ಸುರಪುರ: 2007ರ ಅಗಸ್ಟ್ 2 ರಂದು ತಾಲ್ಲೂಕಿನ ಕನ್ನೆಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತ್ಯವ್ಯ ಮಾಡಿದ್ದರು. ಅಂದು ಸಿಎಂ ಗ್ರಾಮ ವಾಸ್ತವ್ಯ ಮಾಡಿದ ಗ್ರಾಮದಲ್ಲಿ ಇದುವರೆಗೆ ಆದ ಅಭೀವೃಧ್ದಿಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಕೂರ್ಮರಾವ್ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮ ವಾಸ್ತವ್ಯ ಸಂದರ್ಭ ತಂಗಿದ್ದ ಮಲ್ಲಯ್ಯ ಸ್ವಾಮಿ ಹಿರೇಮಠರ ಮನೆಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಗ್ರಾಮದ ಅನೇಕರು ಡಿಸಿಯವರನ್ನು ಭೇಟಿ ಮಾಡಿ ಅಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿಕೊಂಡಿದ್ದ ಕಾಮಗಾರಿಗಳ ಬಗ್ಗೆ ಮಾಹಿತಿನೀಡುತ್ತಾ,ಮುಖ್ಯಮಂತ್ರಿಗಳು ನಮ್ಮ ಗ್ರಾಮಕ್ಕೆ ಬ್ಯಾಂಕ್,ರೈತ ಸಂಪರ್ಕ ಕೇಂದ್ರ,ಆಸ್ಪತ್ರೆ ಮತ್ತು ಶಾಲಾ ಕಾಲೇಜು ಮಂಜೂರು ಮಾಡುವುದಾಗಿ ಹೇಳಿದ್ದರು.
ಅಲ್ಲದೆ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು,ಇದುವರೆಗೆ ಅವರು ಹೇಳಿದ ಯಾವುದೆ ಕಾಮಗಾರಿಗಳು ನಡೆದಿಲ್ಲ.ಈಗಲಾದರು ನಮ್ಮ ಗ್ರಾಮಕ್ಕೆ ಆಸ್ಪತ್ರೆ,ಬ್ಯಾಂಕ್ ಮತ್ತು ರೈತ ಸಂಪರ್ಕ ಕೇಂದ್ರ ಸೇರಿದಂತೆ ಇತರೆ ಅಭೀವೃಧ್ಧಿ ಕಾರ್ಯಗಳ ಮಾಡಲು ವರದಿ ಸಲ್ಲಿಸುವಂತೆ ವಿನಂತಿಸಿದರು.
ನಂತರ ನೂತನವಾಗಿ ನಿರ್ಮಿಸಲಾದ ಶಾಲಾ ಕಟ್ಟಡಕ್ಕೆ ಭೇಟಿ ನೀಡಿ ವೀಕ್ಷಿಸಿದರು.ಶಾಲೆಗೆ ಅಗತ್ಯ ಮೂಲಭೂತ ಸೌಕರ್ಯಗಳ ಕಲ್ಪಿಸಿ ಶೀಘ್ರವೆ ಶಾಲಾ ಆರಂಭಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಹುಣಸಗಿ ತಹಸೀಲ್ದಾರ ಶಶಿಧರ ರೆಡ್ಡಿ ಜೊತೆಯಿದ್ದರು.
ಸ್ಥಳಿಯ ಗ್ರಾಮ ಪಂಚಾಯತಿ ಅಧ್ಯಕ್ಷ ದೇವಣ್ಣ ಚಾನಕೋಟಿ,ನಿಂಗಣ್ಣ ಗೋಡಿಹಾಳ,ರಾಜು ದೇವರು,ಮಲ್ಲಯ್ಯ ಸ್ವಾಮಿ ಹಿರೇಮಠ,ಬಸವರಾಜ ಕುಂಬಾರ ಮೇಡಿಕಲ್ ಸೇರಿದಂತೆ ಅನೇಕರಿದ್ದರು.