ದೇಶದಲ್ಲಿ ಸಮಾನತೆಯ ಬೆಳಕು ಹರಡಿದ ಪುಣ್ಯ ಪುರುಷ ಡಾ:ಬಿ.ಆರ್.ಅಂಬೇಡ್ಕರ

0
20

ಸುರಪುರ: ಈ ದೇಶದ ಜನರು ಸ್ವಾತಂತ್ರ್ಯ ನಂತರದಲ್ಲಿ ಒಂದು ಸಂವಿಧಾನವಿಲ್ಲದೆ ಮೌಢ್ಯಾಚರಣೆ ಅಂಧಾಕಾರ ಮತ ಪಂಥಗಳ ಹೆಸರಲ್ಲಿ ಸ್ಪೃಶ್ಯ ಅಸ್ಪೃಶ್ಯ ಎಂಬ ಜಾತಿ ವ್ಯವಸ್ಥೆಯಲ್ಲಿ ಕಾಲ ಕಳೆಯುತ್ತಿದ್ದ ದಿನಮಾನಗಳಲ್ಲಿ ಭಾರತಕ್ಕೆ ಒಂದು ಸಂವಿಧಾನವನ್ನು ಬರೆದು ಕೊಡುವ ಮೂಲಕ ದೇಶದಲ್ಲಿ ಸಮಾನತೆಯ ಬೆಳಕು ಹರಡಿದ ಪುಣ್ಯ ಪುರುಷ ಎಂದು ಅವರು ಡಾ:ಬಿ.ಆರ್.ಅಂಬೇಡ್ಕರರಾಗಿದ್ದಾರೆ ಎಂದು ಅನೇಕ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಡಾ: ಬಾಬಾ ಸಾಹೇಬ ಅಂಬೇಡ್ಕರ್ ವೃತ್ತದಲ್ಲಿ ಡಾ:ಬಿ.ಆರ್.ಅಂಬೇಡ್ಕರ ಜಯಂತಿ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಡಾ: ಬಾಬಾ ಸಾಹೇಬ ಅಂಬೇಡ್ಕರರ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಈ ದೇಶದ ಪ್ರತಿಯೊಬ್ಬ ವ್ಯಕ್ತಿ ಇಂದು ಸಮಾನತೆ ಸೌಹಾರ್ಧತೆ ಮತ್ತು ಸರಕಾರದ ಸೌಲಭ್ಯಗಳ ಪಡೆಯಲು ಅಂಬೇಡ್ಕರರು ಬರೆದು ಕೊಟ್ಟ ಸಂವಿಧಾನದ ಫಲವಾಗಿದೆ.ಅಂತಹ ಮಹಾನ್ ಚೇತನ ನಮ್ಮನ್ನೆಲ್ಲ ಬಿಟ್ಟು ಅಗಲಿದ ಈ ದಿನ ನಮಗೆ ತುಂಬಾ ದುಖಃದ ದಿನವಾಗಿದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಧಮ್ಮ ವಂದನೆಯ ಮೂಲಕ ಅಂಬೇಡ್ಕರರಿಗೆ ಸ್ಮರಿಸಲಾಯಿತು.ಈ ಸಂದರ್ಭದಲ್ಲಿ ಹೋರಾಟಗಾರರಾದ ರಾಹುಲ ಹುಲಿಮನಿ ಮಾಳಪ್ಪ ಕಿರದಹಳ್ಳಿ ಮಾನಪ್ಪ ಕರಡಕಲ್ ರಮೇಶ ಅರಕೇರಿ ನಿಂಗಪ್ಪ ಝಂಡದಕೇರಾ ಬಸವರಾಜ ಮುಷ್ಠಳ್ಳಿ ಮಲ್ಲಿಕಾರ್ಜುನ ಯಡಹಳ್ಳಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here