ಉತ್ತಮ ಶಿಕ್ಷಣ ಜೋತೆಗೆ ಸಂಸ್ಕಾರ ಅಗತ್ಯ : ವಿಶ್ವರಾಧ್ಯ ಶ್ರೀ

0
37

ಅಫಜಲಪುರ: ಸಮಾಜ ಅಭಿವೃದ್ದಿಯತ್ತ  ಬದಲಾವಣೆ ಆಗಬೇಕಾದರೆ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೋತೆಗೆ ಸಂಸ್ಕಾರ ನೀಡುವುದರಿಂದ ಸಮಾಜ ಪರಿವರ್ತನೆ ಮಾಡಬಹುದು ಪ್ರತಿಯೊಬ್ಬರು ಜೋತೆಗೂಡಿ ಸಮಾಜ ಸಂಘಟನೆ ಮಾಡಿದರೆ ಸಮಾಜ ಒಳ್ಳೆಯ ಹಾಗೂ ಅಭಿವೃದ್ದಿ ಕಡೆ ಸಾಗುತ್ತದೆ ಎಂದು ಅಫಜಲಪುರ ಮಳೇಂದ್ರ ಸಂಸ್ಥಾನ ಹಿರೇಮಠದ ಪರಂ ಪೂಜ್ಯ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.

ಅಫಜಲಪುರ ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಶ್ರೀ ನಿಂಬಕ್ಕ ದೇವಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ನೂತನವಾಗಿ ಆಯ್ಕೆಯಾದ ಗ್ರಾಪಂ ಸದಸ್ಯರಿಗೆ ಹಾಗೂ ಪುರಸಭೆ ಸದಸ್ಯರಿಗೆ ಮತ್ತು ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

Contact Your\'s Advertisement; 9902492681

ದಿಶಾರವಿ ಬಂಧನ ಖಂಡಿಸಿ ರಾಷ್ಟ್ರಪತಿಗೆ ಮನವಿ

ಕಾರ್ಯಕ್ರಮದ ಅಧ್ಯಕ್ಷತೆ ಪುರಸಭೆ ಮಾಜಿ ಸದಸ್ಯೆರಾದ ಮಳೆಪ್ಪ ಮನ್ಮಿ ವಹಿಸಿದರು. ಕಾರ್ಯಕ್ರಮದಲ್ಲಿ ಧರ್ಮವೀರ ಡಾ. ಶಿವಶರಣಪ್ಪ ಸರಸಂಬ, ಮುಖಂಡರಾದ ಭೀಮಾಶಂಕರ ನಿಲೂರ, ಸೈಬಣ್ಣ ಕಲ್ಲೊಳ್ಳಿ, ಬಸವರಾಜ ಪಾಟೀಲ, ನಿವೃತ್ತ ಪ್ರಾಚಾರ್ಯರು ಮಹಾದೇವಪ್ಪ ತಾಂಬೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೈದ್ಯಧಿಕಾರಿ ಮಹಾಂತಪ್ಪ ಹಾಳಮಳ್ಳಿ, ಶಿವಶರಣಪ್ಪ ತೋಳನೂರ,  ಟ್ರಸ್ಟಿನ ಅಧ್ಯಕ್ಷರಾದ ಸಂತೋಷ ಮನ್ಮಿ, ಉಪಾಧ್ಯಕ್ಷರಾದ ವಿಶ್ವನಾಥ ಮಲಘಾಣ, ಸುನೀಲ ಕಲ್ಲೋಳಿ ಸೇರಿದಂತೆ ಟ್ರಸ್ಟಿನ್ ಸರ್ವ ಸದಸ್ಯರು ಹಾಗೂ ಇತರರು ಇದ್ದರು.  ಕಾರ್ಯಕ್ರಮ ಮಧ್ಯದಲ್ಲಿ ಶ್ರೀ ನಿಂಬಕ್ಕ ದೇವಿ ಭಾವಚಿತ್ರ ಇರುವ ವರ್ಣ ರಂಜಿತ ೨೦೨೧ನೇ ಸಾಲಿನ ಕ್ಯಾಲೆಂಡರ ಬಿಡುಗಡೆ ಮಾಡಲಾಯಿತು. ಶಿಕ್ಷಕ ನಂದಕುಮಾರ ಲೋಣಿ ಸ್ವಾಗತಿಸಿ ಕಾರ್ಯಕ್ರಮ ವಂದಿಸಿದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಅವ್ಯವಸ್ಥೆ: ಕ್ರಮ ಆಗ್ರಹ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here