ಗ್ರಾಮ ಪಂಚಾಯತಿ ಮತ ಎಣಿಕೆ:ಎಲ್ಲೆಡೆ ಮುಗಿಲು ಮುಟ್ಟಿದ ಸಂಭ್ರಮ

0
23

ಸುರಪುರ: ತಾಲೂಕಿನ 20 ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಂಡಿದ್ದು ರಾತ್ರಿ ವರೆಗೆ ಮುಂದು ವರೆದಿದೆ. ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರು ಸಂಜೆ ನಾಲ್ಕು ಗಂಟೆಯ ವರೆಗೆ ಎಲ್ಲಾ ಮತ ಎಣಿಕೆ ಮುಗಿಯಲಿದೆ ಎಂದು ತಿಳಿಸಿದ್ದರಾದರು ಸಂಜೆಯ ವರೆಗೆ ಅರ್ಧದಷ್ಟೂ ಎಣಿಕೆಯಾಗದೆ ಗ್ರಾಮೀಣ ಭಾಗದಿಂದ ಬಂದ ಜನರು ಬೇಸರ ಪಟ್ಟುಕೊಳ್ಳುವಂತಾಯಿತು.

ಪ್ರತಿ ಗ್ರಾಮದ ಜನರು ಕಾದು ಕಾದು ಸುಸ್ತಾಗಿ ನಮ್ಮೂರ ಎಣಿಕೆ ಯಾವಾಗ ಶುರುವಾಗಲಿದೆ,ಯಾವಾಗ ನಮ್ಮ ಅಭ್ಯಾರ್ಥಿಗಳ ಫಲಿತಾಂಶ ತಿಳಿಯುವುದು ಎಂದು ಎದುರು ನೋಡುವಂತಾಯಿತು.ಬೆಳಿಗ್ಗೆಯಿಂದಲೂ ನಡೆದ ಫಲಿತಾಂಶದಲ್ಲಿ ರಾತ್ರಿಯವರೆಗೆ ಒಟ್ಟು 383 ಸ್ಥಾನಗಳ ಪೈಕಿ ಸ್ಥಾನಗಳ ಫಲಿತಾಂಶ ಲಭ್ಯವಾಯಿತು.

Contact Your\'s Advertisement; 9902492681

ಸುರಪುರ ತಾಲೂಕಿನ 20 ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಯಲ್ಲಿ 58 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು ಇನ್ನುಳಿದ 325 ಸ್ಥಾನಗಳಲ್ಲಿ ರಾತ್ರಿ 8 ಗಂಟೆಯ ವರೆಗೆ ನಡೆದ ಮತ ಎಣಿಕೆಯಲ್ಲಿ ಒಟ್ಟು 199 ಅಭ್ಯಾರ್ಥಿಗಳ ಫಲಿತಾಂಶ ಘೋಷಣೆಯಾಗಿ ಒಟ್ಟು 257 ಜನರು ವಿಜಯಶಾಲಿಗಳಾಗಿದ್ದು ಇನ್ನುಳಿದ 126 ಸ್ಥಾನಗಳ ಫಲಿತಾಂಶ ಘೊಷಣೆ ಬಾಕಿ ಉಳಿದಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here