ಕಲಬುರಗಿ: ಹೈದರಾಬಾದ್ ಕರ್ನಾಟಕ ಸೋಷಿಯಲ್ ಜಾಗೃತಿ ಫೋರಂ ವತಿಯಿಂದ ನಗರದ ಮೆಕ್ಕಾ ಕಾಲೋನಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿ ವರ್ಗದವರು ತೊಂದರೆ ಕೊಡುವುದು ತಪ್ಪಿಸಲು ಮತ್ತು ಗ್ರಾಹಕರಿಗೆ ಕಾಲಮಿತಿಯೊಳಗೆ ಕೆಲಸ ಮಾಡಿಕೊಡುವುದು ಹಾಗೂ ಹಣ ವರ್ಗಾವಣೆ ಮಾಡಲು ಅನುಕೂಲ ಮಾಡಿಕೊಡುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ದು:ಖದ ವಿಷಯವೆಂದರೆ ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್ ಗೆ ಬರುವ ಗ್ರಾಹಕರೋಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ.ಈ ಕೂಡಲೇ ಜಿಲ್ಲಾಧಿಕಾರಿ ಬ್ಯಾಂಕ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಫೋರಂ ಅಧ್ಯಕ್ಷ ಸಾಜೀದ ಅಲಿ ರಂಜೋಳ್ಳ್ವಿ ಆಗ್ರಹಿಸಿದ್ದಾರೆ.
ಪದಾಧಿಕಾರಿಗಳಾದ ಶಕೀಲ್ ಅಹಮದ್, ವಾಸೀಂ ಶಮನ್, ಬಾಬಾ ಫಕ್ರುದ್ದೀನ್,ಮತೀಯ ಯಸದಾನಿ ಇತರರು ಇದ್ದರು.