ಸಗರ ಗ್ರಾಂ.ಪಂ ಅಧ್ಯಕ್ಷರಾಗಿ ಶರಣಮ್ಮ ಉಪಾಧ್ಯಕ್ಷರಾಗಿ ನಿಂಗಮ್ಮ ಆಯ್ಕೆ

0
38
ಶಹಾಪುರ: ತಾಲ್ಲೂಕಿನ ಸಗರ ಗ್ರಾಮದ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶರಣಮ್ಮ ಗಂಡ ಶಂಕ್ರಪ್ಪ ಪಾಗದ, ಉಪಾಧ್ಯಕ್ಷರಾಗಿ ನಿಂಗಮ್ಮ ಗಂಡ ಭೀಮಣ್ಣ ಉಮರದೊಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಗೌತಮ್ ಶಿಂಧೆ ಘೋಷಿಸಿದರು.
ಬಹಳ ದಿನಗಳ ನಂತರ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಭ್ಯರ್ಥಿಗಳು  ಅವಿರೋಧವಾಗಿ ಆಯ್ಕೆಯಾಗಿರುವುದು ಗ್ರಾಮಸ್ಥರಲ್ಲಿ ಹಾಗೂ ಹಿರಿಯ ಮುಖಂಡರಲ್ಲಿ ಸಂತಸ ತಂದಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸನಗೌಡ ಮಾಲಿಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಣ್ಣಾರಾಯ ರೂಗಿ, ಕಾರ್ಯದರ್ಶಿ ಕಾಳಪ್ಪ ಬಡಿಗೇರ,ಗ್ರಾಮದ ಹಿರಿಯ ಮುಖಂಡರಾದ ನಾಗನಗೌಡ ಸುಬೇದಾರ,ಲಿಂಗಣ್ಣ ಪಡಶೆಟ್ಟಿ ಸಿದ್ಧನಗೌಡ ಸುಬೇದಾರ,ಬಸವರಾಜ ಕನಗುಂಡ ಶಿವು ದೇಸಾಯಿ ಅಮೀನರೆಡ್ಡಿ ಮಲ್ಲೇದ ಪ್ರಕಾಶ ಪಡಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here