ಸುರಪುರದಲ್ಲಿ ಜಿಲ್ಲಾ ಮಟ್ಟದ ಅಖಿಲ ಭಾರತ ಗೃಹ ರಕ್ಷಕ ದಿನಾಚರಣೆ

0
32

ಸುರಪುರ: ನಗರದ ದರಬಾರ ಶಾಲಾ ಆವರಣದಲ್ಲಿ ಜಿಲ್ಲಾ ಮಟ್ಟದ ಅಖಿಲ ಭಾರತ ಗೃಹ ರಕ್ಷಕ ದಿನಾಚರಣೆಯನ್ನು ಆಚರಿಸಲಾಯಿತು.ಬೆಳಿಗ್ಗೆ ೮ ಗಂಟೆಗೆ ಕಂಪನಿ ಕಮಾಂಡರ ಯಲ್ಲಪ್ಪ ಹುಲಿಕಲ್ ಗೃಹ ರಕ್ಷಕ ಕಚೇರಿ ಮೇಲೆ ಗೃಹ ರಕ್ಷಕ ಧ್ವಜಾರೋಹಣ ನಡೆಸುವ ಮೂಲಕ ಚಾಲನೆ ನೀಡಿದರು.

ನಂತರ ನಡೆದ ಗೃಹ ರಕ್ಷಕರ ಪಥ ಸಂಚಲನಕ್ಕೆ ನಗರಸಭೆ ಯೋಜನಾಧಿಕಾರಿ ಓಂಕಾರ ಪೂಜಾರಿಯವರು ಚಾಲನೆ ನೀಡಿದರು.ಪಥ ಸಂಚಲನವು ನಗರದ ಎಲ್ಲಾ ಪ್ರಮುಖ ಬೀದಿಗಳಲ್ಲಿ ನಡೆಸಿ ರಾಷ್ಟ್ರ ನಾಯಕರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ನಂತರ ದರಬಾರ ಶಾಲಾ ಆವರಣದಲ್ಲಿ ಬಂದು ಪಥ ಸಂಚಲನ ಸಮಾಪ್ತಿ ಮಾಡಲಾಯಿತು.

Contact Your\'s Advertisement; 9902492681

ನಂತರ ನಡೆದ ಗೃಹ ರಕ್ಷಕ ದಿನಾಚರಣೆ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ರಡ್ಡಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ,ಗೃಹ ರಕ್ಷಕ ದಳದ ಸಿಬ್ಬಂದಿಯ ಕಾರ್ಯ ಸಧಾಕಾಲ ಸ್ಮರಣಿಯವಾಗಿದೆ,ಯಾವುದೇ ಅಪಾಯದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆ ಮಾಡುವ ಗೃಹ ರಕ್ಷಕರಿಗೆ ಸರಕಾರ ಎಲ್ಲ ಅಗತ್ಯತೆಗಳನ್ನು ಈಡೇರಿಸಬೇಕೆಂದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಮಾಂಡೆಂಟ್ ಪ್ರವೀಣ ದೇಶಮುಖ ಅವರು,ನಿಷ್ಕಾಮ ಸೇವೆಯೆ ಪರಮಗುರಿ ಎಂದು ಬದುಕು ಸಾಗಿಸುತ್ತಿರುವ ನಮ್ಮ ಗೃಹ ರಕ್ಷಕರಿಗೆ ನನ್ನ ಅವಧಿಯಲ್ಲಿ ಏನು ಬೇಕು ಆ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸುರಪುರ ಘಟಕಾಧಿಕಾರಿ ಯಲ್ಲಪ್ಪ ಹುಲಿಕಲ್ ಅವರಿಗೆ ಬಸವ ಜ್ಯೋತಿ ಪ್ರಶಸ್ತಿ ಲಭಿಸಿದ್ದಕ್ಕಾಗಿ ಅಭಿನಂಧಿಸಲಾಯಿತು.ಇದೇ ಸಂದರ್ಭದಲ್ಲಿ ದರಬಾರ ಶಾಲಾ ಮುಖ್ಯಗುರು ಸೋಮರಡ್ಡಿ ಮಂಗಿಹಾಳ ಶಹಾಪುರ ಘಟಕಾಧಿಕಾರಿ ಮಾರ್ಥಂಡಪ್ಪ ಮುಂಡಾಸ್ ಬುಡ್ಡಪ್ಪ ಚವಲ್ಕರ್ ರಾಜು ಪಾಟೀಲ್ ಮಾತನಾಡಿದರು.ನಂತರ ಹುತಾತ್ಮ ಗೃಹ ರಕ್ಷಕರಿಗೆ ಎರಡು ನಿಮಿಷಗಳ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು ಹಾಗು ದೇಶ ಪ್ರೇಮದ ಕುರಿತು ಪ್ರಮಾಣ ವಚನವನ್ನು ಬೋಧಿಸಲಾಯಿತು.

ಇದೇ ಸಂದರ್ಭದಲ್ಲಿ ಹುಣಸಗಿಯ ಪ್ಲಾಟಿನ್ ಕಮಾಂಡರ್ ಆಶಿಕ್ಷ ವರದಿ ವಾಚನ ಮಾಡಿದರು,ನಂತರ ಶಹಾಪುರದ ಮಲ್ಲಪ್ಪ ಕೊಂಬಿನ್ ಮುರ್ತುಜಾ ಮುಲ್ಲಾ ರಮೇಶ ಅಂಬುರೆ ಅಂಬಾದಾಸ್ ಸಯದಾಪುರ ಶ್ರೀಕಾಂತ ಇವರುಗಳನ್ನು ಸನ್ಮಾನಿಸಲಾಯಿತು.ಭೀಮರಾಯ ಹುಲಿಕಲ್ ಸೂರ್ಯಕಾಂತ ಮಾರ್ಗೆಲ್ ಶರಣು ಯಾದಗಿರಿ ಅಂಬ್ರಪ್ಪ ಅಲ್ಲವುದ್ದಿನ್ ಮಲ್ಲಿಕಾರ್ಜುನ ಗುಡಗುಂಟಿ ಕೊಟ್ರಯ್ಯಸ್ವಾಮಿ ಉಪಸ್ಥಿತರಿದ್ದರು.

ಶಹಾಪುರ ಪ್ಲಾಟೂನ್ ಕಮಾಂಡರ್ ದೇವಿಂದ್ರಪ್ಪ ನಾಶಿ ಸ್ವಾಗತಿಸಿದರು,ಹುಣಸಗಿ ಘಟಕದ ಪ್ರಭಾರಿ ವೆಂಕಟೇಶ್ವರ ಸುರಪುರ ವಂದಿಸಿದರು,ದಶರಥ ನೆಕ್ಕಲ್ ಪ್ರಾರ್ಥಿಸಿದರು,ಹೆಮುಲು ರಾಠೋಡ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here