ಕಲಬುರಗಿ ಮಿಲೇನಿಯಂ ಶಾಲೆಗೆ ಜ್ಞಾನ್ ಪ್ರೋ ಪ್ರೋಸೈನ್ಷಿಯಾ ಕಲಿಕಾ ಸಾಧನ ಕಿಟ್ ಸೌಲಭ್ಯ

0
45

ಕಲಬುರಗಿ: ನಗರದ ವಿವೇಕಾನಂದ್ ನಗರದಲ್ಲಿನ ಮಿಲೇನಿಯಂ ಶಾಲೆಗೆ ಜ್ಞಾನ್ ಪ್ರೋ ಸಂಸ್ಥೆಯು ಸ್ಟೆಮ್ ಕಲಿಕಾ ಸಾಧನ (ಸೈನ್ಸ್, ಟೆಕ್ನಾಲಾಜಿ, ಇಂಜಿನಿಯರಿಂಗ್, ಮ್ಯಾಥ್ಸ್) ಹಾಗೂ ವಿಜ್ಞಾನವನ್ನು ಮಾಡಿ ಕಲಿಯುವ ಮಹತ್ವವನ್ನು ಅರಿತು ೨೦೧೮ನೇ ಸಾಲಿನಿಂದ ಪ್ರೋಸೈನ್ಷಿಯಾ ಸಾಧನ ಅಳವಡಿಸಲಾಗಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಪ್ರೀತ್ ಕಿತ್ತನಕೆರೆ ಅವರು ಇಲ್ಲಿ ಹೇಳಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ಐದನೇ ತರಗತಿಯಿಂದ ೮ನೇ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಗೆ ವಿಜ್ಞಾನದ ಕಿಟ್ ಕೊಡಲಾಗುವುದು. ಮಕ್ಕಳು ವಿಜ್ಞಾನದ ಪಾಠ ಕೇಳುವುದಲ್ಲದೇ ಮಾಡಿ ಕಲಿಯುವ ಮುಖ್ಯ ಉದ್ದೇಶ ಹೊಂದಲಾಗಿದೆ ಎಂದರು.

Contact Your\'s Advertisement; 9902492681

ವೈಜ್ಞಾನಿಕ ಸ್ಪರ್ಧೆಗಳ ಆಧಾರದ ಮೇಲೆ ಕೇಂದ್ರ ಸರ್ಕಾರದ ಭಾಗವಾಗಿರುವ ಅಟಲ್ ಇನೋವೆಷನ್ ಮಿಷನ್ ಸಹ ಮಿಲೇನಿಯಂ ಶಾಲೆಯಲ್ಲಿ ಈಗಾಗಲೇ ಕಾರ್ಯಾರಂಭಗೊಂಡಿದೆ ಎಂದು ಅವರು ತಿಳಿಸಿದರು.

ದೇಶದ ಬೆಂಗಳೂರು, ಮೈಸೂರು, ಚೆನ್ನೈ, ಹೈದ್ರಾಬಾದ್, ಲಕ್ನೋ, ಗೋವಾ (ಪಣಜಿ), ಮುಂಬಯಿ, ಮಂಗಳೂರು ಸೇರಿದಂತೆ ೧೧ ಮಹಾನಗರಗಳಲ್ಲಿ ಜ್ಞಾನ್ ಪ್ರೋ ಸಂಸ್ಥೆಯ ಶಾಖೆಗಳು ಇವೆ. ಈ ವರ್ಷದಿಂದ ಎರಡನೇ ಹಂತವಾಗಿ ದ್ವಿತೀಯ ಮಹಾನಗರಗಳನ್ನು ವ್ಯಾಪ್ತಿಗೆ ತರಲಾಗುತ್ತಿದೆ. ಇಲ್ಲಿಯವರೆಗೆ ೨೫೦ಕ್ಕಿಂತಲೂ ಹೆಚ್ಚು ಶಾಲೆಗಳು ಹಾಗೂ ೩ ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸಂಸ್ಥೆಯ ಫಲಾನುಭವಿಗಳಾಗಿದ್ದಾರೆ ಎಂದು ಅವವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಲ್ಯಾಣ ಕರ್ನಾಟಕ ಎಜುಕೇಶನ್ ಸೊಸೈಟಿ ಅಧ್ಯಕ್ಷ ಎಂ.ಎನ್. ಪಾಟೀಲ್ ಅವರು ಮಾತನಾಡಿ, ಪಠ್ಯಪುಸ್ತಕಕ್ಕೆ ಅನುಗುಣವಾಗಿ ಪ್ರಯೋಗಗಳನ್ನು ಶಿಕ್ಷಕರು ವಿದ್ಯಾರ್ಥಿಗಳ ಕೈಯಿಂದ ಮಾಡಿಸುತ್ತಾರೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಆಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಾ. ಶ್ರೀಶೈಲ್ ಘೂಳಿ, ಶಾಲಾ ಸಂಯೋಜನಾಧಿಕಾರಿ ಅಖಿಲೇಶ್ ದೇಶಪಾಂಡೆ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here