ಅನುಭವ ಮಂಟಪ ಭೂಮಿ ಪೂಜೆ ನಾಳೆ

0
186

ಬಸವಕಲ್ಯಾಣ: 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಜಗತ್ತಿನ ಮೊಟ್ಟಮೊದಲ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅನುಭವಮಂಟಪವನ್ನು ಸ್ಥಾಪಿಸಿದರು.

ಅನುಭವಮಂಟಪದಲ್ಲಿ ಎಲ್ಲಾ ಸಮುದಾಯದ ೭೭೦ ಶರಣ ಶರಣೆಯರು ಒಗ್ಗೂಡಿ ಚಿಂತನ-ಮಂಥನ ಮಾಡುವ ಮೂಲಕ ಪ್ರಜಾಪ್ರಭುತ್ವ ಮೌಲ್ಯದ ವಚನ ಸಾಹಿತ್ಯವನ್ನು ಹುಟ್ಟುಹಾಕಿದರು. ವಚನಗಳಲ್ಲಿ ಸ್ವಾತಂತ್ರ್ಯ, ಸಮಾನತೆ, ಬಂಧುತ್ವ, ಕಾಯಕ, ದಾಸೋಹ ಮುಂತಾದ ಮಾನವೀಯ ಮೌಲ್ಯಗಳಿವೆ. ಇವು ಇಂದಿಗೂ ಸಕಲ ಜಿವಾತ್ಮರ ಕಲ್ಯಾಣಕ್ಕಾಗಿ ನಮಗೆ ಮಾರ್ಗದರ್ಶಕವಾಗಿವೆ. ಇಂದಿಗೂ ಬಸವಾದಿ ಶರಣರ ಕ್ರಾಂತಿಯ ಕೇಂದ್ರವಾಗಿರುವ ಅನುಭವ ಮಂಟಪ ಜಗತ್ತಿಗೆ ಪ್ರಜಾಪ್ರಭುತ್ವದ ಸಂದೇಶ ನೀಡುತ್ತಿದೆ.

Contact Your\'s Advertisement; 9902492681

೧೨ನೇ ಶತಮಾನದ ನಂತರ ೧೬ನೇ ಶತಮಾನದಲ್ಲಿ ಯಡಿಯೂರ ಸಿದ್ಧಲಿಂಗೇಶ್ವರರು ಹಾಗೂ ೧೯ನೇ ಶತಮಾನದಲ್ಲಿ ಭಾಲ್ಕಿಯ ಪರಮಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಅನುಭವಮಂಟಪ ನವನಿರ್ಮಾಣಕ್ಕಾಗಿ ಅವಿಶ್ರಾಂತವಾಗಿ ದುಡಿದರು.

ಬಸವಾದಿ ಶರಣರ ಕೃಪೆಯಿಂದ ಹಾಗೂ ಅನೇಕ ಮಹನೀಯರ ಪರಿಶ್ರಮದ ಫಲವಾಗಿ ಕರ್ನಾಟಕ ಸರ್ಕಾರದಿಂದ ಬಸವಕಲ್ಯಾಣದಲ್ಲಿ ನೂತನ ಅನುಭವಮಂಟಪದ ಭೂಮಿಪೂಜೆಯನ್ನು ನಾಳೆ 06.01.2021 ರಂದು ಮಧ್ಯಾಹ್ನ 12 ಗಂಟೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರ ಹಸ್ತದಿಂದ ನೆರವೇರಲಿದೆ ಎಂದು ಬಸವಕಲ್ಯಾಣ ಅನುಭವಮಂಟಪದ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಮಾರಂಭಕ್ಕೆ ಎಲ್ಲಾ ಸಮಾಜಬಾಂಧವರು, ಬಸವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here