ಆಳಂದ: ತಾಲೂಕಿನ ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶವನ್ನು ಒಳಗೊಂಡು ಸಮಗ್ರವಾಗಿ ತಾಲೂಕು ಪ್ರದೇಶವನ್ನು ಅಭಿವೃದ್ಧಿಗೊಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅಭಿಪ್ರಾಯಪಟ್ಟರು.
ರವಿವಾರ ಮಾದನಹಿಪ್ಪರ್ಗಾ ಗ್ರಾಮದ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಗ್ರಾಮದ ಬಸ್ ನಿಲ್ದಾಣದವರೆಗಿನ ೨.೭೨ ಕೋಟಿ ರೂ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
ಮಾದನಹಿಪ್ಪರ್ಗಾ ಗ್ರಾಮವು ದಿನೇ ದಿನೇ ವೇಗವಾಗಿ ಬೆಳೆಯುತ್ತಿದೆ ಪ್ರಮುಖ ವ್ಯಾಪಾರ ಕೇಂದ್ರವಾಗಿ ಮಾರ್ಪಟ್ಟಿರುವುದರಿಂದ ಗ್ರಾಮದ ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಶಾಸಕತ್ವದ ಅವಧಿಯಲ್ಲಿ ಗ್ರಾಮಕ್ಕೆ ಇಲ್ಲಿಯವರೆಗೆ ೮ ಕೋಟಿಗಿಂತ ಹೆಚ್ಚಿನ ರೂ.ಗಳ ಕಾಮಗಾರಿ ಮಂಜೂರಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಭಿನವ ಶಿವಲಿಂಗ ಸ್ವಾಮೀಜಿ, ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ, ರಾಜಶೇಖರ ಮಲಶೆಟ್ಟಿ, ತಾ.ಪಂ ಸದಸ್ಯರಾದ ಬಸವರಾಜ ಸಾಣಕ, ಸಾತಪ್ಪ ಕೋಳಶೆಟ್ಟಿ, ಚಂದ್ರಾಮಪ್ಪ ಘಂಟೆ, ಗ್ರಾ.ಪಂ ಅಧ್ಯಕ್ಷೆ ವಿಜಯಲಕ್ಷ್ಮೀ ದುದ್ದಗಿ, ಎಲ್ಲ ಗ್ರಾ.ಪಂ ಸದಸ್ಯರು, ಕಲ್ಯಾಣಿ ಭಾಗೆಳ್ಳಿ, ವಿಶ್ವನಾಥ ಪರೇಣಿ, ಶೇಖರ ಪಾಟೀಲ, ಬಸವರಾಜ ಶಾಸ್ತ್ರೀ, ಶಿವಪ್ಪ ಕೋಳಶೆಟ್ಟಿ, ಶಿವಲಿಂಗಪ್ಪ ಮೈಂದರ್ಗಿ, ಸಿದ್ದಾರಾಮ ತೋಳನೂರ, ಲಿಂಗರಾಜ ಉಡಗಿ, ಗುರುಶಾಂತಪ್ಪ ಸೊನ್ನದ, ರಾಜಕುಮಾರ ಕುಂಬಾರ, ಧರೇಪ್ಪ ಗುಳಗಿ, ಸೋಮನಾಥ ಕೌಲಗಿ, ಗಣೇಶ ಓನಮಶೆಟ್ಟಿ, ಶಾಂತಮಲ್ಲಪ ಕಬಾಡಗಿ, ಶ್ರೀಮಂತ ಬಜಾರೆ, ಅಪ್ಪಾಶಾ ಮಳಗಿ, ಭೀಮಶ್ಯಾ ಅಂಜುಟಗಿ, ಅಡಿವೆಯ್ಯಾ ಸ್ವಾಮಿ, ಸೈಬಣ್ಣ ಹಣಮಶೆಟ್ಟಿ, ಶಂಕ್ರೆಪ್ಪ ಮುಗಳಿ, ಮಲ್ಲಿನಾಥ ಬಿಂಬಾಸೆ, ಪಿಎಸ್‌ಐ ಇಂದುಮತಿ ಸೇರಿದಂತೆ ಇತರರು ಇದ್ದರು.