮಾಡಿ ಅಂಬಲಗಾ ಮೂಲಕ ಹೊಸ ತಾಲ್ಲೂಕು ಕಮಲಾಪುರ ಗೆ ಸಂಪರ್ಕ ರಸ್ತೆ ಕಲ್ಪಿಸುವ ಬಗ್ಗೆ ತಿಳಿಸಿದ ಬಗ್ಗೆ ತಿಳಿಸಿದ್ದರು. ಇತ್ತೀಚೆಗೆ ತಾನು ಬೆಂಗಳೂರು ಭೇಟಿ ನೀಡಿದ ಸಂದರ್ಭದಲ್ಲಿ ತಂದೆ ಅವರು ಮಾಡಿದ ಅನೇಕ ಕೆಲಸಗಳನ್ನು ಮಂತ್ರಿಗಳು ಕೂಡ ಮಾಡಿಲ್ಲ ಎಂದು IಂS ಅಧಿಕಾರ ಹೇಳಿದ್ದ ಬಗ್ಗೆ ತಿಳಿಸಿದರು ಹಾಗೂ ನುಡಿ ನಮನ ಕಾರ್ಯಕ್ರಮ ಆಯೋಜಿಸಿದ ಸಮಸ್ತ ಅಂಬಲಗಾ ಗ್ರಾಮದ ಗ್ರಾಮಸ್ಥರಿಗೆ ಧನ್ಯವಾದ ಹೇಳಿದರು.
ಕಲಬುರಗಿ ಜಿಲ್ಲಾ ಸಿ.ಪಿ.ಐ.(ಎಂ) ಜಿಲ್ಲಾ ಮುಖಂಡ ರೆವಣಸಿದ್ದಪ್ಪ ಮಾತನಾಡುತ್ತಾ, ಮಾನಪಡೆಯವರು ಬರುವಾಗ ಖಾಲಿ ಹೋಗವಾಗ ಖಾಲಿ ಹೋದರು ಅವರು ಇದರ ಮಧ್ಯದಲ್ಲಿ ಎಲ್ಲರಲ್ಲಿಯೂ ದೀಪ ಹಚ್ಚಿ ಹೋಗಿದ್ದಾರೆ, ತೊಗರಿ ಮಂಡಳಿ ಸ್ಥಾಪಿಸಿದ ಕೀರ್ತಿ ಮಾನಪಡೆಯವರರಿಗೆ ಸಲ್ಲುತ್ತದೆ, ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತಂದವರು ಮಾನಪಡೆ,ಅವರ ಹೋರಾಟದ ದೀಪ ಈ ವೇದಿಕೆಯಿಂದ ಮತ್ತೆ ಬೆಳಗಿದೆ ಎಂದು ಹೇಳಿದ್ದರು. ಶೀವಾನಂದ ಕವಲಗಾ, ಗ್ರಾಮ ಪಂಚಾಯತ್ ನೌಕರರ ಮುಖಂಡರು ಮಾತನಾಡುತ್ತಾ, ರಾಜ್ಯದ ೪೭೦೦೦ ಪಂಚಾಯತ ನೌಕರರನ್ನು ಖಾಯಂ ಗೊಳಿಸಿದ ಕೀರ್ತಿ ಮಾನಪಡೆಯವರಿಗೆ ಸಲ್ಲುತ್ತದೆ. ಕರೋನಾ ಸಂದರ್ಭದಲ್ಲಿ ಕೂಡ ವಯಸ್ಸಿನ ಚಿಂತೆ ಮಾಡದೆ ನಮ್ಮ ಜನ ಕಷ್ಟದಲ್ಲಿದಾಗ ಮನೆಯಲ್ಲಿ ಇರಬಾರದು ಎಂದು ಹೇಳುತ್ತಿದ್ದರು ಎಂದು ಹೇಳಿದ್ದರು.
ಜಿಲ್ಲಾ ಪಂಚಾಯತ ಸದಸ್ಯ ಶರಣಗೌಡ ಪಾಟೀಲ ಅವರು ಮಾನಪಡೆ ಅವರು ಸಾವಿರಾರು ರೂಪಾಯಿಯ ಸರಕಾರಿ ನೌಕರಿ ಬಿಟ್ಟು, ಜನರ ಸೇವೆಗೆ ಜೀವನ ಮುಡಪಾಗಿಟ್ಟರು . ಒಬ್ಬ ವ್ಯಕ್ತಿ ಎಷ್ಟು ದಿನ ಬದುಕಿದರೂ ಮುಖ್ಯವಲ್ಲ , ಏನು ಮಾಡಿದರು ಅದು ಮುಖ್ಯ ಎಂದು ಹೇಳುತ್ತಾ, ಮಾನಪಡೆ ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು , ಅವರು ಯಾವುದೇ ಆಸ್ತಿ ಮಾಡಲಿಲ್ಲ , ಜೀವನ ಪೂರ್ಣ ಬಡವರ ದೀನ ದಲಿತರ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಮೇಘರಾಜ ಕಠಾರೆ ಮಾರುತಿ ಮಾನಪಡೆ ಅವರು ೪೦ ವರ್ಷಗಳಿಂದ ಬಡಜನರು, ಸಾಮಾನ್ಯ ಜನರ ನ್ಯಾಯಕ್ಕಾಗಿ ಕಾರ್ಯ ನಿರ್ವಹಿಸಿದರು ಶೋಷಣೆ ಒಳಪಟ್ಟವರ ಪರವಾಗಿ ಹೋರಾಡಿದ್ದಾರೆ. ಪಂಚಾಯತ ನೌಕರರ ವೇತನ ಹೆಚ್ಚಳಕ್ಕೆ ಮತ್ತು ಅಂಗನವಾಡಿ ನೌಕರರ ವೇತನ ಹೆಚ್ಚಳಕ್ಕೆ ಹಾಗೂ ದೇವದಾಸಿ ಮಹಿಳೆಯರಿಗೆ ಮಾಸಶಾನ ಜಾರಿ ಮಾಡಲು ಯಶಸ್ವಿಯಾಗಿದ್ದಾರೆ.
ಬಡವರಿಗೆ ಸರಕಾರದ ಯೋಜನೆ ತರಲು ಮತ್ತು ಜಾರಿ ಮಾಡಲು ಹೋರಾಟ ಮಾಡಿದ್ದಾರೆ. ಮಾನಪಡೆ ಅವರ ಹೋರಾಟದ ಫಲವಾಗಿ ತೊಗರಿ ಬೆಳೆಗರ ಬೆಂಬಲ ಬೆಲೆ ಏರಿಕೆ, ತೊಗರಿ ಬೋರ್ಡ್ ರಚಿಸಲು ಸಾಧ್ಯವಾಯಿತು ಎಂದು ಹೇಳಿದರು.
ವಿದ್ಯುತ್ ಖಾಸಗೀಕರಣ ವಿರೋಧಿಸಿ, ರೈತರ ಪಂಪಸೇಟ್ ಮೀಟರ್ ಕಿತ್ತು ಎಸೆದು ಪ್ರತಿಭಟಿಸಿ, ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದರು ಎಂದು ಹೇಳುತ್ತ, ಅಕ್ರಮ ಎಸೆಗಿ ಜೈಲು ಸೇರುವ ಈಗಿನ ರಾಜಕಾರಣಿಗಳು ಒಂದೆಡೆಗೆ ಇದ್ದರೆ, ಜನರಿಗಾಗಿ ಮತ್ತು ನ್ಯಾಯಕ್ಕಾಗಿ ಹೋರಾಡಿ ಜೈಲು ವಾಸ ಮಾಡಿದ್ದರು ಮಾನಪಡೆಯವರು ಎಂದು ಹೇಳಿದರು. ರಾಜಕೀಯದಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಮಾಡದೆ ಬರಗೈಲಿ ಬಂದು ಬರಗೈಲಿ ಹೊಂದ ಮಾನಪಡೆ ನಿಷ್ಠಾವಂತ ನಾಯಕರು ಎನ್ನುತ್ತಾ ಅವರ ವೈದ್ಯಕೀಯ ಚಿಕಿತ್ಸೆ ಕೂಡ ಸಂಘಟನೆ ಮಾಡಿದ್ದು, ಅವರ ಪ್ರಾಮಾಣಿಕತೆ ಜೀವನದ ಕೈಗನ್ನಡಿ ಹಾಗೂ ಕೊನೆಗೆ ಜನರಿಗಾಗಿ ಮತ್ತು ಶೋಷಣೆ ವಿರುದ್ಧದ ಹೋರಾಡುತ್ತಾ ಅಮರ ಆಗಿದ್ದಾರೆ ಎಂದು ಹೇಳಿದ್ದರು.
ಗ್ರಾಮದ ಹಿರಿಯರು ಆದ ಮೋಹನಂದ ಮರಗುತ್ತಿ ಅಧ್ಯಕ್ಷತೆ ವಹಿಸಿದ್ದರು,ಸ್ವಾಗತ ಭಾಷಣವನ್ನು ಕಲ್ಯಾಣರಾವ್ ಮೆಗಪ್ಪಿ ಮುಖ್ಯ ಗುರುಗಳು ಮುದ್ದಡಗಾ ಮಾಡಿದ್ದರು.ಬಂಡೆಪ್ಪ ಚೀಲಿ ಅವರು ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ಗ್ರಾಮದ ಹಿರಿಯರಾದ ಕಲ್ಲಪ್ಪ ಚೀಲಿ , ಕಲ್ಯಾಣರಾವ ಗೊನಕೆ ,ನೀಲಕಂಠ ದುರ್ಗೆ,ಶಿವಪುತ್ರಪ್ಪ ಮೆಗಪ್ಪಿ, ಮಲ್ಲಣ್ಣ ಸರಡೆ, ಮಲ್ಲಿನಾಥ ಪಾಟೀಲ ಕುದಮೂಡ , ಚಿಂಚನಸೂರದ ಪಾಂಡುರಂಗ ಮಾವಿನಕರ್ ,ಲೇಂಗಟಿಯ ಗುಂಡಪ್ಪ ಕೊಳ್ಳರೆ, ಅಂಬಲಗಾ ಗ್ರಾಮದ ರಾಜಣ್ಣ ಮಾಚಿ, ಶರಣಪ್ಪ ಹೊಸಮನಿ , ಬಸವರಾಜ ಸರಡಗಿ ಸುರೇಶ ಪಂಚಾಳ ಕಲ್ಲಪ್ಪ ಕಂಠಿ ಬೀರಪ್ಪಾ ಗಡ್ಡದ , ಪಕೀರ್ ಸಾಬ್ ಭಗವಾನ್ , ಮತ್ತು ಸಮಸ್ತ ಗ್ರಾಮಸ್ಥರು ಭಾಗವಹಿಸಿ, ಮಾರುತಿ ಮಾನಪಡೆ ಅವರ ನುಡಿ ನಮನ ಕಾರ್ಯಕ್ರಮ ಯಶಸ್ವಿಗೊಳಿಸಿದ್ದರು.