ಹಜರತ್ ಸಾತೂ ಶಹೀದ್ ದರ್ಗಾಕ್ಕೆ ಜಿಲ್ಲಾ ವಕ್ಫ್ ಅಧ್ಯಕ್ಷ ಖಾಜಾ ಹುಸೇನ್ ಆತನೂರ್ ಭೇಟಿ

0
46

ಕಲಬುರಗಿ: ತಾಲ್ಲೂಕಿನ ಸೈಯದ್ ಚಿಂಚೋಳಿ ಗ್ರಾಮದಲ್ಲಿರುವ ಹಜರತ್ ಸಾತೋ ಶಹೀದ್ ದರ್ಗಾಕ್ಕೆ ಜಿಲ್ಲಾ ವಕ್ಛ್ ಅಧ್ಯಕ್ಷ ಖಾಜಾ ಹುಸೇನ್ ಅತನೂರ ಅವರು ಭೇಟಿ ನೀಡಿ ಫಾತೇಹ ನೆರೆವೇರೆಸಿದರು.

ದರ್ಗಾ ಹಜರತ್ ಸಾತೋ ಶಹೀದ್ ರವರ ಅಂವಶ ಪರಂಪರೆದ ಮುತವಲ್ಲಿ ಹಾಗೂ ಸಜ್ಜಾದ ನಶೀನ್ ಅಶ್ಪ್ಪಾಕ್ ಅಹ್ಮದ ಸಿದ್ದಿಕಿ ರವರು ಅಧ್ಯಕ್ಷರಿಗೆ ಸ್ವಾಗತಿಸಿ ಮತ್ತು ದರ್ಗಾದ ಬಗ್ಗೆ ಮಾಹಿತಿ ನೀಡಿದರು. ನಂತರ ಪರಿಸ್ಥಿತಿ ಗಮನದಲ್ಲಿಟ್ಟು ಕೊಂಡು ಮುತ್ತವಲಿಯಂದ ದರ್ಗಾಕ್ಕೆ ಉದ್ಬವಿಸುವ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

Contact Your\'s Advertisement; 9902492681

ಮುತವಲ್ಲಿ ಅಶ್ಪ್ಪಾಕ್ ಅಹ್ಮದ ಸಿದ್ದಿಕಿ ಅವರು ಜಿಲ್ಲಾ ವಕ್ಛ್ ಅಧ್ಯಕ್ಷರಿಗೆ ದರ್ಗಾ ಹಳ್ಳಿಯ ಜನಸಂಖ್ಯೆಯಿಂದ ೩ ಕಿ.ಮಿ ದೂರದಲ್ಲಿದೆ ಮತ್ತು ಹಲವಾರು ದಶಕಗಳಿಂದ ದರ್ಗಾಕ್ಕೆ ಯಾವುದೇ ಒಂದು ನಿಶ್ಚಯ ದಾರಿ, ರಸ್ತೆ ಇಲ್ಲ. ಪಕ್ಕ ರಸ್ತೆಯಿಲ್ಲದ ಕಾರಣ ಎಲ್ಲಾ ದರ್ಗಾಕ್ಕೆ ಬರುವ ಜನರಿಗೆ ಭಕ್ತಾದಿಗಳಿಗೆ ಹಲವಾರು ಸಮಸ್ಯೆ ಆಗುತ್ತಿದೆ ಹಾಗೂ ಇದೇ ಕಾರಣ ದರ್ಗಾ ಶರೀಫ್ ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಯಾವುದೇ ತರಹದ ಅಭಿವೃದ್ಧಿ ಪಡಿಸುವುದಕ್ಕೆ ಆಗುತ್ತಿಲ್ಲಾ ಎಂದರು.

ಸೈಯದ್ ಚಿಂಚೋಳಿ ಗ್ರಾಮದಲ್ಲಿ ಹಿಂದಿನ ಎಲ್ಲಾ ಪಂಚಾಯತಿಯ ಚುನಾಯಿತ ಸದಸ್ಯರು ದರ್ಗಾ ಸಮಸ್ಯೆ ಹಾಗೂ ರಸ್ತೆಯ ಮಾಡಿಲ್ಲ ಎಂದು ಜಿಲ್ಲಾ ವಕ್ಛ್ ಅಧ್ಯಕ್ಷ ಖಾಜಾ ಹುಸೇನ್ ಅತನೂರ ಅವರು ಕೋಪಗೋಂಡು ಗ್ರಾಮದ ಜನರಿಗೆ ಭಕ್ತಾಧಿಗಳಿಗೆ ಹೇಳಿದ್ದರು.
ಜಿಲ್ಲಾ ವಕ್ಛ್ ಅಧ್ಯಕ್ಷ ಖಾಜಾ ಹುಸೇನ್ ಅತನೂರ ಅವರು ದಕ್ಷಿಣ ಮತ ಕ್ಷೆತ್ರದ ಶಾಸಕರು ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರನ್ನು ಭೇಟಿ ನೀಡುತ್ತೆನೆ ಮತ್ತು ದರ್ಗಾದ ವರೆಗೆ ೧ ಕಿ.ಮಿ ರಸ್ತೆಗಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಹೇಳುತ್ತೆನೆ. ಅಶ್ವಾಸನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅಬ್ದುಲ್ ಸಮದ್ ಸಿದ್ದಿಖಿ, ಇಲಿಯಾಸ್ ಖಾನ್ ಸಾಬ್, ಸದ್ದಾಂ ಹುಸೇನ್, ಮು:ಇಮ್ರಾನ್, ಹಿದಾಯತುಲ್ಲಾ ಖಾಜಿ, ಅಬ್ಬದುಲ್ ಮಜೀದ್ ಸಿದ್ದಿಖಿ, ಅಬ್ದುಲ್ ರಫೀಖ್ ಸಿದ್ದಿಖಿ, ಅಬ್ದುಲ್ ಸತ್ತಾರ್ ಸಿದ್ದಿಖಿ, ಮಹ್ಮದ ಜಾನಿ, ಮಹ್ಮದ ಗೌಸ ಖಾದಿಮ್ ಹಾಗೂ ಗ್ರಾಮಸ್ಥರು ದರ್ಗಾದ ಭಕ್ತಾಧಿಗಳು ಉಪಸ್ಥಿತಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here