ಗೋಹತ್ಯೆ ನಿಷೇದ ಕಾಯ್ದೆ ಜಾರಿ ಸ್ವಾಗತ: ಮಹೇಶ ಬೀದರಕರ

0
249

ಕಲಬುರಗಿ: ಗೋಹತ್ಯೆ ಕಾಯ್ದೆ ನಿಷೇದ ಜಾರಿಯ ವಿಷಯವನ್ನು ಒಂದು ರಾಜಕೀಯ ದಾಳವಾಗದೆ ಗೋವುಗಳ ರಕ್ಷಣೆ ತನ್ಮಮೂಲಕ ಬೇಸಾಯ ಪೋಷಣೆಗೆ ರಾಜ್ಯ ಸರ್ಕಾರ ಕಾಯ್ದೆ ಜಾರಿ ಮಾಡಲು ಮನಸ್ಸು ಮಾಡಿದ್ದು ಉಳಿದ ಎಲ್ಲಾ ರಾಜಕೀಯ ಪಕ್ಷಗಳು ಒಂದುಗೂಡಿ ನಮ್ಮ ಸಂಸ್ಕ್ರತಿ ಹಾಗೂ ಗೋಸಂತತಿ ಉಳಿಸಿಕೊಳ್ಳಲು ಸರ್ಕಾರ ತೆಗೆದುಕೊಂಡ ಕಾಯ್ದೆ ಜಾರಿ ನಿರ್ಧಾರ ಸ್ವಾಗತ ಎಂದು ಕುಸನೂರ ಹೊರ ವಲಯದ ಮಾಧವ ಗೋ ಶಾಲೆಯಲ್ಲಿ ಕಾಯ್ದೆಯ ಸಂಭ್ರಮಾಚರಣೆಯ ಸಮಾರಂಭದಲ್ಲಿ ಗೋವುಗಳಿಗೆ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ನಿರಂತರವಾಗಿ ಗೋ ಸೇವೆ ಮಾಡುತ್ತಿರುವ ಮಹೇಶ ಬೀದರಕರವರು ಹರ್ಷ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಗೋ ಭಾವನಾತ್ಮಕ, ಸಂಸ್ಕೃತಿಕ ಮತ್ತು ಸಂಪ್ರದಾಯಕ ಆಯಾಮಗಳನ್ನೊಳಗೊಂಡಿದೆ. ಭಾರತದಲ್ಲಿ ಗೋವಿಗೆ ಇರುವ ಪೂಜ್ಯ ಸ್ಥಾನ ಪ್ರಪಂಚದ ಬೇರೆ ಯಾವ ದೇಶದಲ್ಲಿಯೂ ಇಲ್ಲ ಇಂತಹ ಒಂದು ಸುನಾತನ ಸಂಸ್ಕ್ರತಿ ಉಳಿಸುವುದು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕೆಂಬ ಸದ್ದುದ್ದೇಶದಿಂದ ಕಾಯ್ದೆ ಜಾರಿಯ ಸಂಭ್ರಮ ಆಚರಣೆಯಲ್ಲಿ ಗೆಳೆಯ ಸಂಗಮೇಶ ಕರಡಿಯವರು ತಮ್ಮ ಹುಟ್ಟುಹಬ್ಬದ ಆಚರಣೆಯನ್ನು ಗೋವುಗಳಿಗೆ ವಿಷೇಶ ಪೂಜೆ ಸಲ್ಲಿಸುವುದರೊಂದಿಗೆ ಆಚರಿಸುಕೊಳ್ಳುತ್ತಿರುವುದು ತುಂಬ ಶ್ಲಾಘನೀಯವಾದುದು ಏಕೆಂದರೆ ಹುಟ್ಟುಹಬ್ಬ ಸಂಭ್ರಮ ವ್ಯಯಕ್ತಿಕವಾದರು ಇಂತಹ ಸಮಾರಂಭ ಆಯೋಜಿಸಿ ಸಾರ್ವತ್ರಿಕವಾಗಿ ಆಚರಿಸುವುದರೊಂದಿಗೆ ಬಂದು-ಬಳಗದವರಿಗೂ ವಿಶೇಷವಾಗಿ ಸಣ್ಣ-ಸಣ್ಣ ಮಕ್ಕಳಿಗೂ ನಮ್ಮ ಸಂಸ್ಕೃತಿ ಹಾಗೂ ಪದ್ಧತಿಯಲಿರುವ ವಿಶೇಷತೆ ಬಗ್ಗೆ ಬೆಳಕು ಚಲ್ಲುವಂತಹ ಕಾರ್ಯಕ್ರಮ ಇದಾಗಿದೆ ಎಂದು ವಚನೋತ್ಸವ ಪ್ರತಿಷ್ಠಾನದ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡಿದರು.

Contact Your\'s Advertisement; 9902492681

ಸದರಿ ಕಾಯ್ದೆಯ ಜಾರಿಯ ಸಂಭ್ರಮಾಚರಣೆಯಲ್ಲಿ ಪ್ರೋ. ಅರವಿಂದ ಕರಡಿ, ಡಾ. ಶರಣಬಸಪ್ಪ ಕರಡಿ, ಸಂಗಮೇಶ ಕರಡಿ, ಶಿವಶರಣ ಪಾಟೀಲ್, ಹಣಮಂತರಾವ ಪಾಟೀಲ್, ರಾಜಶೇಖರ ಮರಪಳ್ಳಿ, ವಿಲಾಸ ಹಸರಗುಂಡೆ, ಪ್ರವೀಣ ಯಾಳಗಿ, ಸಾಗರ ರಾಮಣ್ಣ, ಅರ್ಪಣಾ, ಚೇತನ, ಮಹಾನಂದ, ಜ್ಯೋತಿ, ಸುಮಂಗಲಾ, ಪ್ರತೀಕ್ಷಾ, ತನುಷ್ಕಾ, ಆರೂಷ ಕರಡಿ ಹಾಗು ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here