ಸತತ ಮೂರನೇ ಬಾರಿ ಗೆದ್ದ ಬಾದ್ಯಾಪುರ ಗ್ರಾಮದ ಮಹಿಳೆ

0
31

ಸುರಪುರ: ಕಳೆದ ಎರಡು ಬಾರಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜಯಶಿಲರಾಗಿದ್ದ ತಾಲೂಕಿನ ಬಾದ್ಯಾಪುರ ಗ್ರಾಮದ ಮಹಿಳಾ ಅಭ್ಯಾರ್ಥಿ ಶಿವಮಗ್ಗೆಮ್ಮ ಎಂಬುವವರು ಈಗ ಮೂರನೇ ಬಾರಿ ಆಯ್ಕೆ ಬಯಸಿ ಸ್ಪರ್ಧಿಸಿದ್ದರು,ಅದರಂತೆ ಮೂರನೇ ಬಾರಿಯು ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಗರದ ಶ್ರೀ ಪ್ರಭು ಮಹಾವಿದ್ಯಾಲಯದಲ್ಲಿ ನಡೆದ ಮತ ಎಣಿಕೆ ಸಂದರ್ಭದಲ್ಲಿ ತಮ್ಮ ಅಭ್ಯಾರ್ಥಿಗಳ ಫಲಿತಾಂಶಕ್ಕಾಗಿ ಜಾತಕ ಪಕ್ಷಿಗಳಂತೆ ಫಲಿತಾಂಶದ ಎದುರು ನೋಡುತ್ತಿದ್ದ ಕಾಂಗ್ರೆಸ್ ಬಿಜೆಪಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ತಮ್ಮ ಅಭ್ಯಾರ್ಥಿಗಳ ಫಲಿತಾಂಶದ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರು ಸಂಭ್ರಮಾಚರಣೆ ನಡೆಸಿದರು.

Contact Your\'s Advertisement; 9902492681

ಶ್ರೀ ಪ್ರಭು ಮಹಾವಿದ್ಯಾಲಯದ ರಸ್ತೆಯಲ್ಲಿ ಸೇರಿದ್ದ ಸಾವಿರಾರು ಸಂಖ್ಯೆಯ ಜನರು ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷದ ಧ್ವಜವನ್ನು ಹಿಡಿದು ಸಂಭ್ರಮಾಚರಣೆ ನಡೆಸಿ ಗುಲಾಲು ಎರಚಿ ಸಿಹಿ ಹಂಚಿ ಸಂಭ್ರಮಿಸಿದರು.

ಅಲ್ಲದೆ ಪ್ರಭು ವiಹಾವಿದ್ಯಾಲಯದಿಂದ ಮಹಾತ್ಮ ಗಾಂಧಿ ವೃತ್ತದ ವರೆದ ಮೆರವಣಿಗೆ ನಡೆಸಿ ನಂತರ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ತಮ್ಮ ಪಕ್ಷದ ನಾಯಕರ ಮನೆಗಳಿಗೆ ಭೇಟಿ ನೀಡಿ ಸಂಭ್ರಮಿಸಿದರು.

ಇಡೀ ರಸ್ತೆಯಲ್ಲೆಲ್ಲ ಬರೀ ಗುಲಾಲ ಬಣ್ಣದ್ದೆ ರಂಗು ಹಾಗು ಗೆದ್ದ ಅಭ್ಯಾರ್ಥಿಗಳ ಪರ ಜಯಘೋಷದ್ದೆ ಸದ್ದು.ಇನ್ನು ಬೆಳಿಗ್ಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಫಲಿತಾಂಶಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾಲೇಜು ಮೈದಾನದೊಳಗೆ ಬರಲು ಹವಣಿಸುವುದನ್ನು ತಡೆಯಲು ಪೊಲೀಸರು ಹರಸಾಹಸ ಪಡುವಂತಾಯಿತು.ಅಲ್ಲದೆ ಕಾಲೇಜಿನ ಹಿಂಬಾಗದಿಂದ ಒಳಗೆ ಬರು ಪ್ರಯತ್ನಿಸುವವರಿಗೆ ಲಘು ಲಾಠ ಪ್ರಹಾರ ನಡೆದಿ ಚದುರಿಸಿದರು.

ಇಡೀ ತಾಲೂಕಿನ ಎಲ್ಲಾ 20 ಪಂಚಾಯತಿಗಳ ಮತ ಎಣಿಕೆ ನಡೆದಿದ್ದು ರಾತ್ರಿ 9 ಗಂಟೆಯ ವರೆಗಿನ ಫಲಿತಾಂಶವನ್ನು ವೀಕ್ಷಿಸಿದಲ್ಲಿ ತಾಲೂಕಿನ ಅತಿ ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವ ಬಗ್ಗೆ ಹೇಳಲಾಗುತ್ತಿದ್ದು ಎಲ್ಲಾ ಪಂಚಾಯತಿಗಳ ಮತ ಎಣಿಕೆ ಮುಗಿದ ನಂತರವೇ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.

ಇನ್ನು ಮತ ಎಣಿಕೆಯ ಸಂದರ್ಭದಲ್ಲಿ ಅಂಕಿ ಅಂಶ ತಪ್ಪಾಗಿದೆ ಎಂದು ಅಭ್ಯಾರ್ಥಿಗಳ ಪರವಾಗಿ ವಿರೋಧ ವ್ಯಕ್ತವಾಗಿದ್ದರಿಂದಾಗಿ ಬೇವಿನಾಳ ಪೇಠ ಅಮ್ಮಾಪುರ ಮತ್ತು ದೇವತ್ಕಲಾ ಗ್ರಾಮಗಳಲ್ಲಿ ಮರು ಮತ ಎಣಿಕೆಗೆ ಮನವಿ ಮಾಡಲಾಗಿತ್ತು,ಅದರಂತೆ ಸದ್ಯ ಬಾಕಿ ಉಳಿದಿರುವ ಮತಗಳ ಎಣಿಕೆ ನಂತರ ಮನವಿ ಮಾಡಿದ ಗ್ರಾಮಗಳಲ್ಲಿ ವಾರ್ಡುಗಳ ಮರು ಮತದಾನ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here