ನಾಳೆ ಕಲಬುರಿಗಯಲ್ಲಿ 200ಕ್ಕೂ ಹೆಚ್ಚು ಟ್ರಾಕ್ಟರ್ ಗಳಿಂದ ಜನತಾ ಪರೇಡ್

0
55

ಕಲಬುರಗಿ: ದೇಶದ್ಯಂತ ಕಳೆದ ನಾಲ್ಕು ತಿಂಗಳಿಂದು ನಾಲ್ಕು ಕೃಷಿ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ರದ್ದು ಪಡೆಸಬೇಕೆಂದು ನಡೆಸುತ್ತಿರುವ ನಿಂರತ ಹೋರಾಟದ ಹಿನ್ನೆಲೆಯಲ್ಲಿ ನಾಳೆ 26 ಗಣರಾಜ್ಯೋತ್ಸವದ ದಿನದ ಅಂಗವಾಗಿ ರೈತ ಸಂಘಟನೆಗಳು ದೆಹಲಿಯಲ್ಲಿ ಬೃಹತ್ ಟ್ರಾಕ್ಟರ್ ಪರೇಡ್ ನಡೆಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಳೆ 12ಕ್ಕೆ ಎಪಿಎಂಸಿ ಕಚೇರಿಯಿಂದ ಸುಪರ್ ಮಾರ್ಕೆಟ್ ಮಾರ್ಗವಗಿ ತೀಮ್ಮಾಪುರಿ ಸರ್ಕಲದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಂಯುಕ್ತ ಕಿಸಾನ್ ಮೋರ್ಚಾ ವೇದಿಕೆವಯಿಂದ ಜನತಾ ಪರೇಡ್ ನಡೆಯಲಿದೆ ಎಂದು ಸಿಪಿಐಎಂ ಜಿಲ್ಲಾಕಾರ್ಯದರ್ಶಿ ಶರಣಬಸಪ್ಪಾ ಮಮಶೆಟ್ಟಿ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

200ಕ್ಕೂ ಹೆಚ್ಚು ಟ್ರಾಕ್ಟರ್ ಪರೇಡ್ ನಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಮುಂದಿನ ಟ್ರ್ಯಾಕ್ಟ್ರಗೆ ಸಂವಿಧಾನದ ಪೀಠಿಕೆ ಅಳವಡಿಸಲಾಗುವುದು ಮತ್ತು ಭಾರತದ ಧ್ವಜದ ಮೆರವಣಿಗೆ ನಡೆಸಲಿವೆ, ಪರೇಡ್ ನಲ್ಲಿ ರೈತರು ಕಾರ್ಮಿಕರು ಮಹಿಳೆಯರು ಸೇರಿ 1500 ಜನರು ಸೇರುವ ನಿರೀಕ್ಷೆ ವ್ಯಕ್ತವಾಗುತ್ತಿದೆ.

ಪರೇಡ್ನಲ್ಲಿ ಮಾಜಿ ಶಾಸಕ ಬಿ.ಆರ್ ಪಾಟೀಲ್, ಸಾಹಿತಿ ಹಾಗೂ ಮಹಿಳಾ ಹೋರಾಟಗಾರ್ತಿ ನೀಲಾ ಕೆ, ಎಸ್ ಆರ್ಕೊಲ್ಲೂರು, ಸಿಪಿಐಯ ಶೌಕತ್ ಅಲಿ ಆಲೂರ, ಭೀಮಾಶಂಕರ ಮಾಡಿಯಾಳ. ಆರ್.ಕೆ.ಎಸ್ ಅಧ್ಯಕ್ಷರಾದ ಎಸ್. ಎಮ್ ವರ್ಮಾ ಜಿಲ್ಲಾ ಪಂಚಾಯತ ಸದಸ್ಯರು ಸೇರುದಂತೆ ಹಲವು ಜನಪರ ಸಂಘಟನೆಗಳ ಮುಖಂಡರು ಪರೇಡ್ನಲ್ಲಿ ಭಾಗವಹಿಸಲಿದ್ದಾರೆಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here