ಒಡೆದ ಮನಸ್ಸುಗಳ ಬೆಸೆಯುವ ಶಕ್ತಿ ಸಂಗೀತಕ್ಕಿದೆ: ನಮ್ ಋಷಿ

0
33

ಶಹಾಪುರ :ಆಧುನಿಕತೆಯ ಭರಾಟೆಯಲ್ಲಿ ನಮ್ಮಿಂದ ಸಂಗೀತ ಮರೆಯಾಗುತ್ತಿದೆ.ಕಲೆ, ಸಂಗೀತ,ಸಾಹಿತ್ಯ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿರಂತರವಾಗಿ ಇಂಥ ಕಾರ್ಯಕ್ರಮಗಳು ಹೆಚ್ಚೆಚ್ಚು  ನಡೆಯಬೇಕಿದೆ ಅಲ್ಲದೆ ಸಂಗೀತವು ಎಂಬುವುದು ಮನಸ್ಸಿಗೆ ಮುದ ನೀಡುವ ಸಾಧನ,ಒಡೆದ ಮನಸ್ಸುಗಳ ಬೆಸೆಯುವ ಶಕ್ತಿ ಸಂಗೀತಕ್ಕಿದೆ ಎಂದು ಸಾಹಿತಿ ಹಾಗೂ ಸಂಗೀತ ನಿರ್ದೇಶಕರಾದ ನಮ್ಮ ಋಷಿ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ  ಭವನದಲ್ಲಿ ಕಲಾನಿಕೇತನ ಟ್ರಸ್ಟ್ ಸಗರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ  ಸಹಯೋಗದಲ್ಲಿ ಏರ್ಪಡಿಸಿರುವ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ  ಮಾತನಾಡಿದರು.

Contact Your\'s Advertisement; 9902492681

ಇನ್ನೋರ್ವ ಅತಿಥಿಗಳು ಹಾಗೂ ಚುಟುಚುಟು ಗೀತ ಖ್ಯಾತಿಯ  ಶಿವು ಭೇರ್ಗಿ ಮಾತನಾಡಿ ಸಂಗೀತಕ್ಕೆ ಮನಸೋಲುವ ವ್ಯಕ್ತಿ ಈ ಪ್ರಪಂಚದಲ್ಲಿ ಇಲ್ಲ, ಸಂಗೀತಕ್ಕೆ ತಲೆಬಾಗದವರು ಯಾರು ಇಲ್ಲ,ಸಂಗೀತ ಎಂಬ ಪದ ಕೇಳಿದರೆ ಎಲ್ಲಿಲ್ಲದ ಸಂತೋಷ ಭಾವ ಹೊರಹೊಮ್ಮುವುದು ಸಂಗೀತದಿಂದ ಸ್ಫೂರ್ತಿ ಪಡೆದ ಕೋಟಿ ಕೋಟಿ ಮನಸ್ಸುಗಳು ಈ ಪ್ರಪಂಚದಲ್ಲಿ ನಾವು ಇಂದಿಲ್ಲಿ ಕಾಣಬಹುದು ಎಂದು ನುಡಿದರು.

ಖ್ಯಾತ ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ ಮಾತನಾಡಿ ಪ್ರತಿನಿತ್ಯ ಹಾಸ್ಯ& ಸಂಗೀತ ಪ್ರಸಂಗಗಳು ಆಲಿಸುವುದರಿಂದ ಮನಸ್ಸು ಮತ್ತು ಮೆದುಳು ಸರಿಯಾಗಿ ಕೆಲಸ ಮಾಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಬದುಕಿಗೆ ನೆಮ್ಮದಿ ನೀಡಬಲ್ಲದು,ಅಲ್ಲದೆ ಸಂಗೀತ ಕ್ಷೇತ್ರಕ್ಕೆ ಆದಿಕಾಲದಿಂದಲೂ ತನ್ನದೆಯಾದ ಇತಿಹಾಸವಿದೆ ಎಂದು ಹೇಳಿದರು.

ಈ ಸಮಾರಂಭದ ವೇದಿಕೆಯ ಮೇಲೆ ಯುವ ಮುಖಂಡರಾದ ಬಾಪುಗೌಡ ದರ್ಶನಾಪುರ,ಯಾದಗಿರಿ ನಗರಸಭೆಯ ಪೌರಾಯುಕ್ತರಾದ ಎಚ್. ಬಕ್ಕಪ್ಪ,ಕಲಬುರ್ಗಿಯ ವಿಜಯ ಕರ್ನಾಟಕ ಪತ್ರಿಕೆಯ ಉಪಸಂಪಾದಕರಾದ ಪ್ರಕಾಶ್ ದೊರೆ,ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಇಂದೂಧರ ಸಿನ್ನೂರ,ಯುವ ಮುಖಂಡರಾದ ದೇವಿಂದ್ರಪ್ಪ ತೋಟಗೇರ,ಹಾಗೂ ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ ವಹಿಸಿಕೊಂಡಿದ್ದರು.

ನಂತರ ಜರುಗಿದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ರಮೇಶ ಯಾಳಗಿ ಮತ್ತು ತಂಡದವರಿಂದ  ಸುಗಮ ಸಂಗೀತ,ಜಯಶ್ರೀ ಮತ್ತು ಹಣಮಂತ ತಂಡದವರಿಂದ ಹಾಗೂ ದಿಲೀಪ್ ಕುಮಾರ್ ರಾಠೋಡ್ ಮತ್ತು ತಂಡದವರಿಂದ ಜಾನಪದ ಸಂಗೀತ ಹಾಗೂ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಮಾರಂಭದಲ್ಲಿ ಸುಮಾರು ಇಪ್ಪತ್ತುಕ್ಕೂ ಹೆಚ್ಚು ಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸಂತೋಷ ಸತ್ಯಂಪೇಟೆ ಸ್ವಾಗತಿಸಿದರೆ ವೀರೇಶ್ ಹೊಸಳ್ಳಿ ನಿರೂಪಿಸಿದರು ಟ್ರಸ್ಟ್ ನ ಅಧ್ಯಕ್ಷ ಬಸವರಾಜ ಸಿನ್ನೂರ ಪ್ರಾಸ್ತಾವಿಕ ನುಡಿಗಳಾಡಿದರು ಮಹಂತೇಶ್ ಗಿಂಡಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here