ಶಾರ್ಟ್ ಸರ್ಕ್ಯೂಟ್ ನಿಂದ ಮನೆಯ ವಸ್ತುಗಳು ಸೇರಿ 1 ಲಕ್ಷ ನಗದು ಭಸ್ಮ

0
29

ಕಲಬುರಗಿ: ನಗರದ ಗುಲ್ಲಾಬೌಡಿ ಪ್ರದೇಶದ ಡ್ರೈವರ್ ನಾಗಿರುವ ಸಿದ್ದಣ್ಣ ಎಂಬುವರ ಮನೆಯಲ್ಲಿ ಆಕಸ್ಮಿಕ  ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸಾಲ ಮಾಡಿ ತಂದ 1 ಲಕ್ಷ ರೂಪಾಯಿಗಳು ಸುಟ್ಟು ಭಸ್ಮವಾಗಿದ್ದು, ಘಟನೆಯಲ್ಲಿ ಯಾವುದೇ ಜೀವಕ್ಕೆ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.

ಸಿದ್ದಣ್ಣ ಅವರು ಪತ್ನಿ ಸಂಗೀತಾ ಸೇರಿದಂತೆ ಇಬ್ಬರು ಮಕ್ಕಳು ಮನೆಯಲ್ಲಿ ಇದ್ದ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಯಾವುದೇ ರೀತಿ ಜೀವಹಾನಿ ಉಂಟಾಗಿಲ್ಲ. ತೀರ ಬಡ ಕುಟುಂಬ ಇದ್ದಾಗಿದ್ದು, ಶಾರ್ಟ್ ಸರ್ಕ್ಯೂಟ್ನಿಂದಾಗಿ ದಿನ ಬಳಕೆಯ ವಸ್ತುಗಳು ಸುಟ್ಟು ಹೋಗಿರುವುದು ತೀರ ನೊಂದಿದ್ದಾರೆ.

Contact Your\'s Advertisement; 9902492681

ಅಲ್ಲದೇ ಸ್ವಸಹಾಯ ಸಂಘದಲ್ಲಿ 1 ಲಕ್ಷ ಸಾಲ ಪಡೆದು ಮನೆಯಲ್ಲಿ ಇಟ್ಟಿದ್ದು, ಘಟನೆಯಲ್ಲಿ ಹಣ ಸುಟ್ಟು ಹೋಗಿದೆ ಎಂದು ಸಂಗೀತಾ ತಿಳಿಸಿದ್ದಾರೆ. ಘಟನೆ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here