ಕಲಬುರಗಿ: ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನದ ಉಪ ಕೇಂದ್ರ ಕಚೇರಿ ಕಲಬುರ್ಗಿಯಲ್ಲಿ ಸ್ಥಾಪಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಸುಮಾರು 2000 ವರ್ಷದ ಇತಿಹಾಸ ಇರುವ ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿದೆ. ಸರ್ವಶ್ರೇಪ್ಟ ಜ್ಞಾನ ಪೀಠ ಪ್ರಶಸ್ತಿ ಅನೇಕ ಮಹಾನ್ ಕನ್ನಡ ಕವಿಗಳಿಗೆ ಲಭಿಸಿರುವುದು ಹೆಮ್ಮೆಯ ವಿಷಯ. ಶಾಸ್ತ್ರೀಯ ಸ್ಥಾನಮಾನಕ್ಕಾಗಿ 2005 ರ ಇಸ್ವಿಯಿಂದ ನಿರಂತರ ಹೋರಾಟದ ಫಲವಾಗಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಸರಕಾರ ಇದಕ್ಕಾಗಿ 22 ಕೋಟಿ ಹಣ ನೀಡಿದ್ದು, ಇದರ ಕೇಂದ್ರ ಸ್ದಾನ ಮೈಸೂರಿನಲ್ಲಿ ಸ್ಥಾಪಿಸಲು ಮುಂದಾಗಿದೆ.
ಕನ್ನಡೇತರ ಭಾಷಾ ಜನರಿಗೆ ಕನ್ನಡ ಕಲಿಕೆ ಅಭಿಯಾನ ನಡೆಸಿ ಕನ್ನಡ ಭಾಷೆಯ ಅಭಿವೃದ್ಧಿ ಪಡಿಸುವುದರ ಜೋತೆಗೆ ಕನ್ನಡೇತರ ಜನರಲ್ಲಿ ಕನ್ನಡ ಅಭಿಮಾನ ಹುಟ್ಟಿಸುವ ಯೋಜನೆಗಳನ್ನು ಹಮ್ಮಿಕೊಳ್ಳಬೇಕು.ಸರಕಾರಿ ಕನ್ನಡ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಗಡಿ ಪ್ರದೇಶಗಳಲ್ಲಿ ಕನ್ನಡ ಭಾಷೆ ಅಭಿವೃದ್ಧಿ ಪಡಿಸಲು ಕನ್ನಡ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಕನ್ನಡ ಭಾಷೆ ಹೆಚ್ಚು ಬಳಕೆ ಇರುವ ಪ್ರದೇಶ ಎಂದರೆ ಕಲ್ಯಾಣ ಕರ್ನಾಟಕ ಭಾಗ ಎಂದರೆ ತಪ್ಪಾಗಲಾರದು. ಆದರೆ ಕನ್ನಡ ಹುಟ್ಟಿ ಬೆಳೆದ ಶ್ರೀಮಂತ ಇತಿಹಾಸ ನಾಡಾದ ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಕನ್ನಡ ಶಾಸ್ತ್ರೀಯ ಸ್ಥಾನಮಾನದ ಉಪ ಕೇಂದ್ರ ಸ್ಥಾಪಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.