ಮ್ಯಾನ್ವಲ್ಸ್ ಸ್ಕ್ಯಾವೆಂಜರ್ ಸಾವು ಪ್ರಕರಣ: ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಭೇಟಿ

0
52

ಕಲಬುರಗಿ: ಕಳೆದ ಗುರುವಾರ ಕಲಬುರಗಿಯ ಕೈಲಾಶ್ ನಗರ ಪ್ರದೇಶದಲ್ಲಿ ಮ್ಯಾನ್ಹೋಲ್ ಸ್ವಚ್ಛತೆಗೆ ಇಳಿದು ಇಬ್ಬರು ಸ್ವಚ್ಛತಾ ಕಾರ್ಮಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಶನಿವಾರ ಘಟಣಾ ಸ್ಥಳಕ್ಕೆ ಎಂ.ಶಿವಣ್ಣ (ಕೋಟೆ) ನೇತೃತ್ವದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗವು ಭೇಟಿ ನೀಡಿ ಪರಿಶೀಲಿಸಿತು.

ಇಲ್ಲಿನ ಕೈಲಾಸ್ ನಗರಕ್ಕೆ ಭೇಟಿ ನೀಡಿದ ಆಯೋಗದ ಸದಸ್ಯರು ಘಟನೆ ಕುರಿತಂತೆ ಒಳಚರಂಡಿ ಮಂಡಳಿ ಮತ್ತು ಪಾಲಿಕೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಅವರು 2013ರಲ್ಲಿಯೆ ಮ್ಯಾನ್ವಲ್ ಸ್ಕ್ಯಾವೆಂಜರ್ ಕಾಯ್ದೆ ಜಾರಿಗೆ ಬಂದು ಗುಂಡಿಯಲ್ಲಿ ಮಾನವರನ್ನು ಇಳಿಸದಂತೆ ನಿಷೇಧ ಹೇರಿದ್ದರೂ, ಕಲಬುರಗಿಯಲ್ಲಿ ಈ ಘಟನೆ ನಡೆದು ಇಬ್ಬರು ಕಾರ್ಮಿಕರು ಸಾವನಪ್ಪಿದ್ದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಇಂತಹ ಘಟನೆ ಮರುಕಳುಹಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

Contact Your\'s Advertisement; 9902492681

ಕಾರ್ಮಿಕರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಘಟನೆ ಸಂಬಂಧ ಅಧಿಕಾರಿ ಅಥವಾ ಗುತ್ತಿಗೆದಾರರಾಗಲಿ, ಕಾನೂನಿನಿಂದ ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲ ಎಂದು ಹೇಳಿದರು.
ಮೃತ ಕಾರ್ಮಿಕರ ಕುಟುಂಬಸ್ಥರಿಗೆ ಸಾಂತ್ವನ: ತದನಂತರ ಆಯೋಗದ ಸದಸ್ಯರು ಕಲಬುರಗಿ ರಿಂಗ್ ರಸ್ತೆಯ ಆಜಾದ್ಪುರ ರಸ್ತೆ ಪ್ರದೇಶದಲ್ಲಿರುವ ಮೃತ ಕಾರ್ಮಿಕರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಉದ್ಯೋಗ, ವಸತಿ ಮತ್ತು ಮಕ್ಕಳ ಮುಂದಿನ ಶಿಕ್ಷಣದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹೀರೆಮನಿ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಗೀತಾ ವಾಡೇಕರ್, ನಾಗರಾಜ ಎಸ್., ಎಂ.ವಿ.ವೆಂಕಟೇಶ, ಕರ್ನಾಟಕ ಉಚ್ಛ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿಯ ಸದಸ್ಯರಾದ ನ್ಯಾಯವಾದಿ ಹೆಚ್.ವೆಂಕಟೇಶ ದೊಡ್ಡೇರಿ, ಡಿ.ಸಿ.ಪಿ. ಕಿಶೋರ ಬಾಬು, ಮಹಾನಗರ ಪಾಲಿಕೆಯ ಅಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಕಲಬುರಗಿ ವಲಯದ ಮುಖ್ಯ ಅಭಿಯಂತರ ದಿನೇಶ ಎಸ್.ಎನ್., ಅಧೀಕ್ಷಕ ಅಭಿಯಂತ ಬಸವರಾಜ ಅಲೇಗಾಂವ, ಕಾರ್ಯನಿರ್ವಾಹಕ ಅಭಿಯಂತರ ನರಸಿಂಹರೆಡ್ಡಿ, ಡಿಯುಡಿಸಿ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here