ಕಂದಾಯ ಇಲಾಖೆಯ ರೊಟ್ಟಿ ನೌಕರರ ಸಂಘದ ಅಧ್ಯಕ್ಷ ಅಭ್ಯರ್ಥಿಯಾಗಿ ಘೋಷಣೆ

0
39

ಬೀದರ್: ನಗರದ ಹೋಟೆಲ್ ಬರೀದ್‌ಶಾಹಿಯಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾಯಿತ ಕಾರ್ಯಕಾರಿ ಮಂಡಳಿ ಸದಸ್ಯರ ಸಭೆಯಲ್ಲಿ ಕಂದಾಯ ಇಲಾಖೆಯ ರವೀಂದ್ರಕುಮಾರ್ ರೊಟ್ಟಿ ಇವರನ್ನು ೨೦೧೯-೨೦೨೪ನೇ ಸಾಲಿನ ನೌಕರರ ಸಂಘದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಯಿತು.

ಸಭೆಯಲ್ಲಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಾಂಡುರಂಗ್ ಬೆಲ್ದಾರ್ ಅವರು ಮಾತನಾಡಿ, ಅಭಿವೃದ್ಧಿಗಾಗಿ ರವೀಂದ್ರಕುಮಾರ ರೊಟ್ಟಿ ಸಮರ್ಥ ನಾಯಕರಾಗಿದ್ದಾರೆ. ಇಂದು ಸಮುದಾಯ ಭವನ ಹಾಳಾಗಿದೆ, ನೌಕರರ ಸಂಘದ ಲೆಕ್ಕ ಪತ್ರ ಕಗ್ಗಂಟಾಗಿದೆ. ಈ ಎಲ್ಲ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಘದಲ್ಲಿ ಪರಿವರ್ತನೆ ಅನಿವಾರ್ಯ ಎಂದರು.

Contact Your\'s Advertisement; 9902492681

ವಾಣಿಜ್ಯ ತೆರಿಗೆ ಇಲಾಖೆಯ ಪೃಥ್ವಿರಾಜ್ ಜೀವನ್ ಅವರು ಮಾತನಾಡಿ, ೨೧೫ ಮತದಾರರಿಗೆ ವಂಚನೆ ಮಾಡಿದವರಿಗೆ ಪಾಠ ಕಲಿಸಬೇಕಾಗಿದೆ. ನನ್ನ ಹೆಸರು ಸಹ ಮತದಾರರ ಪಟ್ಟಿಯಿಂದ ಹೊರ ಹಾಕಿ ಕೋರ್ಟ್ ಮೊರೆ ಹೋಗಿ ನ್ಯಾಯ ಪಡೆಯಲಾಗಿದೆ. ಇಂದು ನ್ಯಾಯ ಮತ್ತು ಸಮೃದ್ಧಿಗಾಗಿ ರವೀಂದ್ರಕುಮಾರ ರೊಟ್ಟಿ ನಮ್ಮ ನಾಯಕನಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವರಾಜ್ ಕಪಲಾಪೂರೆ ಅವರು ಮಾತನಾಡಿ, ಮಾತಿನಂತೆ ನಡೆಯದ ವ್ಯಕ್ತಿ ಇದ್ದು ಸತ್ತಂತೆ. ಹಿಂದಿನ ಅವಧಿಯಲ್ಲಿ ಕಾಳಸಂತೆ ಹೇಳತೀರದ್ದಾಗಿದೆ. ಅದನ್ನು ಬಯಲಿಗೆಳೆದು ನೌಕರರ ಹಿತ ಕಾಪಾಡಲು ರವೀಂದ್ರಕುಮಾರ್ ರೊಟ್ಟಿ ಅವರಿಗೆ ಆಧ್ಯಕ್ಷರೆಂದು ಘೋಷಣೆ ಮಾಡಿರುವುದು ಪ್ರಸ್ತುತ ಎಂದು  ಹೇಳಿದರು. ಇದಕ್ಕೆ ಸಭೆಯಲ್ಲಿ ಪಾಲ್ಗೊಂಡ ಚುನಾಯಿತ ಸದಸ್ಯರೆಲ್ಲರೂ ಚಪ್ಪಾಳೆ ತಟ್ಟಿ ಅನುಮೋದಿಸಿದರು.

ಸಮನ್ವಯ ಸಮಿತಿ ಸಂಚಾಲಕ ರಾಜಕುಮಾರ್ ಮಾಳಗೆ ಅವರು ಮಾತನಾಡಿ, ನಮ್ಮ ಹೋರಾಟ ಸಾಮಾಜಿಕ ಬದ್ಧತೆ ಹಾಗೂ ನೌಕರರ ಸ್ಪಂದನೆಗಾಗಿ ಮಾತ್ರ ಮೀಸಲಾಗಿದೆ. ನಮ್ಮ ನಡೆ ಕೇವಲ ಅಭಿವೃದ್ಧಿ ಕಡೆ ಎಂಬ ಘೋಷವಾಕ್ಯದೊಂದಿಗೆ ಮುನ್ನಡೆಯುತ್ತಿದ್ದೇವೆ. ಎಲ್ಲರು ಸಹಕರಿಸಲು ಎಂದು ಮನವಿ ಮಾಡಿದರು.

ಗೌರವ ಸನ್ಮಾನ ಸ್ವೀಕರಿಸಿದ ರವೀಂದ್ರಕುಮಾರ್ ರೊಟ್ಟಿ ಅವರು ಮಾತನಾಡಿ, ನಾನು ಈ ಹಿಂದೆ ಸಂಘದ ಸದಸ್ಯನಾಗಿ ಕೆಲಸ ನಿರ್ವಹಿಸಿರುವ ಅನುಭವ ಇದೆ. ಇಲ್ಲಿ ತಾವುಗಳೆಲ್ಲರೂ ನಮ್ಮ ಇಲಾಖೆಯ ಮೇಲಿಟ್ಟ ಗೌರವಕ್ಕೆ ಕೃತಜ್ಞತೆ, ನಿಮ್ಮ ಭಾವನೆಗೆ ಸ್ಪಂದಿಸಿ ನೌಕರರ ಹಿತ ಕಾಪಾಡಲು ಸಿದ್ದ. ಸಂಘಟನೆ, ಹೋರಾಟ, ಕಾರ್ಯತತ್ಪರತೆ ನಮ್ಮೆಲ್ಲರ ಮೂಲ ಮಂತ್ರವಾದಾಗ ಗುರಿ ಮುಟ್ಟಬಹುದು. ಇದು ಯಾರ ವಿರುದ್ಧವಲ್ಲ, ಜಿಲ್ಲಾ ಸರ್ಕಾರಿ ನೌಕರರ ಕಷ್ಟ ಕಾರ್ಪಣ್ಯಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ಸರ್ಕಾರದ ಹಲವು ಯೋಜನೆಗಳು ಕಾರ್ಯರೂಪಕ್ಕೆ ತರಬೇಕೆನ್ನುವ ಛಲಉಳ್ಳವನಾಗಿದ್ದು, ನಿಮ್ಮೆಲ್ಲರ ಆಶೀರ್ವಾದಕ್ಕಾಗಿ ವಿನಂತಿಸುತ್ತೇನೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ಸಮನ್ವಯ ಕೋರ್ ಕಮಿಟಿ ಅಧ್ಯಕ್ಷ ಶಿವಶಂಕರ್ ಟೋಕರೆ ಅವರು ಮಾತನಾಡಿ, ನೌಕರರ ಹಿತವೇ ನಮ್ಮ ಹಿತ. ಸಂಘದ ಸಾಂಘಿಕ ಹೋರಾಟವೆ ನಮ್ಮ ಬೆನ್ನೆಲುಬು. ಸಂಘದಲ್ಲಿ ಪರಿವರ್ತನೆಗಾಗಿ ರವೀಂದ್ರಕುಮಾರ ರೊಟ್ಟಿ ಅಧ್ಯಕ್ಷರೆಂದು ಘೋಷಣೆ ಮಾಡಿರುವುದು ಅತ್ಯಂತ ಪ್ರಸ್ತುತ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ಸಭೆಯಲ್ಲಿ ಚಂದ್ರಕಾಂತ್ ಶಿಕಾರಿ, ಗಣಪತಿ ಬಬಲಾದ್, ರಮೇಶ್, ಸುಹೇಲ್ ಅಹ್ಮದ್, ಪ್ರದೀಪ್, ಸುನಿಲ್, ವಿಜಯಕುಮಾರ್ ಸಿಂಧೆ, ಅನೀಲಕುಮಾರ್, ಸಂತೋಷರೆಡ್ಡಿ, ಸುಮತಿ ರುದ್ರ, ಪಾಂಡುರಂಗ್, ಸಂಜೀವಕುಮಾರ್, ದಿಲೀಪ್ ಸಂತೋಷ, ವಿಜಯಕುಮಾರ್, ಆಖೀದ್ ಅಹ್ಮದ್, ರಹೆಮಾನ್, ವಿಜಯಕೃಷ್ಣ, ಗೌರೆ ರಾಜಶೇಖರ್, ಮುದ್ದಗೊಂಡ ಸಂತೋಷ್, ಲಿಂಗರಾಜು ಸೇರಿದಂತೆ ಸುಮಾರು ೩೦ ಜನ ಕಾರ್ಯಕಾರಿಣಿ ಮಂಡಳಿ ಸದಸ್ಯರು ಪಾಲ್ಗೊಂಡು ತಮ್ಮ ಸಹಮತ ವ್ಯಕ್ತಪಡಿಸಿದರು. ಅಲ್ಲದೇ  ರವೀಂದ್ರಕುಮಾರ್ ರೊಟ್ಟಿ ಅವರಿಗೆ ಶಾಲು ಮತ್ತು ಹೂಮಾಲೆಯೊಂದಿಗೆ ಗೌರವಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here