ಮಾಜಿ ಸಿಎಂ ವಿರೇಂದ್ರ ಪಾಟೀಲ್, ಧರಂಸಿಂಗ್ ಅವರ ಭಾವಚಿತ್ರವಿರುವ ಅಂಚೆ ಲಕೋಟೆ ಬಿಡುಗಡೆ

0
91

ಕಲಬುರಗಿ: ಇದೇ ಡಿ. 18 ರಂದು ಇಲ್ಲಿನ ಹೈಕಶಿ ಸಂಸ್ಥೆಯ ಪಿಡಿಎ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ರಾಜ್ಯ ಕಂಡ ಮಾಜಿ ಸಿಎಂಗಳಾದ ದಿ. ವಿರೇಂದ್ರ ಪಾಟೀಲ್ ಹಾಗೂ ದಿ. ಧರಂಸಿಂಗ್ ಅವರುಗಳ ಸವಿ ನೆನಪಿಗಾಗಿ ಭಾವಚಿತ್ರ ಸಹಿತ ವಿಶೇಷ ಅಂಚೆ ಲಕೋಟೆ ಸಿದ್ಧಗೊಂಡಿದ್ದು ಅವರ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ದಿ. ವೀರೇಂದ್ರ ಪಾಟೀಲ್ 2 ಬಾರಿ ನಾಡಿನ ಸಿಎಂ ಆಗಿ ದಕ್ಷ ಆಡಲಿತ ನೀಡಿದವರಾದರೆ, ದಿ. ಧರಂಸಿಂಗ್ ಅವರೂ ರಾಜ್ಯದ ಮೊದಲ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಗಳಾಗಿ ಜನಪರ ಆಡಳಿತಕ್ಕೆ ಹೆಸರಾದವರು. ಇವರಿಬ್ಬರು ನಾಡಿಗಷ್ಟೇ ಅಲ್ಲ ಕಲಬುರಗಿ ಜಿಲ್ಲೆಗೂ ನೀಡಿರುವ ಕೊಡುಗೆ ಅಪಾರ. ಇವರ ಕೊಡುಗೆಗಳನ್ನು ಸ್ಮರಿಸುವ ಹಾಗೂ ಇವರ ನೆನಪು ಸದಾಕಾಲ ಉಳಿಯುವಂತಾಗಲು ಅಂಚೆ ವಿಶೇಷ ಲಕೋಟೆ ಸಿದ್ಧಗೊಂಡಿವೆ.

Contact Your\'s Advertisement; 9902492681

ದಿ. ವಿರೇಂದ್ರರ ಅಂಚೆ ಲಕೋಟೆಯನ್ನು ಅವರ ಪುತ್ರಿ ಲಲಿತಾ ಜವಳಿ ಹಾಗೂ ದಿ. ಧರಂಸಿಂಗ್ ಅವರ ಅಂಚೆ ಲಕೋಟೆಯನ್ನು ಅವರ ಧರ್ಮಪತ್ನಿಯಾದ ಶ್ರೀಮತಿ ಪ್ರಭಾವತಿ ಧರಂಸಿಂಗ್ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದಲ್ಲಿ ದಿ. ವಿರೇಂದ್ರ ಪಾಟೀಲರ ಪುತ್ರ, ಮಾಜಿ ಶಾಸಕ ಕೈಲಾಶ  ಪಾಟೀಲ್, ಅವರ ಅಳಿಯ ಡಾ. ಬಿಜಿ, ಜವಳಿ, ಮೊಮ್ಮಗ ನಿತಿನ್ ಜವಳಿ ಮತ್ತು ದಿ. ಧರಂಸಿಂಗ್ ಅವರ ಪುತ್ರ, ಜೇವರ್ಗಿ ಶಾಕರಾದ ಡಾ. ಅಜಯ್ ಸಿಂಗ್, ಎಂಎಲ್ಸಿಗಳಾದ ವಿಜಯ್ ಸಿಂಗ್ ಪಾಲ್ಗೊಳ್ಳುತ್ತಿದ್ದಾರೆ.

ಸಮಾರಂಭದಲ್ಲಿ ಶಾಸಕರಾದ ಶರಣಬಸಪ್ಪ ದರ್ಶನಾಪುರ, ಪ್ರಿಯಾಂಕ್ ಖರ್ಗೆ, ಎಂವೈ ಪಾಟೀಲ್, ಖನೀಜ್ ಫಾತೀಮಾ, ಅಂಚೆ ಇಲಾಖೆಯ ಅದಿಕಾರಿ  ಬಿಆರ್ ನನಜಗಿ, ಹೈಕಶಿ ಸಂಸ್ಥೆ ಅಧ್ಯಕ್ಷ ಡಾ. ಬೀಮಾಶಂಕರ ಬಿಲಗುಂದಿ ಸೇರಿದಂತೆ ದಿ. ವಿರೇಂದ್ರ ಪಾಟೀಲರು ಮತ್ತು ದಿ. ಧರಂಸಿಂಗ್ ಅವರ ಅಭಿಮಾನಿಗಳು, ಕುಟುಂಬ ವರ್ಗದವರುಪಾಲ್ಗೊಳ್ಳುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here