ದೇಶಪ್ರೇಮಿ ಯುವಾಂದೋಲನ ಸೈಕಲ್ ಜಾಥ

0
28

ಬಳ್ಳಾರಿ: ದೇಶಪ್ರೇಮಿ ಯುವಾಂದೋಲನ ವತಿಯಿಂದ ಹಳ್ಳಿಗಳಿಗೆ ವಿದ್ಯಾರ್ಥಿ ಯುವಜನರ ಸೈಕಲ್‌ ಜಾಥಾಗೆ 3ನೇ ದಿನ ಎಮ್ಮಿಗನೂರಿನಿಂದ ಆರಂಭಗೊಂಡಿತು.

ಇಂದು ಸಾವಿತ್ರಿ ಬಾಯಿ ಫುಲೆ ಜಯಂತಿಯ ಅಂಗವಾಗಿ ಬರಗೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ಪೀರ್ ಭಾಷಾ, ಸಾಹಿತಿಗಳು ಭಾಗವಹಿಸಿದ್ದರು.

Contact Your\'s Advertisement; 9902492681

ನಂತರ ಸೈಕಲ್ ಜಾಥಾ ತಂಡ ಹೊರಟು, ಎಮ್ಮಿಗನೂರು, ನೆಲ್ಲುಡಿ ಕೊಟ್ಟಾಲ್, ಕಂಪ್ಲಿ, ಕಂಪ್ಲಿ ಕೋಟೆ, ಡಣಾಪುರ, ಹೆಬ್ಬಾಳ, ಮುಷ್ಟೂರು, ಕುಂಟೋಜಿ, ಬರಗೂರು ಗ್ರಾಮದ ಬೀದಿ ಬೀದಿ ಗಳಲ್ಲಿ ಹೋರಾಟ ಗೀತೆಯನ್ನು ಹಾಡಿ, ಕರಪತ್ರಗಳನ್ನು ಹಂಚಿ ಗ್ರಾಮಸ್ಥರಿಗೆ ರೈತವಿರೋಧಿ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಲಾಯಿತು.

ಜನರೊಂದಿಗೆ ಚರ್ಚೆಗಳು ನಡೆದವು ಮತ್ತು ದಾರಿ ಉದಕ್ಕೂ ಹೊಲಗಳ್ಳಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ಕರಪತ್ರಗಳನ್ನು ಹಂಚಿ ಸರ್ಕಾರ ತರುತ್ತಿರುವ ರೈತ ವಿರೋಧಿ ಕಾನೂನುಗಳ ಬಗ್ಗೆ ಮಾಹಿತಿ ನೀಡಲಾಯಿತು.ಮತ್ತು ಇಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರಚಾರಾಂದೋಲನ ಮುಗಿಸಿ ಕೊಪ್ಪಳ ಜಿಲ್ಲೆಯ ಕಡೆಗೆ ಹೊರಟಿತು.

ಜಾಥಾದಲ್ಲಿ ದೇಶಪ್ರೇಮಿ ಯುವಾಂದೋಲನದ ಸಂತೋಷ ಎಚ್. ಎಂ, ರಾಜೇಂದ್ರ ರಾಜವಳ, ಗುರುಬಸವ, ಮರಿಸ್ವಾಮಿ, ದುರ್ಗೇಶ್, ಶರಣು, ಚಿದಾನಂದ, ಇಸ್ಮಾಯಿಲ್, ಭುವನ್ ಕುಮಾರ್ ಮತ್ತು ಕರ್ನಾಟಕ ಜನಶಕ್ತಿಯ ವಸಂತ್ ರಾಜ್ ಕಹಳೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here