ಕುವೆಂಪು ಪ್ರತಿಮೆ ಮೇಲ್ಛಾವಣಿ ನಿರ್ಮಿಸಲು ಕುಲಪತಿಗೆ ಮನವಿ: ವಿವಿಯಿಂದ ಶೀಘ್ರ ಕ್ರಮದ ಭರವಸೆ

0
50

ಮೈಸೂರು: ಕರ್ಮಭೂಮಿ ಅವರ ಕನಸಿನ ಕೂಸು ಮಾನಸಗಂಗೋತ್ರಿ ಆವರಣದ ಪ್ರಮುಖ ದ್ವಾರದಲ್ಲಿ ನಿರ್ಮಿಸಿರುವ ವಿಶ್ವಮಾನವ ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಹಾಕವಿ ಕುವೆಂಪುರವರ ಪುತ್ಥಳಿಯ ಡಿ. 29ರ ಒಳಗೆ ಮೇಲ್ಛಾವಣಿ ನಿರ್ಮಾಣಕ್ಕೆ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿಯ ನಿಯೋಗ ಕುಲಪತಿಗಳಿಗೆ ಮನವಿ ಸಲ್ಲಿಸಿದರು.

ಕುವೆಂಪು ಅವರ ಪ್ರತಿಮೆಯು ಬಿಸಿಲು, ಮಳೆ,ಚಳಿಗೆ ತೆರೆದುಕೊಂಡಿದ್ದು ಹಕ್ಕಿಪಕ್ಷಿಗಳ ಮಲಮೂತ್ರಗಳು ಪ್ರತಿಮೆಯನ್ನು ವಿರೋಪಗೊಳಿಸುತ್ತಿದ್ದು ದಿನಕಳೆದಂತೆ ಕುವೆಂಪು ಪುತ್ಥಳಿ ಕಳೆಗುಂದುವ ಅಪಾಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

Contact Your\'s Advertisement; 9902492681

ಇದೇ ತಿಂಗಳು ಡಿಸೆಂಬರ್ 29 ರಂದು ಕುವೆಂಪುರವರ ಜನ್ಮ ದಿನಾಚರಣೆ ಒಳಗೆ ಪ್ರತಿಮೆಯ ಮೇಲ್ಭಾಗದಲ್ಲಿ ಮೇಲ್ಛಾವಣಿ ನಿರ್ಮಿಸಿ ಸಂಭವಿಸಲಿರುವ ಎಲ್ಲಾ ಅವಘಡಗಳನ್ನು ತಡೆಗಟ್ಟಿ, ಪ್ರತಿಮೆಗೆ ಯಾವುದೇ ರೀತಿಯ ಅಪಚಾರವಾಗದಂತೆ ಅದರ ಗೌರವ ಘನತೆಗೆ ಕುಂದು ಬಾರದೆಂದು ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಸಮಿತಿಯ ಮನವಿಗೆ ಸ್ಪಂದಿಸಿದ ಕುಲಪತಿಗಳಾದ ಪ್ರೊ.ಜಿ.ಹೇಮಂತ್ ಕುಮಾರ್ ಈ ಒಂದು ಸತ್ಕಾರ್ಯವನ್ನು ಆದಷ್ಟು ಬೇಗ ನೆರವೇರಿಸಿ ಕುವೆಂಪುರವರ ಘನತೆ ,ಗೌರವ ಮೇಳೈಸುವಂತೆ  ನೆಡೆದುಕೊಳ್ಳುವುದು ನನ್ನ ಕರ್ತವ್ಯ ಎಂದು ಭರವಸೆ ನೀಡಿದರು ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷರಾದ ಜಾಕೀರ್ ಹುಸೇನ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ   ಸಾಹಿತಿಗಳು ಪ್ರಗತಿಪರ ಚಿಂತಕರಾದ ಪ್ರೊ.ಕೆ.ಎಸ್.ಭಗವಾನ್, ಕ.ಸಾ.ಪ ನಿಕಟಪೂರ್ವ ಅಧ್ಯಕ್ಷರಾದ ಎಂ.ಚಂದ್ರಶೇಖರ್, ಕ.ಸಾ.ಪ.ಅಧ್ಯಕ್ಷರಾದ ಡಾ.ವೈ.ಡಿ.ರಾಜಣ್ಣ, , ಆ.ಪ್ರ.ಪ್ರ.ಸಮಿತಿಯ ರಾಜ್ಯ ಪ್ರಧಾನ ಸಂಚಾಲಕರಾದ ಡೈರಿ ವೆಂಕಟೇಶ್, ಆ.ಪ್ರ.ಪ್ರ.ಸಮಿತಿಯ ಸಂಚಾಲಕರಾದ ಪ್ರಶಾಂತ್ ಆರ್ಯ ಮತ್ತು ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here