197.71 ಕೋಟಿ ವೆಚ್ಚದ ಬೆಣ್ಣೆತೊರಾದ ಜಲಾಶಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ

0
29

ಕಲಬುರಗಿ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ೨೦೧೯-೨೦ನೇ  ಸಾಲಿನ ಏತನೀರಾವರಿ ಪ್ರಧಾನ ಕಾಮಗಾರಿಗಳ ಯೋಜನೆ ಅಡಿಯಲ್ಲಿ ಜಿಲ್ಲೆಯ ಕಲಬುರಗಿ ದಕ್ಷಿಣ ಮತಕ್ಷೇತ್ರದ ಎಂಟು ಕೆರೆಗಳಿಗೆ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿ ಸಲ್ಲುವಾಗಿ ಬೆಣ್ಣೆತೊರಾದ ಜಲಾಶಯದಿಂದ ಏತನೀರಾವರಿ ಮೂಲಕ ನೀರನ್ನು ತುಂಬಿಸುವ ನಿರ್ಮಾಣ ಕಾಮಗಾರಿಯ ೧೯೭.೭೧ ಕೊಟಿಗಳ ಗುದ್ದಲಿ ಪೂಜೆ ಕಾಮಗಾರಿಗೆ ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ  ಜೆ.ಸಿ. ಮಾಧುಸ್ವಾಮಿ ಅವರು ಉದ್ಘಾಟಿಸಿದರು.

ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ಶಾಸಕರಾದ ಬಸವರಾಜ ಮತ್ತಿಮೂಡ, ಬಿ.ಜಿ.ಪಾಟೀಲ, ಜಿ.ಪಂ.ಅಧ್ಯಕ್ಷೆ ಸುರ್ವಣ ಮಾಲಾಜಿ, ಕುಡಾ ಅಧ್ಯಕ್ಷ ದಯಾಘನ ಧಾರವಾಡಕರ್, ಮೃತ್ಯಂಜಯಾ ಸ್ವಾಮಿ, ಜಿ.ಟಿ ಸುರೇಶ, ಸುರೇಶ ಎಲ್.ಶರ್ಮಾ, ಸಿದ್ದಾಜೀ ಪಾಟೀಲ, ಶಿವರಾಜ ಪಾಟೀಲ, ಪ್ರಕಾಶ ಪಾಟೀಲ್, ಅಶೋಕ ಅಂಬಲಗಿ, ವಿಜಯಲಕ್ಷ್ಮೀ ಗೋಬ್ಬುರಕರ್ ಹಾಗೂ ಗ್ರಾಮಸ್ಥರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here