ಅರವತ್ತು ದಿನಗಳ ನಿರಂತರ ಧರಣಿಗೆ ಮೂರೆ ದಿನದಲ್ಲಿ ಅಂತ್ಯ ಕಾಣಿಸಿದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ

0
65

ಸುರಪುರ: ಕಳೆದ ಅಕ್ಟೋಬರ್ ೫ನೇ ತಾರೀಖು ಬೆಳಿಗ್ಗೆ ನಗರದ ತಹಸೀಲ್ದಾರ್ ಕಚೇರಿ ಮುಂದೆ ತಮ್ಮ ಆಸ್ತಿಯ ದಾಖಲೆಗಳನ್ನು ಕೊಡುವಂತೆ ಆಗ್ರಹಿಸಿ ಧರಣಿ ನಡೆಸಿದ್ದ ರಂಗಂಪೇಟೆಯ ನಿವಾಸಿ ಅಮರಣ್ಣ ಚಂದ್ರಶೇಖರ ಸಜ್ಜನ್ ಅವರ ಧರಣಿಯನ್ನು ಮುಗಿಸಲು ಕ್ರಮ ಕೈಗೊಂಡ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರ ಕರ್ತವ್ಯ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ತಮ್ಮ ಆಸ್ತಿಯ ದಾಖಲೆಗಳ ನಕಲು ಪ್ರತಿಯನ್ನು ನೀಡುವಂತೆ ವರ್ಷದಿಂದ ತಹಸೀಲ್ ಕಚೇರಿಗೆ ಅಲೆಯುತ್ತಿದ್ದ ಅಮರಣ್ಣ ಸಜ್ಜನ್ ಅವರು ಬೇಸತ್ತು ಅಕ್ಟೋಬರ್ ೫ನೇ ತಾರೀಖು ತಹಸೀಲ್ ಕಚೇರಿ ಮುಂದೆ ಅಮರಣಾಂತ ಧರಣಿಯನ್ನು ಆರಂಭಿಸಿದ್ದರು.ಅಂದು ತಹಸೀಲ್ದಾರರಾಗಿದ್ದ ನಿಂಗಣ್ಣ ಬಿರಾದಾರ್ ಅವರು ನಮ್ಮಲ್ಲಿ ಲಭ್ಯವಿರುವ ದಾಖಲೆಗಳನ್ನು ನೀಡುತ್ತೇವೆ,ಇನ್ನುಳಿದವುಗಳು ನಮ್ಮಲ್ಲಿ ಭ್ಯವಿಲ್ಲದವುಗಳು ಲಭ್ಯವಿಲ್ಲ ಎಂದು ನೀಡುತ್ತೇವೆ ಎಂದು ಅನೇಕ ಬಾರಿ ಹೇಳಿದ್ದರು,ಆದರೆ ಇದಕ್ಕೆ ಒಪ್ಪದ ಅಮರಣ್ಣ ಸಜ್ಜನ್ ಅವರು ನಾವು ಕೇಳಿದ ಎಲ್ಲಾ ದಾಖಲೆಗಳನ್ನು ನೀಡುವವರೆಗೆ ಧರಣಿ ನಿಲ್ಲಿಸುವುದಿಲ್ಲವೆಂದು ಸುಮಾರು ಅರವತ್ತು ದಿನಗಳಿಂದ ಧರಣಿ ನಡೆಸಿದ್ದರು.

Contact Your\'s Advertisement; 9902492681

ಧರಣಿ ಆರಂಭದಲ್ಲಿದ್ದ ತಹಸೀಲ್ದಾರ ನಿಂಗಣ್ಣ ಬಿರಾದಾರ್ ಅವರು ಇಲಕಲ್‌ಗೆ ವರ್ಗಾವಣೆಗೊಂಡ ನಂತರ ಆಗಮಿಸಿದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಅಮರಣ್ಣ ಅವರ ಬೇಡಿಕೆಗಳನ್ನು ಆಲಿಸಿ ನಂತರ ಕಾಳಜಿ ತೋರಿ ಎಲ್ಲಾ ದಾಖಲೆಗಳನ್ನು ಹುಡುಕಿಸುವ ಕೆಲಸಕ್ಕೆ ಮುಂದಾದ ನಂತರ ಅಮರಣ್ಣ ಸಜ್ಜನ್ ಅವರು ಕೇಳಿದ ಎಲ್ಲಾ ದಾಖಲೆಗಳನ್ನು ಹುಡುಕಿಸುವ ಕೆಲಸ ಮಾಡಿದ್ದು,ಸದ್ಯ ಧರಣಿ ನಿರತರು ಕೇಳಿದ ದಾಖಲೆಗಳಲ್ಲಿ ಅರ್ಧದಷ್ಟನ್ನು ಒದಗಿಸುವ ಮೂಲಕ ಡಿಸೆಂಬರ್ ೫ ರಂದು ಸಂಜೆ ಅಮರಣ್ಣ ಅವರ ದಾಖಲೆಗಳನ್ನು ಕೈಗಿಡುವ ಮೂಲಕ ಧರಣಿಯನ್ನು ಕೈಬಿಡುವಂತೆ ಕೊರಿದ್ದರಿಂದಾಗಿ ಧರಣಿಯನ್ನು ಎಳೆನೀರು ಸೇವಿಸುವ ಮೂಲಕ ನಿಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ವಕೀಲ ಶಿವಾನಂದ ಆವಂಟಿ ತಹಸೀಲ್ ಕಚೇರಿಯ ಕೊಂಡಲ ನಾಯಕ ಸೋಮನಾಥ ನಾಯಕ ಹಾಗು ಅಮರಣ್ಣ ಸಜ್ಜನ್ ಅವರ ಕುಟುಂಬಸ್ಥರಿದ್ದರು.

ಅಮರಣ್ಣ ಚಂದ್ರಶೇಖರ ಸಜ್ಜನ್ ಅವರು ಕೇಳಿದ ಎಲ್ಲಾ ದಾಖಲೆಗಳನ್ನು ನೀಡುತ್ತೇವೆ,ಸದ್ಯ ಲಭ್ಯವಾದ ದಾಖಲೆಗಳನ್ನು ನೀಡಿದ್ದು ಇನ್ನುಳಿದ ಎಲ್ಲಾ ದಾಖಲೆಗಳನ್ನು ಮೂರು ನಾಲ್ಕು ದಿನದಲ್ಲಿ ನೀಡುವುದಾಗಿ ಭರವಸೆ ನೀಡಿ ಧರಣಿಗೆ ಅಂತ್ಯಗೊಳಿಸಲು ತಿಳಿಸಿದೆನು. -ಸುಬ್ಬಣ್ಣ ಜಮಖಂಡಿ ತಹಸೀಲ್ದಾರ ಸುರಪುರ.

ತಹಸೀಲ್ದಾರರು ನಮ್ಮ ಮನವಿಯನ್ನು ಆಲಿಸಿ ಸದ್ಯ ಅಗತ್ಯವಿರುವ ಕೆಲವೊಂದು ದಾಖಲೆಗಳನ್ನು ನೀಡಿದ್ದಾರೆ.ಇನ್ನುಳಿದ ದಾಖಲೆಗಳನ್ನು ಮೂರು ನಾಲ್ಕು ದಿನದಲ್ಲಿ ನೀಡುವುದಾಗಿ ಭರವಸೆ ನೀಡಿದ್ದರಿಂದ ಧರಣಿ ನಿಲ್ಲಿಸುವೆವು. -ಅಮರಣ್ಣ ಚಂದ್ರಶೇಖರ ಸಜ್ಜನ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here