ಪದವಿ ಪೂರ್ವ ಕಾಲೇಜುಗಳ ಆರಂಭಕ್ಕೆ ಸುರಪುರದಲ್ಲಿ ಪೂರ್ವಸಿದ್ಧತಾ ಸಭೆ

0
30

ಸುರಪುರ: ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜುಗಳ ಆರಂಭ ನಿಮಿತ್ತ ಪ್ರಾಚಾರ್ಯರಿಗಾಗಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಯಾದಗಿರಿ ಡಿಡಿಪಿಯು ಚಂದ್ರಕಾಂತ ಹಿಳ್ಳಿ ಮಾತನಾಡಿ, ಜನವರಿ 21ರಂದು ಕಾಲೇಜುಗಳನ್ನು ಆರಂಭಿಸುವಂತೆ ಸರಕಾರ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಕಾಲೇಜುಗಳನ್ನು ಸಂಪೂರ್ಣವಾಗಿ ಹಾಗೂ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು,ಕಾಲೇಜು ತೆರೆಯಲು ಸಿದ್ಧರಾಗಬೇಕು ಎಂದರು.

Contact Your\'s Advertisement; 9902492681

ಸರಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಮಾನುಸಾರ ಪದವಿ ಪೂರ್ವ ಕಾಲೇಜು 2021 ಜನವರಿ 1ರಿಂದ ಆರಂಭವಾಗಲಿದ್ದು, ಇದಕ್ಕೆ ಬೇಕಾದಂತ ಪೂರ್ವ ಸಿದ್ಧತೆಗಳನ್ನು ತಾಲೂಕಿನ ಎಲ್ಲ ಪ್ರಾಚಾರ್ಯರು ಮಾಡಿಕೊಳ್ಳಬೇಕು. ಸತತ 5 ತಿಂಗಳ ಕಾಲ ತರಗತಿಯನ್ನು ನಡೆಸಬೇಕು. ಕಾಲೇಜಿನ ಸಿಬ್ಬಂದಿ ಹಾಗೂ ಉಪನ್ಯಾಸಕರು, ಪ್ರಾಚಾರ್ಯರು ಸೇರಿದಂತೆ ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆ ವರದಿಯೊಂದಿಗೆ ಹಾಜರಾಗಬೇಕು. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಿಲ್ಲ. ದೇಹದ ಉಷ್ಣತೆ ಮಾಡಿರಬೇಕು.

ಆನ್‍ಲೈನ್ ತರಗತಿಗಳಿಗೆ ಹಾಜರಾಗಬಹುದು. ಒಂದು ತರಗತಿಗೆ ಸುಮಾರು 15-50ವಿದ್ಯಾರ್ಥಿಗಳಿಗೆ ಮಾತ್ರ ಆಸನದ ವ್ಯವಸ್ಥೆ ಮಾತ್ರ ಮಾಡಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಾಲೇಜಿಗೆ ಹಾಜರಾಗಲು ಪಾಲಕರ ಅನುಮತಿ ಪತ್ರ ಕಡ್ಡಾಯವಾಗಿ ಪಡೆದು ತರಗತಿಗೆ ಪ್ರವೇಶ ನೀಡಬೇಕು. ಇದು ದ್ವಿತೀಯ ಪಿಯುಸಿ ತರಗತಿ ನಂತರ ಮುಂದಿನ ಆದೇಶದಂತೆ ಪ್ರಥಮ ಪಿಯುಸಿ ತರಗತಿಳನ್ನು ಆರಂಭಿಸಲಾಗುವುದು ಎಂದರು.

ಪ್ರಾಚಾರ್ಯರಾದ ಸುವರ್ಣ ಅರ್ಜುಣಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹುಣಸಗಿ ಪ್ರಾಚಾರ್ಯ ಚೌಧರಿ, ಪ್ರಭು ಕಾಲೇಜಿನ ಪ್ರಾಂಶುಪಾಲರಾದ ವಾರೀಸ್ ಕುಂಡಾಲೆ, ಭೀಮಣ್ಣ ಭೋಸಗಿ, ಲಿಂಗರಾಜ ಹಿರೇಗೌಡ ಸೇರಿದಂತೆ ತಾಲೂಕಿನ ಎಲ್ಲ ಕಾಲೇಜುಗಳ ಪ್ರಾಚಾರ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here