ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಉಚಿತ ತಿಂಗಳು ನೀರು ಪೂರೈಕೆ: ರಮೇಶ್

0
31

ಬೀದರ್: ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ನಿರಂತರವಾಗಿ ಒಂದು ತಿಂಗಳು ಕಾಲ ಟ್ಯಾಂಕರ್ ಮೂಲಕ ವಿವಿದ ಗ್ರಾಮಗಳಲ್ಲಿ ನೀರು ಪೂರೈಕೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕಾಧಿಕಾರಿ ರಮೇಶ್ ಸಿ. ಅವರು ತಿಳಿಸಿದರು.

ತಾಲ್ಲೂಕಿನ ಕಮಠಾಣಾ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಉಚಿತ ಕುಡಿಯುವ ನೀರಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಜಲಬಾಧೆ ಇರುವ ಗ್ರಾಮಗಳಿಗೆ ಉಚಿತವಾಗಿ ನೀರು ಪೂರೈಸುತ್ತಿದ್ದು, ಜನರ ಅಗತ್ಯಕ್ಕನುಸಾರವಾಗಿ ಟ್ಯಾಂಕರ್‌ಗಳ ಹೆಚ್ಚಳ ಮಾಡಲಾಗುವುದು. ನೀರು ಅತ್ಯಮೂಲವಾಗಿದ್ದು, ಜೀವನಕ್ಕೆ ಅತೀ ಅಗತ್ಯವಾಗಿದೆ. ನೀರಿನ ಮಹತ್ವ ಪ್ರತಿಯೊಬ್ಬರು ಅರಿತುಕೊಂಡು ಮಿತ ಬಳಕೆ ಕಡೆಗೆ ಗಮನ ಹರಿಸಬೇಕು ಎಂದು ಗ್ರಾಮಸ್ಥರಿಗೆ ಸಲಹೆ ಮಾಡಿದರು.

Contact Your\'s Advertisement; 9902492681

ಗಾದಗಿ, ಸಂಗನಳ್ಳಿ, ಜನವಾಡಾ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾಧಿಕಾರಿ ಸಿದ್ಧಾರೂಢ, ಆಂತರಿಕ ಲೆಕ್ಕ ಪರಿಶೋಧಕ ಚಂದ್ರಪ್ಪ, ಜ್ಞಾನವಿಕಾಸ ಅಧಿಕಾರಿ ರುಕ್ಮಿಣಿ, ಗಾದಗಿ ಮೇಲ್ವಿಚಾರಕಿ ರಂಗಮ್ಮ, ಕಮಠಾಣಾ ಮೇಲ್ವಿಚಾರಕ ಅಶೋಕ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here