ಗೆಲುವಿನ ತಿಲಕ ಭೀಮಾಕೋರೆಗಾಂವ್ಕದನ

0
120
(ಜನವರಿ ೧ನೇ ತಾರೀಖು ಶೋಷಿತರ ಆತ್ಮಗೌರವ ತಲೆಯೆತ್ತಿದ ದಿನವೆಂದೇ ಪ್ರಸಿದ್ಧ.)

ಭೀಮಾಕೋರೆಗಾಂವ್ಯುದ್ಧಇತಿಹಾಸದಲ್ಲಿ ಮುಚ್ಚಿಹೋದ ಸಾಹಸದಘಟನೆ. ಮೂವತ್ತು ಸಾವಿರ ಸೈನಿಕರನ್ನು ಕೇವಲ ಐನೂರುಜನ ಸೈನಿಕರು ಸೇರಿಕೊಂಡು ಸೋಲಿಸಿದಕದನ. ಈ ಯುದ್ಧದಲ್ಲಿದಲಿತರನ್ನು ಒಳಗೊಂಡ ಬ್ರಿಟಿಷ್ ಸೇನೆಯು ಮೇಲ್ಜಾತಿಯವರಾದಮಹಾರಾಷ್ಟ್ರದ ಪೇಶ್ವೆಗಳ ಆಡಳಿತದಲ್ಲಿನಜಾತಿ, ಅಸ್ಪೃಷ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳಿಗಾಗಿ ಹಂಬಲಿಸುವ ಮಹರ ಸೈನಿಕರಧೈರ್ಯ ಸಹಾಸ, ಕೆಚ್ಚೆದೆಯ ಹೋರಾಟ. ಶೋಷಿತರು ಮೇಲ್ಜಾತಿ ಶೋಷಕರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧಭೀಮಾ ನದಿ ತೀರದಲ್ಲಿಯುದ್ಧ ಸಾರಿ ಗೆಲುವು ಪಡೆದ ಪ್ರಯುಕ್ತಪ್ರತಿವರ್ಷಜನವರಿ ೧ನೇ ತಾರೀಖು ಹೊಸವರ್ಷದ ಸಂಭ್ರಮದ ದಿನವಾದರೆ ಭಾರತದಅಸ್ಪೃಶ್ಯರ ಪಾಲಿಗೆ ಇದುಅಸ್ಪೃಶ್ಯತೆಯ ವಿರುದ್ಧದಂಡೆದ್ಧಅಸ್ಪೃಶ್ಯರಗುಂಪೊಂದು ವಿರುದ್ಧಕೆಚ್ಚೆದೆಯ ಹೋರಾಟ ನಡೆಸಿ ದಿಗ್ವಿಜಯ ಸಾಧಿಸಿದ ದಿನಈ ವಿಜಯೋತ್ಸವದಆಚರಣೆಯನಿಮಿತ್ತವಾಗಿ ಭಾಷಣಗಳು ಮತ್ತು ಸಭೆ-ಸಮಾರಂಭಗಳು, ಗೊಷ್ಠಿಗಳನ್ನು ಆಯೋಜಿಸಿ ಶೋಷಿತರಆತ್ಮಗೌರವದ ಪ್ರತೀಕವೆಂದು ಈ ದಿನದಂದುಬಹುಜನರುವಿಜೃಂಭಿಸುತ್ತಾರೆ.

ಈ ಯುದ್ಧದಇತಿಹಾಸವನ್ನು ಮುನ್ನೆಲೆಗೆತಂದ ಶ್ರೇಯಸ್ಸು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ರವರಿಗೆ ಸಲ್ಲುತ್ತದೆ. ಬ್ರಿಟನ್ನ ಸ್ಕೂಲ್ಆಫ್ಎಕನಾಮಿಕ್ಸ್ನಲ್ಲಿ ಬಾರ್-ಅಟ್-ಲಾ ವ್ಯಾಸಂಗ (ಕ್ರಿ.ಶ.೧೯೨೨) ಮಾಡುತ್ತಿರುವಾಗ ಸಂಶೋಧನೆಗೆ ಸಾಹಿತ್ಯ ಪರಾಮರ್ಶೆಯ ಸಂದರ್ಭದಲ್ಲಿ ಬ್ರಿಟಿಷ್ ಭಾರತದ ಆಳ್ವಿಕೆಯಲ್ಲಿನ ಪ್ರಮುಖ ಐತಿಹಾಸಿಕ ಘಟನಾವಳಿಗಳ ಕುರಿತು ಲಂಡನ್ ಮ್ಯೂಸಿಯಂ ಲೈಬ್ರರಿಯಲ್ಲಿನ ಮೂಲಧಾರಗಳನ್ನು ಅನ್ವೇಷಿಸುವ ಸನ್ನಿವೇಶದಲ್ಲಿ ಈ ಭೀಮಾಕೋರೆಗಾಂವ್ಕದನದ ಬಗ್ಗೆ ಮಾಹಿತಿ ಪಡೆದು ಈ ಮಾಹಿತಿಯನ್ನು ಕೂಲಂಕುಶವಾಗಿ ಅಧ್ಯಯನಿಸಿ ನಂತರ ಭಾರತಕ್ಕೆ ಮರಳಿ ಯುದ್ದ ನಡೆದ ಸ್ಥಳವಾದ ಕೋರೆಂಗಾವ್ಗೆ ಭೇಟಿ ನೀಡಿಭವ್ಯ ವಿಜಯಸ್ತಂಭವನ್ನುವಿಕ್ಷಿಸಿ ಅಲ್ಲಿನಸ್ಮಾರಕಕ್ಕೆಶ್ರದ್ಧಾಂಜಲಿ ಸಲ್ಲಿಸಿ ಸ್ಥಳೀಯ ಮಾಹಿತಿಯನ್ನು ಸಂಗ್ರಹಿಸಿದ ನಂತರಕೊರೆಗಾಂವ್ಕದನದಇತಿಹಾಸ ಹೊರಬರುತ್ತದೆ.ಅಸ್ಪೃಶ್ಯರಿಗೆವಿದ್ಯೆಕಲಿಯುವ ಹಕ್ಕನ್ನು ಸಂಪೂರ್ಣವಾಗಿ ನಿಷೇಧಿಸಲಾದ ಪರಿಣಾಮಅಲ್ಲಿಯವರೆಗೆಇದುಇತಿಹಾಸದಲ್ಲಿ ಮುಚ್ಚಿಹೋದ ಸಾಹಸದಘಟನೆಯಾಗಿತ್ತು. ಉದ್ಧೇಶಪೂರ್ವಕವಾಗಿಯೇ ಈ ಯುದ್ಧದಕುರಿತು ನಮ್ಮ ಇತಿಹಾಸಕಾರರು ದಾಖಲಿಸದಿರುವುದುಕಂಡು ಬರುತ್ತದೆ. ದೊಡ್ಡ ಪ್ರಮಾಣದಲ್ಲಿರುವ ಶೋಷಿತರನ್ನು ಅಸ್ಪೃಶ್ಯತೆಯ ಕಾರಣ ಒಡ್ಡಿ ದೂರ

Contact Your\'s Advertisement; 9902492681

Bzkfvfಇಡುತ್ತ ಬರಲಾಗಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಈ ಮೂರು ಸಮುದಾಯಗಳಿಗೆ ಸಂಬಂಧಿಸಿದವರು ಎಲ್ಲರೀತಿಯ ಸ್ವಾತಂತ್ರ್ಯ ಮತ್ತು ಸೌಲಭ್ಯಗಳನ್ನು ಅನುಭವಿಸಿದ್ದವರಾಗಿದ್ದಾರೆ ಮತ್ತುಅನುಭವಿಸುತ್ತಿದ್ದಾರೆ.

ಆದರೆಕೊನೆಯ ವರ್ಗವಾದ ಶೂದ್ರರು ಜಾತಿಯತೆಯ ಕಾರಣದಿಂದಾಗಿ ಸಾಮಾಜಿಕ ಸಮಾನತೆ, ಧಾರ್ಮಿಕ ಸಮಾನತೆ ಮತ್ತು ಆರ್ಥಿಕ ಸಮಾನತೆಯಿಂದ ವಂಚಿತರಾಗಿದ್ದಾರೆ ಇವೆಲ್ಲಕ್ಕಿಂತಇನ್ನೊಂದುಜಾತಿ ಪಂಚಮರುಅಂದರೆಅಸ್ಪೃಶ್ಯರು.ಹಿಂದೂ ಸವರ್ಣೀಯರಿಗೆ ಮೈಲಿಗೆಯಾಗುತ್ತದೆಂಬ ಕಾರಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶವನ್ನೇ ನಿಷೇಧಿಸಲಾಗಿದ್ದವರು.ಅಸ್ಪೃಶ್ಯರುಊರಿನ ಮಧ್ಯೆದಲ್ಲಿ ಮಧ್ಯಾಹ್ನ ೧೨ಗಂಟೆ ಸಮಯದಲ್ಲಿ ಮಾತ್ರ ನಡೆದುಕೊಂಡು ಹೋಗಬೇಕಾಗಿತ್ತು.ಏಕೆಂದರೆ ಈ ಸಮಯದಲ್ಲಿ ಅವನ ನೆರಳು ಬೇರೆಕಡೆ ಬೀಳುವುದಿಲ್ಲ ಎನ್ನುವಕಾರಣಕ್ಕಾಗಿ ಹೋಗುವಾಗ ಕುತ್ತಿಗೆಗೆಒಂದು ಮಣ್ಣಿನ ಮಡಿಕೆಯನ್ನು ಉಗುಳಿಕೊಳ್ಳಬೇಕಾಗಿತ್ತು.ಅದೇರೀತಿ ಸೊಂಟಕ್ಕೆಒಂದುಕಸಪೊರಕೆಕಟ್ಟಿಕೊಂಡುತಾನು ನಡೆದದಾರಿಯನ್ನುತಾನೇ ಗುಡಿಸಿಕೊಂಡು ಹೋಗಬೇಕಾಗಿತ್ತು.

ಅಸ್ಪೃಶ್ಯರುತಮ್ಮಗುರುತು ಪತ್ತೆಗಾಗಿತಮ್ಮಕುತ್ತಿಗೆ ಮತ್ತು ಮುಂಗೈಗೆ ದಪ್ಪದಾದಕಪ್ಪುಧಾರವನ್ನುಕಡ್ಡಾಯವಾಗಿ ಕಟ್ಟಿಕೊಳ್ಳಬೇಕಾಗಿತ್ತು.ಊರಿನೊಳಗೆ ಸತ್ತ ದನಗಳನ್ನು ಊರಿನಿಂದ ಹೊರಗೆ ಹೊತ್ತುಕೊಂಡು ಹೋಗಿ ಅದರ ಮಾಂಸವನ್ನು ಬೇಯಿಸಿ ತಿನ್ನಬೇಕಾಗಿತ್ತು.ಅಸ್ಪೃಶ್ಯ ಹೆಂಗಸರುಚಿನ್ನಅಥವಾ ಬೆಳ್ಳಿಯ ಆಭರಣಗಳನ್ನು ತೊಡುವ ಹಾಗಿರಲಿಲ್ಲ.ಇದು ಭಾರತದಾದ್ಯಂತ ಜಾರಿಯಲ್ಲಿತ್ತು ಅದರಲಿಯ್ಲೂಮಹಾರಾಷ್ಟ್ರದಲ್ಲಿ ಪೇಶ್ವೆಗಳು ಆಡಳಿತ ನಡೆಸುತ್ತಿದ್ದಅವಧಿಯಲ್ಲಿ(ಕ್ರಿ.ಶ. ಸುಮಾರು ೧೮೦೦) ಅಸ್ಪೃಶ್ಯರ ಪಾಡುತುಂಬಾ ಕರಾಳವಾಗಿತ್ತು.

ಇಂತಹಅವಮಾನ, ನಿಕೃಷ್ಟವಾಗಿ ಕಾಣುತ್ತ ಬಂದರುತಮ್ಮ ಸ್ವಾಭಿಮಾನಕ್ಕಾಗಿಆತೋರೆಯುತ್ತಿದ್ದ ಮಹಾರಾಷ್ಟ್ರದ ಮಹಾರ್ಯೋಧರು ಶೌರ್ಯ,ಸಹಾಸ, ಪರಾಕ್ರಮ ಮತ್ತು ಚತುರತೆಗಳಿಗೆ ಹೆಸರಾಗಿದ್ದರು.ಛಲವಂತ ನಾಕಅಡ್ಡ ಹೆಸರಿನ ಮಹಾರ್ಜಾತಿಯಯುವಕರು ಶೂರರೂ, ಕದನ ಕಲಿಗಳಾಗಿ ಯುದ್ಧ ಪಡೆಯನ್ನು ಕಟ್ಟಿಕೊಂಡು ಬ್ರಿಟಿಷ್ಈಸ್ಟ್ಇಂಡಿಯಾಕಂಪೆನಿಯ ಸೈನ್ಯದಲ್ಲಿ ಮತ್ತು ಮರಾಠಾ ಶಿವಾಜಿಯ ಸೈನ್ಯದಲ್ಲಿಮತ್ತು ಪೇಶ್ವೆ ಆಡಳಿತದಲ್ಲಿ ಮತ್ತುಸೈನ್ಯದಲಿ, ಯುದ್ಧಗಳಲ್ಲಿ ಯೋಧರಾಗಿಈ ಪಡೆಯನ್ನು ಬಳಸಿಕೊಳ್ಳುತ್ತಿದ್ದರು. ಪರಾಕ್ರಮಿಗಳಾದ ಮಹಾರ್ ಸೈನಿಕರು ಕ್ರಿ.ಶ.೧೭೩೬ರಜಂಜೀರಾಕದನದಲ್ಲಿ ಕೇವಲ ನೂರು ಮಹಾರ್ ಸೈನಿಕರುಯುದ್ಧವನ್ನು ಜಯಿಸಿದ್ದರು, ಪೇಶ್ವೆಗಳ ಸೈನ್ಯದಲ್ಲಿತುಕನಾಕನೆಂಬ ಮಹಾರ ಸೈನಿಕನ ನೇತೃತ್ವದಲ್ಲಿ ಪೋರ್ಚುಗೀಸರೊಂದಿಗೆ ಮಾಂಡವಿಯುದ್ಧಗೆದ್ದಿದ್ದರು.

ನಂತರಕ್ರಿ.ಶ.೧೮೯೫ರಲ್ಲಿ ಸಿದ್ಧನಾಕ ಎಂಬ ಮಹಾರ ವೀರ ಪೇಶ್ವೆಗಳ ಪರವಾಗಿಯುದ್ಧ ಮಾಡಿ ನಿಜಾಮರನ್ನು ಪರಾಭವಗೊಳಿಸಿದನು ಮತ್ತುಯೋಧ ಸಿದ್ಧನಾಕನ ನೆರವಿನಿಂದ ಹಲವಾರು ಯುದ್ಧಗಳನ್ನು ಗೆದ್ದಿದ್ದರುಆದರೆಅಸ್ಪೃಶ್ಯತೆಯ ನೋವಿನಿಂದ ಬಳಲಿ ಬೆಂಡಾಗಿದ್ದರು.ಯುದ್ಧ ಭೂಮಿಯಲ್ಲಿ ಸೈನಿಕರಂತೆ ನೋಡುತಿದ್ದ ಮನುವಾದಿ ಪೇಶ್ವೆಗಳು, ಇತರ ಮಹಾರಾಜರುಗಳು ಮಹಾರರು ವಾಸಿಸುವ ಕೇರಿಯನ್ನು ಮಾತ್ರಊರಿನಿಂದ ಹೊರಗಿಟ್ಟುಅಸ್ಪೃಶ್ಯತೆಯ ಕರಾಳತೆಯನ್ನು ಆಚರಿಸುತ್ತಿದ್ದರು.ಪೇಶ್ವೆಗಳ ದೌರ್ಜನ್ಯ, ದಬ್ಬಾಳಿಕೆಗಳಿಂದ ರೋಸಿಹೊಗಿದ್ದ ಮಹಾರಾಷ್ಟ್ರದಅಸ್ಪೃಶ್ಯರುಅದರಲ್ಲೂಅಸ್ಪೃಶ್ಯಯುವಕರು ಪೇಶ್ವೆಗಳ ವಿರುದ್ದಯುದ್ದ ಮಾಡಲು ಅಸ್ಪೃಶ್ಯರನ್ನು ಕೋರಿಕೊಂಡರು.ತಮ್ಮಗಳ ಕಷ್ಟ ಅಪಮಾನಗಳ ಪರಿಹಾರಕ್ಕಾಗಿ ಒದಗಿಬರುವ ಸುವರ್ಣಾವಕಾಶಕ್ಕಾಗಿ ಕಾಯುತಿದ್ದರು.

ಸ್ವತಃಡಾ.ಬಿ. ಆರ್.ಅಂಬೇಡ್ಕರ್ರತಮ್ಮಬರಹ ಮತ್ತು ಭಾಷಣಗಳು ಸಂಪುಟ ೧೭ ಇಂಗ್ಲಿಷಆವೃತ್ತಿಭಾಗ ಮೂರು ಪುಟ ಸಂಖ್ಯೆ ೪ರಲ್ಲಿ ದಾಖಲಿಸಿದಂತೆ ಪೇಶ್ವೆಎರಡನೇಯ ಬಾಲಾಜಿ ಬಾಜಿರಾಯನುಯುದ್ಧದಲ್ಲಿ ಬ್ರಿಟಿಷರೊಂದಿಗೆ ಸೋತು ಪುಣೆಯಅರ್ಧ ಭಾಗವನ್ನು (ಕ್ರಿ.ಶ.೧೮೧೭ರ ಮೇ ೧೩ರಲ್ಲಿ) ಬಿಟ್ಟುಕೊಟ್ಟನು.ಆಗ ಮಹಾರ್ ವೀರ ನಾಯಕ ಸಿದ್ಧನಾಕ ಪೇಶ್ವೆಗೆ ನಾವು ನೀವೂ ಈ ಭಾರತದೇಶದವರು, ಬ್ರಿಟಿಷರು ಪರಕೀಯರು, ನಾವಿಬ್ಬರೂಕೂಡಿ ಅವರನ್ನು ಎದುರಿಸೋಣ.ಆದರೆಯುದ್ಧಗೆದ್ದ ಮೇಲೆ ನೀವು ನಮ್ಮನ್ನುಅಸ್ಪೃಶ್ಯರಂತೆಕಾಣದೆ ನಮಗೂ ಸಮಾನತೆ ನೀಡಬೇಕು ಹಾಗೂ ಹಿಂದೂ ಸವರ್ಣೀಯರು ಮತ್ತುತಮ್ಮ ಸೈನಿಕರು ನಮ್ಮಅಸ್ಪೃಶ್ಯ ಮಹಿಳೆಯರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ.

ಈ ಎಲ್ಲಾಅನ್ಯಾಯ ಮತ್ತು ದೌರ್ಜನ್ಯಗಳನ್ನು ನಿಲ್ಲಿಸಬೇಕು ನಾವು ಸ್ವಾಭಿಮಾನಿಗಳಂತೆ ಬದುಕಲು ಅವಕಾಶ ಮಾಡಿಕೊಡಬೇಕೆಂದುದೇಶಭಿಮಾನದಜೊತೆಗೆ ಸ್ವಾಭಿಮಾನದ ಮಾತನಾಡಿದನು ಪ್ರತ್ಯುತ್ತರವಾಗಿಎರಡನೇ ಬಾಜಿರಾಯನು, ’ನೀವುಗಳು, ಹುಟ್ಟಿರುವುದೇ ನಮ್ಮಗಳ ಸೇವೆ ಮಾಡಲಿಕ್ಕಾಗಿ ಮತ್ತು ನಿಮ್ಮ ಹೆಂಗಸರುಇರುವುದೇ ನಮ್ಮನ್ನು ಸುಖಪಡಿಸಲಿಕ್ಕಾಗಿ’ ಎಂದುಅಸ್ಪೃಶ್ಯ ಸೈನಿಕರಿಗೆಅಹಂಕಾರಿಯಾಗಿ ನುಡಿದಪರಿಣಾಮವಾಗಿಗಾಯಗೊಂಡ ವ್ಯಾಘ್ರಗಳಾಂತದ ಮಹರ್ ಪಡೆಯು ಸೇಡು ತೀರಿಸಿಕೊಳ್ಳಲಿಕ್ಕಾಗಿ ಸಮಯಕಾಯತೊಡಗಿದರು. ಇದೇ ಸಮಯದಲ್ಲಿ ಸರಿಯಾಗಿಕೊಲ್ಕತ್ತಾವನ್ನುರಾಜಧಾನಿಯನ್ನಾಗಿ ಮಾಡಿಕೊಂಡು ಬಹುತೇಕಉತ್ತರ ಭಾರತವನ್ನುತಮ್ಮತೆಕ್ಕೆಗೆತೆಗೆದುಕೊಂಡು ಬ್ರಿಟಿಷರು ಮಹಾರಾಷ್ಟ್ರದ ಪೇಶ್ವೆರಾಜಎರಡನೇ ಬಾಜಿರಾಯನನ್ನು ಬಗ್ಗುಬಡಿದುದಕ್ಷಿಣ ಭಾರತದಲ್ಲಿತಮ್ಮ ಆಳ್ವಿಕೆಗೆ ವಿಸ್ತರಿಸಿಕೊಳ್ಳಲು ಸಮಯಕಾಯುತ್ತಿದ್ದರು.

ಬಾಂಬೆ ರೆಜಮೆಂಟ್ನಲ್ಲಿ ಬ್ರಿಟಿಷ್ಕ್ಯಾಪ್ಟನ್ಎಸ್. ಎಸ್. ಸ್ಪಂಡನ್ ನೇತೃತ್ವದಲ್ಲಿಮಹಾರ್ ’ಸಿದ್ದನಾಕ’ನ ನಾಯಕತ್ವದ ೫೦೦ ಅಸ್ಪೃಶ್ಯಯೋಧರ ಪಡೆಯುಮನಃ ಪೂರ್ವಕವಾಗಿಆಹ್ವಾನ ಸ್ವೀಕರಿಸಿದರುಮತ್ತುಈ ಎಲ್ಲಾಯೋಧರಿಗೆ ಬಂದೂಕು ಉಪಯೋಗಿಸುವ ತರಬೇತಿಯನ್ನು ಬ್ರಿಟಿಷರುಚೆನ್ನಾಗಿ ನೀಡಿರುತ್ತಾರೆ.

೧೮೧೭ರ ಡಿಸೆಂಬರ್ ೩೧ನೇ ತಾರೀಖುರಾತ್ರಿ ಶಿರೂರ್ನಿಂದ ಹೊರಡುತ್ತಾರೆ. ಆ ಇಡೀರಾತ್ರಿ ಸತತವಾಗಿ ೨೭ ಕಿಲೋಮೀಟರ್ ನಡೆದು ಮಾರನೇ ದಿನ ಅಂದರೆ ೧೮೧೮ರ ಜನವರಿ ೧ರಂದು ಪೂನಾ ನಗರದಿಂದ ೧೫ ಕಿಲೋಮೀಟರ್ದೂರದಲ್ಲಿರುವ ಭೀಮಾ ನದಿ ತೀರದಲ್ಲಿರುವಕೋರೆಂಗಾವ್ ಎಂಬ ಸ್ಥಳವನ್ನು ಸಿದ್ದನಾಕನ ಸೈನ್ಯತಲುಪುತ್ತದೆ.

ಇಡೀರಾತ್ರಿ ನಿದ್ದೆಯಿಲ್ಲದೆ ೨೭ ಕಿಲೋಮೀಟರ್ದೂರವನ್ನು ನಡೆದುಕೊಂಡು ಬಂದಿದ್ದ ಈ ಅಸ್ಪೃಶ್ಯಯೋಧರ ಪಡೆ ನಿದ್ದೆ, ಅನ್ನನೀರುಯಾವುದನ್ನು ಬಯಸದೆ ಬೆಳಿಗ್ಗೆ ೯ ಗಂಟೆಗೆ ಸರಿಯಾಗಿ ಪೇಶ್ವೆ ಸೈನಿಕರ ಮೇಲೆ ಎರಗುತ್ತಾರೆ.೨೦ ಸಾವಿರ ಪೇಶ್ವೆ ಸೈನಿಕರು ಅಶ್ವದಳ, ೮ ಸಾವಿರ ಕಾಲ್ದಳ ಸೇರಿಒಟ್ಟು ೨೮ ಸಾವಿರ ಪೇಶ್ವೆ ಸೈನಿಕರು ಮೂರು ದಿಕ್ಕಿನಿಂದಅಸ್ಪೃಶ್ಯಯೋಧರಿಗೆ ಎದುರಾಗುತ್ತಾರೆ.

ಬೆಳಿಗ್ಗೆ ೯ರಿಂದ ರಾತ್ರಿ ೯ರವರೆಗೆ ಸತತ ೧೨ ಗಂಟೆಗಳ ಕಾಲ ನಡೆದ ಈ ಘೋರಯುದ್ದದಲ್ಲಿ ಹಸಿದ ಹೆಬ್ಬುಲಿಗಳಂತಿದ್ದ ಅಸ್ಪೃಶ್ಯಯೋಧರು ಪೇಶ್ವೆ ಸೈನ್ಯವನ್ನು ಧೂಳಿಪಟ ಮಾಡುತ್ತಾರೆ.ಇಡೀಯುದ್ದ ಭೂಮಿಯಲ್ಲಿ ಸಾವನ್ನಪ್ಪುತ್ತಾರೆ. ಬೃಹತ್ ಸಂಖ್ಯೆಯಲ್ಲಿದ್ದಅಂದರೆಅಸ್ಪೃಶ್ಯಯೋಧರಿಗಿಂತ ೫೬ ಪಟ್ಟು ಹೆಚ್ಚು ಇದ್ದ ಪೇಶ್ವೆಗಳ ರಣಹೇಡಿ ಸೈನ್ಯಗಂಡು ಸಿಂಹಗಳಂತಿದ್ದ ಅಸ್ಪೃಶ್ಯ ಸೈನಿಕರ ಮುಂದೆ ನಿಲ್ಲಲಾಗದೆ ಕೊನೆಗೆ ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡತೊಡಗಿದರು. ಅಂತಿಮವಾಗಿ ಈ ಯುದ್ದದಲ್ಲಿಅಸ್ಪೃಶ್ಯ ಸೈನಿಕರು ಪ್ರಚಂಡ ಜಯಗಳಿಸುತ್ತಾರೆ.

ಸತತ ೧೨ ಗಂಟೆಗಳ ಕಾಲ ನಡೆದ ಈ ಘೋರ ಕಾಳಗದಲ್ಲಿ ೫೦೦೦ ಕ್ಕೂ ಹೆಚ್ಚು ಪೇಶ್ವೆ ಸೈನಿಕರುಯುದ್ದ ಭೂಮಿಯಲ್ಲಿ ಸಾವನ್ನಪ್ಪಿದರೆ ಕೇವಲ ೨೨ ಜನಅಸ್ಪೃಶ್ಯಯೋಧರು ವೀರಮರಣವನ್ನಪ್ಪಿದರು.(ಈ ಯುದ್ದದಲ್ಲಿಒಬ್ಬೊಬ್ಬಅಸ್ಪೃಶ್ಯಯೋಧ ಸರಾಸರಿ ಕನಿಷ್ಠ ೧೦೦ ಜನ ಪೇಶ್ವೆ ಸೈನಿಕರನ್ನುಕೊಂದು ಹಾಕಿರುತ್ತಾನೆ.) ಈ ಯುದ್ದದಲ್ಲಿಅಸ್ಪೃಶ್ಯಯೋಧರ ಪಡೆಯ ನಾಯಕನಾಗಿದ್ದ ಸಿದ್ದನಾಕನು ಸಹ ವೀರಮರಣವನ್ನಪ್ಪುತ್ತಾನೆ. ಅಂದುರಾತ್ರಿ ೧೦:೦೦ ಗಂಟೆಗೆ ಸರಿಯಾಗಿ ಬ್ರಿಟಿಷರುಯುದ್ದ ನಡೆದ ಆ ಸ್ಥಳದಲ್ಲಿ(ಪೇಶ್ವೆಗಳ ಸಾಮ್ರಾಜ್ಯದಲ್ಲಿ) ಬ್ರಿಟಿಷ್ ಬಾವುಟವನ್ನು ಹಾರಿಸುತ್ತಾನೆ.

ವಿಜಯದ ಬಳಿಕ ಕ್ಯಾಪ್ಟನ್ ಸ್ಪಂಡ್ಡನ್’ನಿಮ್ಮಕೆಚ್ಚೆದೆಯ ಹೋರಾಟವು ನಾವು ಇಂಡಿಯಾದಲ್ಲಿ ಉಳಿಯಲು ಅಧಿಕಾರವನ್ನು ವಿಸ್ತರಿಸಲುತುಂಬಾ ಸಹಾಯಕವಾಗಿದೆ ಬ್ರಿಟಿಷ್ ಸರ್ಕಾರವು ನಿಮಗೆ ಎಂದೂಮರೆಯಲಾಗದಕಾಣಿಕೆ ಬಹುಮಾನವನ್ನುಉಡುಗರೆಯಾಗಿ ಮತ್ತು ಮಡಿದ ಮಹಾ ಯೋಧರ ವಿಜಯ ಸ್ತಂಭವನ್ನು ಸ್ಥಾಪಿಸುವುದರ ಮೂಲಕ ಗೌರವವನ್ನು ಸಲ್ಲಿಸುತ್ತದೆ.

ಹಾಗೆಯೇ ನಿಮಗೆ ನಮ್ಮ ಬ್ರಿಟಿಷ್ ಸೈನ್ಯದಲ್ಲಿ ವಿಶೇಷ ಸ್ಥಾನವನ್ನು ಕಲ್ಪಿಸಿ ನಿಮ್ಮಕುಟುಂಬದವರಿಗೆ ಸೌಲಭ್ಯವನ್ನು ಒದಗಿಸುವ ಏರ್ಪಾಡು ಮಾಡುತ್ತದೆ’.(ಮಹಾರ್ ಸೈನಿಕರು ಸಂತೋಷದಿಂದ ಬ್ರಿಟಿಷ್ ಸರ್ಕಾರಕ್ಕೆಜಯವಾಗಲಿ ಮಹಾರ್ ಸೈನ್ಯಚಿರಾಯು ಎಂದು ಘೋಷಣೆಕೂಗುತ್ತದೆ.)
ಜನರಲ್ ಸ್ಮಿತ್ ಈಗೆಲುವನ್ನುಉತ್ಸಾಹ ಪೂರ್ವಕವಾಗಿ ಅಭಿನಂದಿಸಿ ’ಇಂಡಿಯಾದ ಬ್ರಿಟಿಷ್ ಸೇನಾ ಇತಿಹಾಸದಲ್ಲಿ ಕೋರೆಂಗಾವ್ಯುದ್ದದ ವಿಜಯವೆಂದರೆ ಶೌರ್ಯ ಮತ್ತು ಪರಾಕ್ರಮದ ಯಶೋಗಾಥೆಯ ಆಗಿದೆ’ ಎಂದು ಉದ್ಗಾರವೆತ್ತಿದ್ದಾನೆ.

ರಣರಂಗದಲ್ಲಿ ಬೃಹತ್ ಸಂಖ್ಯೆಯಲ್ಲಿದ್ದ ಪೇಶ್ವೆ ಸೈನಿಕರಜೊತೆ ವೀರಾವೇಶದಿಂದ ಹೋರಾಡಿಜಯತಂದುಕೊಟ್ಟು ಹುತಾತ್ಮರಾದ ೨೨ ಅಸ್ಪೃಶ್ಯಯೋಧರ ನೆನಪಿಗಾಗಿ ಬ್ರಿಟಿಷರು ೧೯೨೧ ರ ಮಾರ್ಚ್ ೨೧ರಂದು ಯುದ್ದ ನಡೆದ ಸ್ಥಳದಲ್ಲಿ (ಕೋರೆಂಗಾವ್ ನಲ್ಲಿ) ೬೫ ಅಡಿ ಎತ್ತರದ ಭವ್ಯ ವಿಜಯಸ್ತಂಭವನ್ನು ನಿರ್ಮಿಸಿ, ಆ ಸ್ತಂಭದ ಮೇಲೆ ೨೨ ಹುತಾತ್ಮಯೋಧರ ಹೆಸರುಗಳನ್ನು ಕೆತ್ತಿಸಿದರು.

ಆ ಭವ್ಯ ವಿಜಯಸ್ತಂಬಕ್ಕೆಅಡಿಗಲ್ಲು ಹಾಕುವ ಸಂದರ್ಭದಲ್ಲಿ ಬ್ರಿಟಿಷರು ೨೨ ಸುತ್ತು ಕುಶಾಲ ತೋಪುಗಳನ್ನು ಹಾರಿಸುವ ಮೂಲಕ ಹುತಾತ್ಮರಿಗೆರಾಜ ಮರ್ಯಾದೆಯ ಶ್ರದ್ದಾಂಜಲಿ ಸಲ್ಲಿಸಿದರು.ಈ ವಿಜಯ ಸ್ತಂಭದ ಮೇಲೆ ಬ್ರಿಟಿಷರುಔಟಿe oಜಿ ಣhe Pಡಿoಜesಣಖಿಡಿuimಠಿhs oಜಿ ಣhe ಃಡಿiಣish ಂಡಿmಥಿ iಟಿ ಣhe ಇಚಿsಣ (ಬ್ರಿಟಿಷ್ಯೋಧರಿಗೆ ಭಾರತದ ಪೂರ್ವ ಭಾಗದಲ್ಲಿ ಸಿಕ್ಕಿದ ಹೆಮ್ಮೆಯ ವಿಜಯವಾಗಿದೆ) ಎಂದು ಸಹ ಕೆತ್ತಿಸಿದರು.ಬ್ರಿಟಿಷ್ ಬೋರ್ಡ್ಆಫ್ಕಂಟ್ರೋಲ್ನಅಧ್ಯಕ್ಷಕ್ಯಾನಿಂಗ್ ಈ ವಿಜಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾ’ಸಣ್ಣ ಸಂಖ್ಯೆಯ ಸೈನ್ಯವುಒಂದು ಬಲಾಡ್ಯ ಸಂಖ್ಯೆಯ ಸೈನ್ಯವನ್ನು ಮಣ್ಣು ಮುಕ್ಕಿಸಿದ ಉದಾಹರಣೆಚಿಕ್ಕ ಸಂಖ್ಯೆ ಹೊಂದಿರುವಎಲ್ಲಾ ಸೈನಿಕ ಬೆಟಾಲಿಯನ್ಗಳಿಗೂ ಅನುಕರಣೀಯವಾಗಿದೆ’ ಎಂದು ಹೇಳಿದ್ದು ದಾಖಲೆ.

ಈ ಅಸ್ಪೃಶ್ಯ ಸಮುದಾಯದ ವಿಜಯೋತ್ಸವ ಆಚರಿಸುವುದನ್ನು ಮೇಲ್ವರ್ಗದವರು ಮತ್ತು ಹಿಂದು ಪುರೋಹಿತಶಹಿಗಳು ಸಹಿಸಿಕೊಳ್ಳುತ್ತಿಲ್ಲ. ಹಾಗಾಗಿ ಪ್ರತಿವರ್ಷದವಿಜಯೋತ್ಸವದ ಸಂಭ್ರಮಾಚರಣೆಯಲ್ಲಿಕಿರಿಕಿರಿ ಮಾಡುವ ಮನಸ್ಥಿತಿಯನ್ನು ಕಾಣುತಿದ್ದೇವೆ.

ಭೀಮಾಕೋರೆಗಾಂವ್ಕದನದಚಾರಿತ್ರಿಕಘಟನೆಯನ್ನು ಸರ್ಕಾರವು ಶಾಲಾ ಪಠ್ಯಗಳಲ್ಲಿ ಯಾವುದೇ ಬದುಕುವ ಸವಲತ್ತುಗಳನ್ನು ಕೊಡದಒಂದು ವರ್ಗ ಸ್ವಾಭಿಮಾನಕ್ಕೆಧಕ್ಕೆ ಬಂದರೆಒಂದು ಸಾಮ್ರಾಜ್ಯವನ್ನು ನೆಲಸಮ ಮಾಡಿದಇತಿಹಾಸವನ್ನು ವಿದ್ಯಾರ್ಥಿ ಸಮುದಾಯಕ್ಕೆ ಪರಿಚಯವಾಗುತ್ತದೆ. ಸ್ವಾತಂತ್ರ್ಯ, ಸಮಾನತೆ, ಭಾತೃತ್ವ, ಪ್ರಜಾಸತ್ತಾತ್ಮಕಮತ್ತು ಸಾಮಾಜಿಕ ನ್ಯಾಯವನ್ನುಅಳವಡಿಸಿಕೊಂಡ ಭಾರತಸಂವಿಧಾನದ ಆಶಯಗಳಿಗೆ ಮಂಕುಬೂದಿಯನ್ನುಎರಚುತ್ತಾ ಮನುವಾದಿಗಳು ತಳ ಸಮುದಾಯದ ಬೆಳವಣಿಗೆಯನ್ನು ಸಹಿಸುತ್ತಿಲ್ಲ.

ಮೀಸಲಾತಿಕ್ರಮವನ್ನುಅವೈಜ್ಞಾನಿಕವಾಗಿಖಂಡಿಸುತ್ತಿದ್ದಾರೆ, ಜಾತಿ ಜಾತಿಗಳ ಮಧ್ಯೆ ಜಗಳ ಹುಟ್ಟಿಸಿ ಕುತಂತ್ರದಿಂದ ಮರಳಿ ಮನುವಿನ ಜಾತಿ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ಚಟುವಟಿಕೆಗಳನ್ನು ನೋಡಿದರೆ ಮತ್ತೊಂದುಭೀಮಾಕೋರೆಗಾಂವ್ಯುದ್ಧವೇ ಮದ್ದಾಗಬಹುದು.

-ಡಾ.ಹಣಮಂತ್ರಾಯ ಸಿ,ಕರಡ್ಡಿ ಪಿಎಚ್,ಡಿ
ಉಪನ್ಯಾಸಕರು, ಸಮಾಜಕಾರ್ಯಅಧ್ಯಯನ
ವಿಭಾಗಜ್ಞಾನತುಂಗಾ ಸ್ನಾತಕೋತ್ತರ
ಕೇಂದ್ರ ರಾಯಚೂರ, ಗುಲಬರ್ಗಾ ವಿಶ್ವವಿದ್ಯಾಲಯ
ಕಲಬುರಗಿ-9886108774

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here