ಸುರಪುರದ ಗರುಡಾದ್ರಿಯಲ್ಲಿ ಬೃಹತ್ ಸಾಹಿತ್ಯ ಸಮಾವೇಶ: ಶ್ರೀನಿವಾಸ ಜಾಲವಾದಿ

0
19

ಸುರಪುರ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಈ ಇಂದು ’ವರ್ಷದ ವ್ಯಕ್ತಿ’ ಸನ್ಮಾನ, ಪುಸ್ತಕ ಬಿಡುಗಡೆ, ಸಂಗೀತ ಕಾರ‍್ಯಕ್ರಮ, ಕವಿಗೋಷ್ಠಿ, ಕಲಾ ತಂಡಗಳಿಂದ ಕಲಾ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀನಿವಾಸ ಜಾಲವಾದಿ ತಿಳಿಸಿದ್ದಾರೆ.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಇಂದು (೨೬ ಜನೆವರಿ) ಬೆಳಿಗ್ಗೆ ೧೦.೪೫ಕ್ಕೆ ಆಯೋಜಿಸಲಾದ ಕಾರ್ಯಕ್ರಮವನ್ನು ದೆಹಲಿ ದೂರದರ್ಶನದ ಹೆಚ್ಚುವರಿ ವಿಶ್ರಾಂತ ಮಹಾನಿರ್ದೇಶಕ ನಾಡೋಜ ಡಾ.ಮಹೇಶ ಜೋಶಿ ಉದ್ಘಾಟಿಸಲಿದ್ದು, ಕಾರ‍್ಯಕ್ರಮದ ದಿವ್ಯಸಾನಿಧ್ಯವನ್ನು ಚೆನ್ನಬಸವ ಶಿವಾಚಾರ್ಯರು ಹಿರೇಮಠ ಸಂಸ್ಥಾನ ಕೆಂಭಾವಿ ಅವರು ವಹಿಸಲಿದ್ದಾರೆ.

Contact Your\'s Advertisement; 9902492681

ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಹಾಮನಿ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಖ್ಯಾತ ನಾಟಕಕಾರ ಎಲ್.ಬಿ.ಕೆ.ಆಲ್ದಾಳ, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ, ಬಸವರಾಜ ಜಮದ್ರಖಾನಿ, ಜೆ.ಅಗಸ್ಟಿನ್, ರಾಜಾ ಮುಕುಂದ ನಾಯಕ, ರಾಜ್ಯ ಕಾರ‍್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂಜೀವರಾವ ಕುಲಕರ್ಣಿ, ನಿವೃತ್ತ ಲೋಕಾಯುಕ್ತ ಎಸ್.ಪಿ. ಸಿ.ಎಸ್.ಭಂಡಾರಿ, ಕೊಟ್ರೇಶಿ ಮರಬನಹಳ್ಳಿ, ಅಮರಯ್ಯಸ್ವಾಮಿ ಜಾಲಿಬೆಂಚಿ, ಪ್ರಕಾಶ ಅಂಗಡಿ ಕನ್ನೆಳ್ಳಿ, ಕುಮಾರಸ್ವಾಮಿ ಗುಡ್ಡೊಡಗಿ, ಚಂದಪ್ಪ ಯಾದವ, ವೀರಸಂಗಪ್ಪ ಹಾವೇರಿ ಕೊಡೇಕಲ್ಲ ಭಾಗವಹಿಸಲಿದ್ದಾರೆ. ಕಾರ‍್ಯಕ್ರಮದ ಅಧ್ಯಕ್ಷತೆ ಶ್ರೀನಿವಾಸ ಜಾಲವಾದಿ ವಹಿಸಲಿದ್ದು, ’ವರ್ಷದ ವ್ಯಕ್ತಿ’ಯಾಗಿ ಖ್ಯಾತ ನಾಟಕಕಾರ ಬಸವರಾಜ ಪಂಜಗಲ್ಲ ಆಯ್ಕೆಯಾಗಿದ್ದು, ಕಾರ‍್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಿ.ಎನ್.ಅಕ್ಕಿ, ವೀರೇಶ ಹಳ್ಳೂರ, ಬಸಲಿಂಗಮ್ಮ ಶಾಂತಪ್ಪ ಗೋಗಿ, ಶಿವಮೂರ್ತಿ ತನಿಕೆದಾರ, ಚಂದ್ರಹಾಸ ಮಿಟ್ಟಾ ಅವರನ್ನು ಸನ್ಮಾನಿಸಲಾಗುವುದು.

ಖ್ಯಾತ ಗಜಲ್ ಕವಿ ಅಲ್ಲಾಗಿರಿರಾಜ ಕನಕಗಿರಿಯವರ ಕವನ ಸಂಕಲನ ’ಸರ್ಕಾರ ರೊಕ್ಕ ಮುದ್ರಿಸಬಹುದು ರೊಟ್ಟಿಯನ್ನಲ್ಲ’ ಲೋಕಾರ್ಪಣೆಗೊಳ್ಳಲಿದೆ. ಚಂದ್ರಶೇಖರ ಗೋಗಿ ಅವರ ಕೊಳಲುವಾದನ, ಶ್ರೀಹರಿರಾವ ಆದೋನಿ, ಶರಣಕುಮಾರ ಜಾಲಹಳ್ಳಿ ಅವರ ಗಾಯನ ಕಾರ‍್ಯಕ್ರಮವಿದೆ.

ಮಧ್ಯಾಹ್ನ ಕವಿಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ ವಹಿಸಲಿದ್ದಾರೆ. ಆಶಯನುಡಿ ಅಲ್ಲಾಗಿರಿರಾಜ ಕನಕಗಿರಿ, ಮುಖ್ಯ ಅತಿಥಿಗಳಾಗಿ ಪ.ಮಾನು ಸಗರ, ಡಾ. ಯಂಕನಗೌಡ ಪಾಟೀಲ, ಬೀರಣ್ಣ ಬಿ.ಕೆ. ಆಲ್ದಾಳ, ಮೌನೇಶ ಕಂಬಾರ ವಹಿಸಲಿದ್ದು, ನಬಿಲಾಲ ಮಕಾನದಾರ, ಸಾಹೇಬಗೌಡ ಬಿರಾದಾರ, ಕೈದಾಳ ಕೃಷ್ಣಮೂರ್ತಿ, ನಿಂಗನಗೌಡ ದೇಸಾಯಿ, ಶಿವಶರಣಪ್ಪ ಶಿರೂರ, ಕುತ್ಬುದ್ಧೀನ್ ಅಮ್ಮಾಪುರ, ಇಕ್ಬಾಲ್ ರಾಹಿ, ಪಾರ್ವತಿ ದೇಸಾಯಿ, ಜ್ಯೋತಿ ದೇವಣಗಾಂವ ಸೇರಿದಂತೆ ೪೦ ಜನ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here