ತೊಗರಿ ಖರೀದಿ ಕೇಂದ್ರ ಪ್ರಾರಂಭಕ್ಕೆ ಒತ್ತಾಯಿಸಿ ನಡು ರಸ್ತೆಯಲ್ಲಿ ತೊಗರಿ ಇಟ್ಟು ಪ್ರತಿಭಟನೆ

0
53

ಚಿಂಚೋಳಿ: ಇಲ್ಲಿನ ಕಾಳಗಿ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಲ್ ಹತ್ತಿರ ಕರ್ನಾಟಕ ಪ್ರಾಂತ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲೆಯಲ್ಲಿ ತೊಗರಿ ಕಟಾವು ನಡೆಯುತಿದ್ದು, ಕೂಡಲೆ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಒತ್ತಾಯಿಸಿ ರಸ್ತೆಯ ಮೇಲೆ ತೊಗರಿ ಛಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆಯಲ್ಲಿ ಸಂಘದ ಅಧ್ಯಕ್ಷರಾದ ಶರಣಬಸಪ್ಪ ಮಮಶೇಟ್ಟಿ ಮಾತನಾಡಿ, ಡಾ.ಎಮ್ ಎಸ್ ಸ್ವಾಮಿನಾಥನ್ ಆಯೋಗದ ವರದಿ ಸಿಫಾರಸ್ಸಿನಂತೆ ಪ್ರತಿ ಕ್ವೀಂಟಲ್ ತೊಗರಿಗೆ 8000 ಸಾವಿರ ಬೆಂಬಲ ಬೇಲೆ ನೀಡಿ, ಹೊರದೇಶದ ತೊಗರಿ ಮೇಲೆ  30℅ ಇಂಪೋರ್ಟ್ ಡಿಯುವುಟಿ ಹಾಕಬೇಕು ಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ರೈತರು ಬೆಳೆದ ಸಂಪೂರ್ಣ ತೊಗರಿ ಖರೀದಿ ಮಾಡಿ, ಹೊರದೇಶದಿಂದ ಆಮದು ಮಾಡಿಕೊಳ್ಳುವ ತೊಗರಿ ಕೈ ಬಿಡಬೇಕೆಂದು ಆಗ್ರಹಿಸಿದರು. ಜೊತೆಗೆ ತೊಗರಿ ಖರೀದಿ ನೊಂದಣಿ ದಿನಾಂಕ ವಿಸ್ತರಿಸಿ, ರಾಜ್ಯ ಸರ್ಕಾರ ಪ್ರತಿ ಕ್ವೀಂಟಾಲ್ ತೊಗರಿಗೆ 2000 ರೂ. ಪ್ರೋತ್ಸಾಹ ಧನ ನೀಡಬೇಕೆಂದು ಸಂಘದ ಕಾರ್ಯಕರ್ತರು ಹಾಗೂ ರೈತರು ಪ್ರತಿಭಟನೆಯಲ್ಲಿ ಒತ್ತಾಯಿಸಿ ತಾಲೂಕು ಅಧಿಕಾರಿ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಲ್ತಾಫ್ ಇನಾಮಂದಾರ, ಗುರುನಂದೆಶ ಕೊಣಿನ, ತಾರಾಚಾಂದ, ಮಲ್ಲುಚಿಕ್ಕಾಗಸಿ, ರಾಮಚಂದ್ರ, ರಾಮುನಾಯಕ, ಮಲ್ಲಮ್ಮ ಮಗಿ, ಸೆಳ್ಳಿಗಿ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here