ಅರಸು ಪ್ರತಿಮೆ ಸ್ಥಾಪನೆ ಯಾವಾಗ?: ಜಾಕೀರ್ ಹುಸೇನ್

0
16

ಮೈಸೂರು: ಕನ್ನಡಿಗರು ಕಂಡ ಅಪರೂಪದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ವಿಶೇಷವಾಗಿ ಶೋಷಣೆಗೆ ಒಳಗಾಗಿದ್ದ ಸಮುದಾಯಗಳಾದ ಹಿಂದುಳಿದ ವರ್ಗ, ದಲಿತ, ಅಲ್ಪಸಂಖ್ಯಾತ ಇನ್ನು ಹಲವಾರು ಜನಾ೦ಗಗಳ ಏಳಿಗೆಗಾಗಿ ಅಪಾರ ಕೆಲಸ ಮಾಡಿದ್ದ ಮುತ್ಸದ್ಧಿಯ ಪ್ರತಿಮೆ ಸಾಂಸ್ಕೃತಿಕ ನಗರಿಯಾದ ಮೈಸೂರಿನಲ್ಲಿ ಇನ್ನೂ ಬರದಿರುವುದು ದೊಡ್ಡ ಕೊರತೆಯಾಗಿ ಕಾಡುತ್ತಿದೆ ಎಂದು ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ಅಧ್ಯಕ್ಷರಾದ ಜಾಕೀರ್‌ ಹುಸೇನ್‌ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಅರಸು ‘ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಒಂದು ವರ್ಷದಿಂದಲೂ ಮನವಿಸಲ್ಲಿಸುತ್ತಿದ್ದು,  ಹಲವಾರು ಬಾರಿ ಪತ್ರಿಕಾ ಪ್ರಕಟಣೆ, ಮೌನ ಪ್ರತಿಭಟನೆ, ಸಂಘ-ಸಂಸ್ಥೆಗಳನ್ನೊಳಗೊಂಡಂತೆ ಸಭೆ ನಡೆಸುವ ಮೂಲಕ ಹೋರಾಟ ನಡೆಸುತ್ತಿದ್ದೇವೆ, ಅರಸು ಅವರ ಪ್ರತಿಮೆ ಇನ್ನೂ ನಿರ್ಮಾಣವಾಗಿಲ್ಲ, ಇದು ವಿಪರ್ಯಾಸದ ಸಂಗತಿ ಎಂದರು

Contact Your\'s Advertisement; 9902492681

ಇದನ್ನು ಈಡೇರಿಸಬೇಕೆಂಬ ಕಾಳಜಿಯಿಂದ ಸದ್ಯದಲ್ಲೇ ದೇವರಾಜ ಅರಸು  ಆದರ್ಶಗಳನ್ನು, ಕೊಡುಗೆಗಳನ್ನು ಗೌರವಿಸುವಂತಹ ಹಲವಾರು ಸಂಘ-ಸಂಸ್ಥೆಗಳು ಒಟ್ಟಾಗಿ ನಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಅಧ್ಯಕ್ಷರಾದ ಜಾಕೀರ ಮನವಿ ಮಾಡಿ, ಈ ಹೋರಾಟದಲ್ಲಿ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್‌.ಭಗವಾನ್ ಭಾಗವಹಿಸಲಿದ್ದಾರೆಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here