ಬಡವರಿಗೆ ವರದಾನವಾದ ಧರ್ಮಸ್ಥಳದ ಯೋಜನೆಗಳು: ನಾಗರಾಜ್

0
34

ಶಹಾಪುರ : ಬಡವರಿಗೆ, ನಿರ್ಗತಿಕರಿಗೆ,ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಲವಾರು ರೀತಿಯಲ್ಲಿ ಅನುಕೂಲತೆ ಮಾಡಿಕೊಟ್ಟು ಬಡವರ ಪಾಲಿಗೆ ವರದಾನವಾಗಿವೆ ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಯೋಜನಾ ಅಧಿಕಾರಿಗಳಾದ ನಾಗರಾಜ್ ಹೇಳಿದರು.

ಸಗರ ಗ್ರಾಮದ ಮೌನೇಶ್ವರ ಕಲ್ಯಾಣಮಂಟಪದಲ್ಲಿ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಧರ್ಮಸ್ಥಳ ಯೋಜನೆ ಗಳು ಸ್ವಾವಲಂಬನೆ ಬದುಕಿಗೆ ಸ್ಫೂರ್ತಿ ಯಾಗಿವೆ ಎಂದು ನುಡಿದರು.ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಾದ ಬಲೂನ್ ಆಟ, ಲಿಂಬು ಚಮಚ ಆಟ, ರಂಗೋಲಿ ಸ್ಪರ್ಧೆಗಳು ಏರ್ಪಡಿಸಿದ್ದರು ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು ನಂತರ ವಯೋವೃದ್ಧರಿಗೆ ಮಾಶಾಸನ ಕಿಟ್ ವಿತರಿಸಲಾಯಿತು.

Contact Your\'s Advertisement; 9902492681

ಈ ಸಮಾರಂಭದ ವೇದಿಕೆಯ ಮೇಲೆ ಸಮನ್ವಯಾಧಿಕಾರಿಗಳಾದ ಸಾವಿತ್ರಿ,ಸಗರ ಸಂಘದ ಒಕ್ಕೂಟದ ಅಧ್ಯಕ್ಷರಾದ ಶಶಿಕಲಾ,ಅನ್ನಪೂರ್ಣ, ಶಿಲ್ಪಾ, ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here