ರಾಜ್ಯ- ಕೇಂದ್ರ ಎರಡೂ ಕಡೆ ಬಿಜೆಪಿ ಸರಕಾರ: ಆದರೂ ಇನ್ನೂ ಸಂತ್ರಸ್ತರಿಗೆ ದಕ್ಕಿಲ್ಲ ಪರಿಹಾರ

0
27

ಬೆಂಗಳೂರು/ ಕಲಬುರಗಿ: ಭೀಕರ ನೆರೆ, ಮಳೆಯ ಹೊಡೆತದಿಂದ ಕರ್ನಾಟಕ ರಾಜ್ಯದ ಕಲಬುರಗಿ , ಯಾದಗಿರಿ ಸೇರಿದಂತಿರುವ ಭೀಮಾ, ಕೃಷ್ಣಾ ನದಿ ಪಾತ್ರದ ಜಿಲ್ಲೆಗಳೂ ಸೇರಿದಂತೆ ರಾಜ್ಯದ 25 ಜಿಲ್ಲೆಗಳು, 180 ತಾಲೂಕುಗಳು ತತ್ತರಿಸಿ ಹೋಗಿದ್ದರೂ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಯಾಕೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಕ ಡಾ. ಅಜಯ್ ಸಿಂಗ್ ಸೋಮವಾರ ಆರಂಭವಾಗಿರುವ ವಿಧಾನ ಸಭೆ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಈ ವರ್ಷ ಭೀಕರ ನೆರೆ, ಮಳೆ ರೈತರು, ಜನರನ್ನು ಕಾಡಿತ್ತು. ರಾಜ್ಯ ಸರಕಾರವೂ ಇದೆಲ್ಲದರ ಹಾನಿ 24, 491 ಕೋಟಿ ರು ಎಂದು ಲೆಕ್ಕಹಾಕಿ ಕೇದಂ್ರಕ್ಕೆ ಪರಿಹಾರ ಕೇಳಿತ್ತು. ಕೇಂದ್ರ, ರಾಜ್ಯ ಎರಡೂ ಕಡೆ ಬಿಜೆಪಿ ಸರಕಾರ, ಪರಿಹಾರ ಹೆಚ್ಚಿಗೆ, ಬೇಗ ಬರಬಹುದು ಎಂಬುದು ನಮ್ಮ ಲೆಕ್ಕವಾಗಿತ್ತು. ಆದರೆ ಆಗಿz್ದÉೀನು? ನೆರೆ- ಮಳೆ ಜನರನ್ನು ಕಾಡಿ ತಿಂಗಳು ಗತಿಸಿದರೂ ಇನ್ನೂ ಸಂತ್ರಸ್ತರಿಗೆ ಪರಿಹಾರ ದೊರಕಿಲ್ಲ ಎಂದು ಅಂಕಿ – ಅಂಶ ಸಮೇತ ಸರಕಾರದ ಗಮನ ಸೆಳೆದಿದ್ದಾರೆ. 27, 700 ಕುಟುಂಬಗಳಿಗೆ ತಲಾ 10 ಸಾ. ರು ನಂತೆ 27 ಕೋಟಿ ರು ಪರಿಹಾರ ನೀಡಲಾಗಿದೆ,ಆದರೆ 48, 424 ಕುಟುಂಬಗಳ ಮನೆಗಳು ಬಿದ್ದು ಹೋಗಿವೆ, ಇಂದಿಗೂ ನಯಾಪೈಸೆ ಪರಿಹಾರ ಇವರಿಗೆ ನೀಡಲಾಗಿಲ್ಲ, ತುರ್ತು ಪರಿಹಾರವೆಂದು 120 ಕೋಟಿ ರು ಬಿಡುಗಡೆ ಮಾಡಿದ್ದಾಗಿ ಹೇಳುತ್ತೀರಿ, ರೈತರ ಬೆಳೆ ಹಾನಿಗೆ ಪರಿಹಾರ ಇನ್ನೂ ಬಂದಿಲ್ಲ ಯಾಕೆ? ಎಂದು ಡಾ. ಅಜಯ್ ಸರಕಾರವನ್ನೇ ಪ್ರಶ್ನಿಸಿದರು.

Contact Your\'s Advertisement; 9902492681

ರಾಜ್ಯದಿಂದ 25 ಸಂಸದರು ದೆಹಲಿಯಲ್ಲಿದ್ದಾರೆ. ಇವೆರಲ್ಲರೂ ಒತ್ತಡ ಹೇರೆ ಹೆಚ್ಚಿನ ಪರಿಹಾರ ತರಬಹುದು ಎಂಬ ನಮ್ಮ ನಿರೀಕ್ಷೆ ಹುಸಿಯಾಗಿದೆ. ಇವರ್ಯಾರೂ ರಾಜ್ಯದ ನೊಂದ ರೈತರು, ಜನರ ಪರ ಧ್ವನಿ ಎತ್ತಿಲ್ಲ, ಹೀಗಾಗಿ ಕೇಂದ್ರ ಕರ್ನಾಟಕವನ್ನು ಪರಿಹಾರದ ವಿಚಾರದಲ್ಲಿ ಅಲಕ್ಷಿಸಿದೆ ಎಂದೂ ಡಾ. ಅಜಯ್ ಸಿಂಗ್ ದೂರಿದರು. 2019 ರಲ್ಲಿಯೂ ಮಳೆ ಹಾನಿಗೆ ಪರಿಹಾರ ನೀಡಲಾಗಿಲ್ಲವೆಂದು ಂಕಿ- ಸಂಖ್ಯೆ ವಿವರಿಸಿದ ಅವರು ಂದೂ ಸಹ ರಾಜ್ಯ 35, 160ಕೋಟಿ ರು ಪರಿಹಾರ ಕೋರಿದ್ದರೆ ಕೇಂದ್ರದಿಂದ ಬಂದಿದ್ದು 1, 829 ಕೋರು, ಅದೂ 3 ತಿಂಗಳ ನಂತರ, ಈ ಬಾರಯಂತೂ 577 ಕೋಟಿ ರು ಪರಿಹಾರ ನೀಡಿದ್ದಾರೆಂದು ನೆರೆ ಪರಿಹಾರದಲ್ಲಿನ ಕೇಂದ್ರದ ಮಲತಾಯಿ ಧೋರಣೆಯನ್ನು ಖಂಡಿಸಿದರು.

ಕಲಬುರಗಿಯಲ್ಲಿ ಭಾರಿ ಹಾನಿ ಭೀಮಾ ಪ್ರವಾಹದಿಂದಾಗಿ ಅಫಜಲ್ಪುರ ಹಾಗೂ ಜೇವರ್ಗಿಯಲ್ಲಿ ಭಾರಿ ಹಾನಿ ಉಂಟಾದರೂ ಪರಿಹಾರ ಇಂದಿಗೂ ನೊಂದವರಿಗೆ ಸಿಕ್ಕಿಲ್ಲ. ಸಿಎಂ ವೈಮಾನಿಕ ಸಮೀಕ್ಷೆ ಮಾಡಿದರೂ ಪರಿಹಾರ ನೀಡುವಲ್ಲಿನ ವಿಳಂಬ ನೊಂದವರ ಕಣ್ಣೀರು ಹೆಚ್ಚುವಂತೆ ಮಾಡಿದೆ ಎಂದ ಡಾ. ಅಜಯ್ ಸಿಂಗ್ ನೂರಾರು ಎಕರೆ ರೈತರ ಬೆಳೆ ಹಾಳಾಗಿದೆ. ಅಫಲ್ಪುರ, ಜೇವರ್ಗಿಯಲ್ಲಂತೂ 90 ಹಳ್ಳಿಗಳಿಗೆ ಪ್ರವಾಹ ಕಾಡಿದೆ. 1112 ಕುಟುಂಬ ನೊಂದಿವೆ. ಇವರಿಗೆ ಇಂದಿಗೂ ಹಣ ಬಂದಿಲ್ಲ. ಸಾವಿರಾರು ಮನೆಗಳು ನೆಲಕ್ಕೆ ಉರುಳಿವೆ. ಇವರಿಗೆಲ್ಲರಿಗೂ ಇಂದಿಗೂ ಯಾರೂ ದಿಕ್ಕಿಲ್ಲದಂತಾಗಿದೆ ಎಂದು ನೊಂದವರ ಗೋಳು ವಿವರಿಸಿದರು.

ಈ ಬಿಜೆಪಿ ಸರಕಾರ ನುಡಿದಂತೆ ನಡೆಯುತ್ತಿಲ್ಲವೆಂದು ಬಸವಣ್ಣನವರ ವಚನ ವಿವರಿಸಿದ ಡಾ. ಅಜಯ್ ಸಿಂಗ್ ರೈತರ ಹೆಸರಲ್ಲಿ ಪ್ರಮಾಣ ಮಾಡಿದ್ದೀರಿ, ನಮ್ಮ ಸಂಸದರು, ಸಚಿವರು ಎಲ್ಲರು ಸೇರಿಕೊಂಡು ಇನ್ನಾದರೂ ನೊಂದವರ ಕಣ್ಣೀರು ಒರೆಸಲು ಸಿದ್ಧರಾಗಿರಿ ಎಂದು ಆಗ್ರಹಿಸಿದರು. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಕೊರೋನಾ ಕಾರಣ ಹೇಳಿ ಜಿಲ್ಲೆಗೇ ಬಂದಿಲ್ಲ. ಆದರೆ ಇತರೆ ಯುವ ಸಚಿವರಿಗೆ ಏನಾಗ್ತಿತು? ಜಿಲ್ಲೆಗೆ ಯಾರೂ ಬಾರದೆ ನೊಂದವರ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದು ಕಲಬುರಗಿ ಜಿಲ್ಲೆಯ ಅನಾಥ ಪರಿಸ್ಥಿತಿಯನ್ನು ಡಾ. ಅಜಯ್ ಸಿಂಗ್ ಸದನದಲ್ಲಿದ್ದವರ ಕಣ್ಣಿಗೆ ಕಟ್ಟುವಂತೆ ವಿವರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here