ಆರು ಜನ ಸಾಧಕರಿಗೆ ‘ಅವ್ವ’ ಪ್ರಶಸ್ತಿ

0
274

ಕಲಬುರಗಿ: ಜಿಲ್ಲೆಯ ಡೊಂಗರಗಾಂವದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ನೀಡುವ ನಾಲ್ಕನೇ ವರ್ಷದ  2019 ನೇ ಸಾಲಿನ ‘ಅವ್ವ’ ಪ್ರಶಸ್ತಿಗೆ ಆರು ಜನ ಸಾಧಕರಿಗೆ ಆಯ್ಕೆ ಮಾಡಲಾಗಿದೆ ಎಂದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಶರಣಬಸಪ್ಪ ವಡ್ಡನಕೇರಿ ತಿಳಿಸಿದ್ದಾರೆ

ಕೋಲಾರದ ನ.ಗುರುಮೂರ್ತಿಯವರ ‘ಅರ್ಜಿ ಹಾಕಿ ಹುಟ್ಟಿದವರ ನಡುವೆ'(ಕವನಸಂಕಲನ) ಗೋಕಾಕದ  ಶಕುಂತಲಾ ಹಿರೇಮಠ ರವರ ‘ರೆಕ್ಕೆ ಬಲಿತ ಹಕ್ಕಿ’ (ಕಥಾಸಂಕಲನ) ಹುಮನಾಬಾದಿನ ಡಾ. ಜಯದೇವಿ ಗಾಯಕವಾಡ್ ರವರ ‘ಹಾಯಿಕುಗಳು’ ಕೃತಿಗಳನ್ನು ಅವ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Contact Your\'s Advertisement; 9902492681

ಅದೇ ರೀತಿಯಾಗಿ ಡಾ. ಎಸ್. ಎಸ್. ಗುಬ್ಬಿ ವೈದ್ಯಕೀಯ ಸಾಹಿತ್ಯ, ಸುಬ್ಬರಾವ ಕುಲಕರ್ಣಿ ರವರ ರಂಗಭೂಮಿ ಮತ್ತು ಪ್ರೊ. ಶಂಕರಲಿಂಗ ಹೆಂಬಾಡಿಯವರ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ  2019 ನೇ ಸಾಲಿನ ‘ಅವ್ವ ಗೌರವ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಜ. 26 ರಂದು ಅನ್ನಪೂರ್ಣ ಕ್ರಾಸ್ ಹತ್ತಿರ  ಇರುವ ‘ಕಲಾಮಂಡಳ’ ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಸಂಚಾಲಕರಾದ ಡಾ. ನಾಗಪ್ಪ ಗೋಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here