ಕಲಬುರಗಿ: ನಮ್ಮ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಪುರುಷನಿಗೆ ಸರಿಸಮನಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಇಂದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅವರಲ್ಲಿರುವ ಸೃಜನಶೀಲತೆಗೆ ಈ ಆಹಾರ ಮೇಳ ಸಾಕ್ಷಿ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಕೆ.ಬಿ. ಶಾಣಪ್ಪ ಹೇಳಿದರು.
ಭಾರತದ ೭೨ನೇ ಗಣರಾಜ್ಯೋತ್ಸವ ಅಂಗವಾಗಿ ನಗರದ ಶಹಾಬಾದ್ ರಸ್ತೆಯಲ್ಲಿರುವ ನೃಪತುಂಗ ಕಾಲನಿಯ ರಾಮಕೃಷ್ಣ ಹೆಗಡೆ ಉದ್ಯಾನದಲ್ಲಿ ಲೇಡಿಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಆಹಾರ ಮೇಳ” ಉದ್ಘಾಟಿಸಿ ಮಾತನಾಡಿದ ಅವರು, ಗಿಡ, ಮರ, ಹಸಿರು ಹೊದಿಕೆ, ಸ್ವಚ್ಛತೆಯಿಂದ ಕೂಡಿದ ಈ ನಗರ ಸ್ವಚ್ಛಂದ ಪರಿಸರ ಹೊಂದಿದೆ. ಇಲ್ಲಿನ ನಿವಾಸಿಗಳು ಇದನ್ನು ಕಾಪಾಡಿಕೊಂಡು ಬರಬೇಕು ಎಂದು ತಿಳಿಸಿದರು.
ಜಮಲಾ ಕೆ.ಬಿ. ಶಾಣಪ್ಪ, ವಿಜಯಲಕ್ಷ್ಮೀ ಎನ್.ಎಚ್., ಶಿವಾಜಿ, ಎಚ್.ಬಿ. ತೀರ್ಥೆ, ತುಕಾರಾಮ ಬಗಾಡೆ, ಶಿವಪುತ್ರ ಕುಂಬಾರ, ಮಲ್ಲಿನಾಥ ಪಾಟೀಲ, ಬಸವರಾಜ ಆಳಂದ, ಪರುಶುರಾಮ ಸೇರಿದಂತೆ ಕಾಲನಿಯ ಅನೇಕ ನಿವಾಸಿಗಳು ಇದ್ದರು.
ನರ್ಮದಾ ಜಾಧವ (ಪಾನ್), ಇಂದಿರಾ ಚವ್ಹಾಣ (ಮಂಗಳೂರು ಭಜಿ), ಸಂಗೀತಾ ಗೋಡಕೆ (ವಡಾಪಾವ್), ಸುಜಾತಾ ರಜನೀಶ (ಪಾನಿಪೂರಿ), ಸುಪ್ರಿಯಾ (ಬದಾಮ ಹಾಲು), ಶಕುಂತಲಾ ಮಾನೆ (ಸಮೋಸಾ, ಚಕುಲಿ), ಅಂಜಲಿ ಡಿ. (ಬೇಲ್‌ಪುರಿ), ಕಿರಣ ಅಶೋಕ (ಗೆಜ್ಜರಿ ಹಲ್ವಾ), ವಿಜಯಲಕ್ಷ್ಮೀ ಎನ್.ಎಚ್. (ಜಾಮೂನು), ಪ್ರೇಮಾ ಮಠ (ಪಾವ್ ಭಜಿ), ಪ್ರಿಯಾ ಮೋಹನ (ಮಿರ್ಚಿಭಜಿ), ಫರಾನಾ (ಬ್ರೆಡ್ ಪಟ್ಟೀಸ್), ಪುತಳಾಬಾಯಿ (ಗೋಬಿ-೬೫) ಮುಂತಾದವರು ವಿವಿಧ ಬಗೆಯ ತಿಂಡಿ ತಿನಿಸುಗಳ ಮಳಿಗೆ ಹಾಕಿ ವ್ಯಾಪಾರ ಮಾಡಿದರು. ಮಹಿಳೆಯರು ಮತ್ತು ಮಕ್ಕಳು ಆಹಾರ ಪದಾರ್ಥಗಳನ್ನು ಖರೀದಿಸಿ ತಿಂಡಿ ತಿನಿಸುಗಳನ್ನು ಸವಿದರು.