ಸುರಪುರ: ದೇಶದಲ್ಲಿನ ಎಲ್ಲಾ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂಧಿಸುವ ಯಾವುದಾದರು ಸಂಘಟನೆ ಇದ್ದರೆ ಅದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಂಚೂಣಿಯಲ್ಲಿದೆ ಎಂದು ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಮಾತನಾಡಿದರು.
ನಗರದ ದರಬಾರ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಸಮ್ಮೇಳನದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿ,ದೇಶದ ಜನರು ಗಮನಿಸುತ್ತಿರುವಂತೆ ಎಬಿವಿಪಿ ಒಂದು ಶಿಸ್ತುಬದ್ಧ ಸಂಘಟನೆಯಾಗಿದೆ,ಈ ಸಂಘಟನೆ ಕೇವಲ ವಿದ್ಯಾರ್ಥಿಗಳ ಸಮಸ್ಯೆಗಳಿಗಾಗಿ ಮಾತ್ರ ಹೋರಾಟ ನಡೆಸದೆ ಯುವಕರಲ್ಲಿ ದೇಶಪ್ರೇಮ ಮೂಡಿಸುವಲ್ಲಿಯೂ ಸಕ್ರೀಯವಾಗಿದೆ ಎಂದರು.
ನಂತರ ರಾಷ್ಟ್ರೀಯ ಸಮ್ಮೇಳನದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಸಮ್ಮೇಳನ ಯಶಸ್ವಿಯಾಗಲೆಂದು ಹಾರೈಸಿದರು.ಈ ಸಂದರ್ಭದಲ್ಲಿ ಎಬಿವಿಪಿ ವಿಭಾಗಿಯ ಪ್ರಮುಖ ಡಾ: ಉಪೇಂದ್ರ ನಾಯಕ ಸುಬೇದಾರ ವಿಭಾಗಿಯ ಸಹ ಸಂಚಾಲಕ ನಾಗರಾಜ ಮಕಾಶಿ ಮುಖಂಡರಾಧ ಸುನೀಲ ವ್ಯಾಸ್ ಕ್ಯಾತಪ್ಪ ಮೇದಾ ಅಯ್ಯಣ್ಣ ಸೇರಿದಂತೆ ಅನೇಕರಿದ್ದರು.