ಅನುದಾನರಹಿತ ಶಾಲಾ ಆಡಳಿತ ಮಂಡಳಿಯಿಂದ ಭಿಕ್ಷಾಟನೆಗೆ ಕಲಬುರಗಿ ಚಲೋ

0
24

ಆಳಂದ: ಅನುದಾನ ರಹಿತ ಖಾಸಗಿ ಶಾಲೆಗಳಿಗೆ ೩೭೧(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ನೀಡುವಂತೆ ಕೋರಿ ಕಲಬುರ್ಗಿಯಲ್ಲಿ ಫೆ. ೯ರಂದು ಭಿಕ್ಷಾಟನೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ತಾಲೂಕು ಒಕ್ಕೂಟದ ಮುಖಂಡರು ಇಂದಿಲ್ಲಿ ಸಾಮೂಹಿಕವಾಗಿ ಘೋಷಿಸಿದರು.

ಪಟ್ಟಣದಲ್ಲಿ ಸೋಮವಾರ ಕರೆದ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಮುಖಂಡ ಬಾಬುರಾವ್ ಸುಳ್ಳದ ಅವರು, ಕಲ್ಯಾಣ ಕರ್ನಾಟಕಕ್ಕೆ ೩೭೧(ಜೆ) ವಿಧಿ ಜಾರಿಗೊಂಡು ಏಳು ವರ್ಷಗಳು ಕಳೆದರೂ ಸಹ ಈ ಭಾಗದ ಸ್ಥಿತಿ ಆಯೋಮಯವಾಗಿದೆ. ಹೀಗಾಗಿ ಹೋರಾಟ ಮಾಡಿ ಸೌಲಭ್ಯಗಳನ್ನು ಪಡೆಯುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಬರುವ ಆರು ಜಿಲ್ಲೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿರುವ ಪ್ರದೇಶಗಳಿಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ವಿರಳವಾಗಿದೆ, ಇದ್ದರೂ ಕೂಡಾ ಶೈಕ್ಷಣಿಕ ಗುಣಮಟ್ಟವಿಲ್ಲ. ಈ ಭಾಗ ಶೈಕ್ಷಣಿಕವಾಗಿ ಹಿಂದುಳಿದಿದ್ದು ಅಲ್ಲಿಯ ಮಕ್ಕಳು ಬಾಲ ಕಾರ್ಮಿಕರಾಗಿ/ ಬಾಲ್ಯವಿವಾಹಕ್ಕೊಳಗಾಗಿ ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅಲ್ಲದೆ ಅಲ್ಲಿರುವ ಖಾಸಗಿ ಅನುದಾನ ರಹಿತ ಶಾಲೆಗಳ ಆರ್ಥಿಕ ಪರಸ್ಥಿತಿ ಕಳೆದ ೨೫ ವರ್ಷಗಳಿಂದ ಸಂಕಷ್ಟದಲ್ಲಿದ್ದು ಶಿಕ್ಷಕರಿಗೆ ಸಂಬಳ ಕೋಡುವುದು ಕಷ್ಟವಾಗಿದೆ. ಆದ್ದರಿಂದ ಆ ಎಲ್ಲ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕೆಂದು ಅವರು ಒತ್ತಾಯಿಸಿದರು.

ಇನ್ನೊರ್ವ ಮುಖಂಡ ಮಲ್ಲಿಕಾರ್ಜುನ ಮಾಳಿ ಅವರು ಮಾತನಾಡಿ, ೧೯೯೫ರ ನಂತರದ ಅನೇಕ ಶಾಲೆಗಳು ಆಂಗ್ಲಮಾಧ್ಯಮ ಶಾಲೆಗಳಿಗಾಗಿ ಪರಿವರ್ತನೆಗೊಂಡಿದೆ, ಇನ್ನು ಕೆಲವು ಮಕ್ಕಳ ಸಂಖ್ಯೆ ಇಲ್ಲದೆ ಆರ್ಥಿಕ ದುಸ್ಥಿತಿಯಿಂದ ಬಾಗಿಲು ಮುಚ್ಚಿವೆ ಅದರಲ್ಲಿ ಕೆಲವೇ ಕೆಲವು ಶಾಲೆಗಳು ಉಳಿದುಕೊಂಡಿವೆ. ಹಾಗಾಗಿ ಉಳಿದ ಕನ್ನಡ ಮಾಧ್ಯಮ ಶಾಲೆಗಳ ರಕ್ಷಣೆಗಾಗಿ ಸರ್ಕಾರ ಮುಂದಾಗಿ ವೇತನಾನುದಾನವನ್ನು ನೀಡಬೇಕು ಎಂದರು.

ಈ ಭಾಗದ ಅಭಿವೃದ್ಧಿಗಾಗಿ ಸರ್ಕಾರ ೧೯೯೫ರಿಂದ ೨೦೧೫ರವರೆಗಿನ ಎಲ್ಲ ಕನ್ನಡ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸುವಂತೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಏಳಿಗೆಗಾಗಿ ಶೈಕ್ಷಣಿಕ ಕಲ್ಯಾಣ ನಿಧಿಯನ್ನು ಘೋಷಿಸುವಂತೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗಾಗಿ ಶೈಕ್ಷಣಿಕ ಅಭಿವೃದ್ಧಿ ಯೋಜನೆ ರೂಪಿಸುವಂತೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದರು.

ಮಂಜುನಾಥ ಬಿರಾದಾರ, ರಿಜವಾನ ಶೇಖ ಮಾತನಾಡಿ, ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ೧೦೦ ಸೈನಿಕ ಶಾಲೆಗಳನ್ನು ಘೋಷಿಸಿದ್ದು, ಅದರಲ್ಲಿ ಒಂದನ್ನಾದರೂ ಕಲ್ಯಾಣ ಕರ್ನಾಟಕಕ್ಕೆ ಕೊಡಬೇಕು ಎಂದು ಅವರು ಆಗ್ರಹಿಸಿದರು. ಎಲ್ಲ ಬೇಡಿಕೆಗಳನ್ನು ಮುಂಬರುವ ಬಜೆಟ್‌ನಲ್ಲಿ ಸರ್ಕಾರ ಘೋಷಿಸಬೇಕು. ಫೆಬ್ರವರಿ ೧೫ರೊಳಗೆ ಇಡೇರಬೇಕು. ಇಲ್ಲದೇ ಹೋದಲ್ಲಿ ಎಲ್ಲ ಶಾಲೆಗಳನ್ನು ಮುಚ್ಚಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಬೇಡಿಕೆಗಳ ಪ್ರಯುಕ್ತ ಸರ್ಕಾರದ ಗಮನಸೆಳೆಯಲು ಫೆಬ್ರವರಿ ೯ರಂದು ಅನುದಾನಕ್ಕಾಗಿ ಭಿಕ್ಷಾಟನೆ ಎಂಬ ಘೋಷಣೆಯಡಿ ಕಲಬುರ್ಗಿ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿಯವರೆಗೆ ಕಲ್ಯಾಣ ಕರ್ನಾಟಕದ ಎಲ್ಲ ಏಳು ಜಿಲ್ಲೆಗಳಿಂದ ಸುಮಾರು ೫೦೦೦ಕ್ಕೂ ಹೆಚ್ಚು ಜನ ಚಳುವಳಿಯಲ್ಲಿ ಪಾಲ್ಗೊಳ್ಳುವರು ಎಂದರು.

ಖಾಸಗಿ ಶಾಲಾ ಸಂಸ್ಥೆಗಳ ಮುಖ್ಯಸ್ಥ ಚಂದ್ರಶೇಖರ ಹಿರೇಮಠ, ಆನಂದ ಪಾಟೀಲ, ವೀರಯ್ಯ ಹಿರೇಮಠ, ಮಹಿಮುದಅಲ್ಲಿ ಯಾದಗಿರಿ, ಲಕ್ಷ್ಮೀಕಾಂತ ಮೇಲ್ಕರಿ, ಆಕಾಶ ಕೊಥಲಿ, ಗುರುಶರಣ ಬಿರಾದಾರ, ವಿಜಯಕುಮಾರ ಬಿರಾದಾರ ಮತ್ತು ಬಸವರಾಜ ಆಳಂದ ಇನ್ನಿತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here