ದೇಶ ಭಕ್ತಿ ಎನೆಂಬುವದು ಜಗತ್ತಿಗೆ ಪರಿಚಯ ಮಾಡಿ ಕೊಟ್ಟ ಸುಪುತ್ ಸುಭಾಷ್ ಚಂದ್ರ ಬೋಸ್: ಲಕ್ಷ್ಮಣ ದಸ್ತಿ

0
35

ಕಲಬುರಗಿ: ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮದೆ ಆದ ರೀತಿಯಲ್ಲಿ ಬ್ರಿಟಿಷ್ ರ ವಿರುದ್ಧ ಜಾಗತಿಕ ಮಟ್ಟದಲ್ಲಿ ಹೋರಾಟ ಮಾಡಿ ಇಂಗ್ಲೀಷರಿಗೆ ಸಿಂಹ ಸ್ವಪ್ನವಾಗಿದ್ದ ಸುಭಾಷ್ ಚಂದ್ರ ಬೋಸ್ ರು ಇಡೀ ಜಗತ್ತಿನ ಜನರಿಗೆ ದೇಶ ಭಕ್ತಿ ಎನೆಂಬುವದೆಂದು ತೊರಿಸಿಕೊಟ್ಟಿದ್ದಾರೆ ಎಂದು ಹಿರಿಯ ಕಲ್ಯಾಣ ಕರ್ನಾಟಕ ಪ್ರದೇಶದ  ಹೋರಾಟಗಾರರಾದ ಲಕ್ಷ್ಮಣ ದಸ್ತಿಯವರು ಹೇಳಿದರು.

ಸುಭಾಷ್ ಚಂದ್ರ ಬೋಸ್ ರವರ 125ನೇ ಜನ್ಮ ದಿನದ ಅಂಗವಾಗಿ ಯುವ ಬ್ರಿಗೇಡ್ ವತಿಯಿಂದ ಸರದಾರ ವಲ್ಲಭಭಾಯ್ ಪಟೇಲ್ ವೃತದಲ್ಲಿ ಹಮ್ಮಿಕೊಂಡಿರುವ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ   ದಸ್ತಿ ಯವರು ಮಾತನಾಡಿದರು.

Contact Your\'s Advertisement; 9902492681

ಮುಂದುವರಿದ ಅವರು ಆಜಾದ್ ಹಿಂದ್ ಫೌಜ ರಚನೆ ಮಾಡಿ ಬ್ರಿಟಿಷರ ವಿರುದ್ಧ ದಿಟ್ಟತನದ ಹೋರಾಟ ನಡೆಸಿದ ಭೋಸರು  1943 ಅಕ್ಟೋಬರ್ 21 ರಂದು ಭಾರತದ ಹಂಗಾಮಿ ಸರ್ಕಾರ ರಚನೆ ಮಾಡಿ ಭಾರತದ ಮೊದಲನೇ ಪ್ರಧಾನ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿ  ಭಾರತದ ತ್ರಿವರ್ಣ ಧ್ವಜ ಹಾರಿಸಿ ಜಗತ್ತಿನಲ್ಲೇ ಸಂಚಲನ  ಮೂಡಿಸಿದರು.  ಬ್ರಿಟಿಷ್ ಒಡೆದು ಆಳುವ ನೀತಿಗೆ ನಮ್ಮ ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಬ್ರಿಟಿಷರ ಕುಟಿಲ ತಂತ್ರಗಳ ಬಗ್ಗೆ ಜಾಗತಿಕ ವೇದಿಕೆಯಲ್ಲಿ ಖಂಡಾತುಂಡವಾಗಿ ಬಲವಾಗಿ ಖಂಡಿಸಿದರು.

ಈ ಮಹಾನ ನಾಯಕನ ತ್ಯಾಗ, ಬಲಿದಾನ,ದಿಟ್ಟತನದ ಧೋರಣೆಯ  ಫಲಸ್ವರೂಪದ ಬುನಾದಿಯೇ ಕಾರಣದಿಂದಲೇ  ನಮ್ಮ ದೇಶ ಸ್ವಾತಂತ್ರ ಪಡೆಯಲು ಪ್ರಾಮುಖ್ಯತೆ ಪಡೆದಿದೆ  ಈ ಮಹತ್ವದ ಗಂಭೀರ ದೇಶ ಭಕ್ತಿಯ ಪ್ರತೀಕವಾದ ಭೋಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರರಾದ ಶಾಂತಯ್ಯಾ ಸ್ವಾಮಿಯವರು ಸೈನಿಕರಾಗಿದ್ದ ಸಂದರ್ಭದಲ್ಲಿಯ ಅನುಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಶ್ರೀಗಳಾದ ಮಹೇಶಾ ನಂದಸ್ವಾಮಿಗಳು,  ಆಶಿರ್ವಚನ ನೀಡಿದರು.

ಈ ಮೊದಲು ಯುವ ಬ್ರಿಗೇಡ್ ವತಿಯಿಂದ ಸುಭಾಷ್ ಚಂದ್ರ ಬೋಸ್ ರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗಂಜ ದಿಂದ ಜೈ ಹಿಂದ್ ರನ್ ಎಂಬ  ಮ್ಯಾರಾಥಾನ  ಮೂಲಕ ಸರದಾರ ಪಟೇಲ್ ವೃತದಲ್ಲಿ ಸಮಾವೇಶಗೊಂಡು ಸುಭಾಷ್ ಚಂದ್ರ ಬೋಸ್ ಜಯಂತೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ  ಕರಾಟೆ ಗುರುಗಳಾದ ಶಿವಲಿಂಗಪ್ಪ, ಮಾಜಿ ಸೈನಿಕರರಾದ ಬಸವರಾಜ ಬಿರಾದಾರ್  ಯುವ ಬ್ರಿಗೇಡ್ ಮುಖಂಡರಾದ ಶರಣಯ್ಯಾ ಇಕ್ಕಳಕಿಮಠ, ಬಸವಂತರಾಯ ಮಾಲಿ ಪಾಟೀಲ್,ರೂಹನ್ ರಟಕಲ್, ಹರೀಶ್ ಗುತ್ತೇದಾರ, ರವಿರಾಜ ದಮ್ಮೊರ, ಅನೀಲ ತಂಬಾಕೆ, ಪ್ರಶಾಂತ ತಂಬೂರಿ ಸೇರಿದಂತೆ ಐದು ನೂರಕ್ಕೂ ಮೇಲ್ಪಟ್ಟು ಯುವ ಬ್ರಿಗೇಡ್ ಯುವ ಯುವತಿಯರು ಭಾಗವಹಿಸಿಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here