ಬಸಲಿಂಗಮ್ಮ ಗೋಗಿಗೆ ಒಲಿದ ಜಾನಪದ ಅಕಾಡೆಮಿ ಪ್ರಶಸ್ತಿ

0
63

ಶಹಾಪುರ : ಕರ್ನಾಟಕ ಜಾನಪದ ಅಕಾಡೆಮಿ ಕೊಡಮಾಡುವ ೨೦೨೦ ನೇ ಸಾಲಿಗೆ ತಾಲ್ಲೂಕಿನ ಗೋಗಿ ಗ್ರಾಮದ ಜಾನಪದ ಕಲಾವಿದೆ ಬಸಲಿಂಗಮ್ಮ ಆಯ್ಕೆಯಾಗಿದ್ದಾರೆ.ಗ್ರಾಮೀಣ ಭಾಗದ ಜನಪದ ಸೊಗಡಿನ ಮುದುವೆಯ ಸಾಂಪ್ರದಾಯಿಕ ಹಾಡುಗಳನ್ನು ಮೈಗೂಡಿಸಿಕೊಂಡಿರುವ ಬಸ ಲಿಂಗಮ್ಮನವರ ಕಲೆಯನ್ನು ಪರಿಗಣಿಸಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನು ಘೋಷಿಸಿದೆ.

1946 ರಲ್ಲಿ ಅಯ್ಯಪ್ಪ ನಾಗಮ್ಮ ಎಂಬ ದಂಪತಿಗಳ ಉದರದಲ್ಲಿ ಜನಿಸಿದ ಬಸಲಿಂಗಮ್ಮನವರು ಓದಿದ್ದು ಕೇವಲ 2 ನೇ ತರಗತಿಯ ಮಾತ್ರ ಬಸಲಿಂಗಮ್ಮ ನವರಿಗೆ ಜಾನಪದ ಸಾಹಿತ್ಯ ಬಾಲ್ಯದಿಂದಲೂ ಅಚ್ಚುಮೆಚ್ಚಿನದು ಗ್ರಾಮದ ಸುತ್ತಮುತ್ತಲಿನ ಮಠಮಾನ್ಯಗಳಲ್ಲಿ ಹಬ್ಬಹರಿದಿನಗಳಲ್ಲಿ ಜಾತ್ರೆಗಳಲ್ಲಿ ಇವರ ಜಾನಪದಹಾಡುಗಳು ಬಲು ಫೇಮಸ್ಸು,ಗೋಗಿ ಬಸಲಿಂಗಮ್ಮನವರ ಜಾನಪದ ಹಾಡುಗಳ ಸಂಗ್ರಹವನ್ನು ಹಿರಿಯ ಸಾಹಿತಿ ಡಾ. ಶೈಲಜಾ ಬಾಗೇವಾಡಿ ರಚಿಸಿದ ಪುಸ್ತಕಕ್ಕೆ 2018 ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರಕಿದೆ.

Contact Your\'s Advertisement; 9902492681

ಜಾನಪದ ಗೀತೆ ಪ್ರಕಾರಗಳಲ್ಲಿ ಸೋಬಾನ ಹಾಡು,ದೇವರ ಹಾಡುಗಳು,ಜನಪದ ಹಾಡುಗಳು,ಮದುವೆ ಸಂಪ್ರದಾಯ ಹಾಡುಗಳು, ಸೀಮಂತ ಕಾರ್ಯಕ್ರಮದ ಹಾಡುಗಳು,ಜೋಗುಳ ಹಾಡುಗಳು,ಕುಟ್ಟುವ ಬೀಸುವ ಹಾಡುಗಳು,ಮುಂತಾದ ಜಾನಪದ ಪ್ರಕಾರದ ಕಲೆಯನ್ನು ಕರಗತ ಮಾಡಿಕೊಂಡು ಬದುಕಿನುದ್ದಕ್ಕೂ ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ ಅಲ್ಲದೆ ಜಾನಪದ ಸಾಹಿತ್ಯದಿಂದ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.ಹಲವಾರು ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ ‘ಜಾನಪದ ಒಡತಿ’ ಎಂದು ಪ್ರಶಸ್ತಿ ಕೂಡ ಲಭಿಸಿದೆ

ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಿದ್ದಲಿಂಗಣ್ಣ ಆನೇಗುಂದಿ,ಬಸವರಾಜ್ ಜಿ ಹಿರೇಮಠ,ಹಿರಿಯ ಸಾಹಿತಿಗಳಾದ ಸಿದ್ದರಾಮ ಹೊನ್ಕಲ್,ಶಿವಣ್ಣ ಇಜೇರಿ,ಡಾ. ಅಬ್ದುಲ್ ಕರೀಂ ಕನ್ಯಾಕೋಳೂರ,ದೊಡ್ಡಬಸಪ್ಪ ಬಳೂರಗಿ, ವಿಶ್ವಾರಾಧ್ಯಸತ್ಯಂಪೇಟೆ ಸಂಶೋಧಕರಾದ ಡಾ. ಮೋನಪ್ಪ ಶಿರವಾಳ,ಗುರುಬಸಯ್ಯ ಗದ್ದುಗೆ,ಪಂಚಾಕ್ಷರಿ ಹಿರೇಮಠ ಬಸವರಾಜ ಸಿನ್ನೂರ ಹಾಗೂ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here